ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್ 2 ಅಧಿಕೃತ ಟ್ರೈಲರ್ ಬಿಡುಗಡೆ
House Of The Dragon Season 2 Trailer: ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್ 2 ಅಧಿಕೃತ ಟ್ರೈಲರ್ ಜಾಗತಿಕವಾಗಿ ಬಿಡುಗಡೆ ಮಾಡಿದೆ.
House Of The Dragon Season 2 Trailer: ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್ 2 ಅಧಿಕೃತ ಟ್ರೈಲರ್ ಜಾಗತಿಕವಾಗಿ ಬಿಡುಗಡೆ ಮಾಡಿದೆ. ಜಿಯೊಸಿನಿಮಾ ಪ್ರೀಮಿಯಂನಲ್ಲಿ ವಿಶೇಷವಾಗಿ ಪ್ರಸಾರವಾಗುವ ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್ 2 ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿ ಜೂನ್ 17 ರಿಂದ ಲಭ್ಯವಿರುತ್ತಿದ್ದು ಪ್ರತಿ ಸೋಮವಾರ ಯು.ಎಸ್. ಸೇರಿದಂತೆ ಎಲ್ಲ ಕಡೆ ಪ್ರಸಾರವಾಗಲಿದೆ.
ಇದನ್ನೂ ಓದಿ: ನಟ ಧನುಷ್ ಸಲಿಂಗಕಾಮಿಯೇ? ಹಿರಿಯ ಗಾಯಕಿ ಪತಿಯ ಜೊತೆಗಿತ್ತೇ ಸಂಬಂಧ.! ಸ್ಟಾರ್ ಸಿಂಗರ್ ಕೊಟ್ಟ ಹೇಳಿಕೆ ವೈರಲ್ !
ಜಾರ್ಜ್ ಆರ್.ಆರ್. ಮಾರ್ಟಿನ್ ಅವರ “ಫೈರ್ ಅಂಡ್ ಬ್ಲಡ್” ಆಧರಿಸಿದ ಈ ಸರಣಿಯು ಹೌಸ್ ಟಾರ್ಗೇರಿಯನ್ ಕಥೆಯನ್ನು ಹೇಳುತ್ತಿದ್ದು, ಈ ರಾಜ ಕುಟುಂಬದಲ್ಲಿ ಅತ್ಯಂತ ಕಠಿಣ ಅಧಿಕಾರದ ಸಂಘರ್ಷಗಳ ನಂತರ ಕುಟುಂಬವು ಹೇಗೆ ರಾಜಕೀಯ ಒಳಸಂಚು, ಕೌಟುಂಬಿಕ ಶತ್ರುತ್ವಗಳನ್ನು ಎದುರಿಸಿ ಮುನ್ನಡೆಯುತ್ತವೆ ಮತ್ತು ಉಕ್ಕಿನ ಸಿಂಹಾಸನವನ್ನು ಮರಳಿ ಪಡೆಯಲು ಎದುರಾದ ಆಂತರಿಕ ಯುದ್ಧವನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದನ್ನು ಹೇಳುತ್ತದೆ. ಡ್ರ್ಯಾಗನ್ ಗಳು ಮತ್ತು ರಾಜವಂಶಗಳ ವಿಶ್ವದಲ್ಲಿರುವ ಈ ಸರಣಿಯು ಏಳು ರಾಜ್ಯಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಮುಖರ ಮಹತ್ವಾಕಾಂಕ್ಷೆ, ನಿಷ್ಠೆ ಮತ್ತು ವಂಚನೆಗಳ ಸಂಕೀರ್ಣ ಸಂಬಂಧಗಳ ಕಥೆ ಹೊಂದಿದೆ.
ಮ್ಯಾಟ್ ಸ್ಮಿತ್, ಒಲಿವಿಯಾ ಕೂಕ್, ಎಮ್ಮಾ ಡಿ’ಅರೇ, ಈವ್ ಬೆಸ್ಟ್, ಸ್ಟೀವ್ ಟೌಸ್ಸೇಂಟ್, ಫೇಬಿಯೆನ್ ಫ್ರಾಂಕೆಲ್, ಎವಾನ್ ಮಿಷೆಲ್, ಟಾಮ್ ಗ್ಲಿನ್ನ್-ಕಾರ್ನೀ ಸೊನೊಯಾ ಮಿಝುನೊ ಮತ್ತು ರಿಸ್ ಇಫಾನ್ಸ್ ತಾರಾಗಣ ಹೊಂದಿದೆ. ಹೆಚ್ಚುವರಿ ತಾರಾಗಣದಲ್ಲಿ ಹ್ಯಾರಿ ಕೊಲೆಟ್, ಬೆಥನಿ ಅಂಟೋನಿಯ, ಫೋಬ್ ಕ್ಯಾಂಪ್ ಬೆಲ್, ಫಿಯಾ ಸಬನ್, ಜೆಫರ್ಸನ್ ಹಾಲ್ ಮತ್ತು ಮ್ಯಾಥ್ಯೂ ನೀಧಂ ಇದ್ದಾರೆ. ಹೊಸ ಸೀಸನ್ ನಲ್ಲಿ ಅನುಬಕರ್ ಸಲೀಂ, ಗೇಯ್ಲ್ ರಂಕಿನ್, ಫ್ರೆಡ್ಡೀ ಫಾಕ್ಸ್, ಸಿಮನ್ ರಸೆಲ್ ಬೀಲ್, ಕ್ಲಿಂಟನ್ ಲಿಬರ್ಟಿ, ಜೆಮೀ ಕೆನ್ನಾ, ಕಿಯೆರನ್ ಬ್ಯೂ, ಟಾಮ್ ಬೆನೆಟ್, ಟಾಮ್ ಟೇಲರ್ ಮತ್ತು ವಿನ್ಸೆಂಟ್ ರೆಗಾನ್ ಇದ್ದಾರೆ.
ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್ 2 ಅನ್ನು ನೀವು ಜಿಯೊಸಿನಿಮಾದಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ: ಕರೀನಾ ಕಪೂರ್ ಹೆಸರಿನ ಹಚ್ಚೆ ತೆಗೆಸಿದ ಸೈಫ್ ಅಲಿ ಖಾನ್.. ಡಿವೋರ್ಸ್ ಚರ್ಚೆಗೆ ಕಾರಣವಾಯ್ತು ಈ ಫೋಟೋ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.