Dr Rajkumar: ಇಂದಿರಾಗಾಂಧಿ ವಿರುದ್ಧ ಚುನಾವಣೆಗೆ ನಿಲ್ಲಲು ಡಾ.ರಾಜಕುಮಾರ್ ನಿರಾಕರಿಸಿದ್ದು ಹೇಗೆ ?
ಡಾ.ರಾಜಕುಮಾರ್ ಕನ್ನಡದ ಸಾಂಸ್ಕೃತಿಕ ಪ್ರಜ್ಞೆ, ಹಾಗೂ ರಾಯಭಾರಿಯಾಗಿದ್ದರು.ಕನ್ನಡದ ಅಸ್ಮಿತೆ ಮೂಲಕ ವಿವಿಧ ಪ್ರದೇಶಗಳ ಮೂಲಕ ಹಂಚಿಹೋಗಿದ್ದ ಕರ್ನಾಟಕವನ್ನು ಬೆಸೆಯುವಲ್ಲಿ ಅವರು ಮಹತ್ವದ ಪಾತ್ರವನ್ನು ವಹಿಸಿದ್ದರು.ಅವರು ಕೇವಲ ಬೆಳ್ಳಿ ತೆರೆಯ ಮೇಲೆ ಅಷ್ಟೇ ಅಲ್ಲದೆ ತಮ್ಮ ಆಫ್ ಸ್ತ್ರೀನ್ ವ್ಯಕ್ತಿತ್ವದ ಮೂಲಕವೂ ಜನರ ಮನಸ್ಸನ್ನು ಗೆದ್ದಿದ್ದರು. ಇಂತಹ ಮಹಾನ್ ವ್ಯಕ್ತಿಯ ಜನ್ಮ ದಿನವನ್ನು ಇಂದು ಇಡೀ ಕರ್ನಾಟಕ ಸಂಭ್ರಮದಿಂದ ಆಚರಿಸುತ್ತದೆ .
ಬೆಂಗಳೂರು: ಡಾ.ರಾಜಕುಮಾರ್ ಕನ್ನಡದ ಸಾಂಸ್ಕೃತಿಕ ಪ್ರಜ್ಞೆ, ಹಾಗೂ ರಾಯಭಾರಿಯಾಗಿದ್ದರು.ಕನ್ನಡದ ಅಸ್ಮಿತೆ ಮೂಲಕ ವಿವಿಧ ಪ್ರದೇಶಗಳ ಮೂಲಕ ಹಂಚಿಹೋಗಿದ್ದ ಕರ್ನಾಟಕವನ್ನು ಬೆಸೆಯುವಲ್ಲಿ ಅವರು ಮಹತ್ವದ ಪಾತ್ರವನ್ನು ವಹಿಸಿದ್ದರು.ಅವರು ಕೇವಲ ಬೆಳ್ಳಿ ತೆರೆಯ ಮೇಲೆ ಅಷ್ಟೇ ಅಲ್ಲದೆ ತಮ್ಮ ಆಫ್ ಸ್ತ್ರೀನ್ ವ್ಯಕ್ತಿತ್ವದ ಮೂಲಕವೂ ಜನರ ಮನಸ್ಸನ್ನು ಗೆದ್ದಿದ್ದರು. ಇಂತಹ ಮಹಾನ್ ವ್ಯಕ್ತಿಯ ಜನ್ಮ ದಿನವನ್ನು ಇಂದು ಇಡೀ ಕರ್ನಾಟಕ ಸಂಭ್ರಮದಿಂದ ಆಚರಿಸುತ್ತದೆ .
ಒಂದು ಕಾಲ ಘಟ್ಟದಲ್ಲಿ ರಾಜಕುಮಾರ್ (Dr Rajkumar) ಅವರು ತಮ್ಮ ಚಲನಚಿತ್ರದ ಕರಿಯರ್ ಹಂತದಲ್ಲಿ ಉತ್ತುಂಗದಲ್ಲಿದ್ದಾಗ ಅವರನ್ನು ಅನೇಕ ಪಕ್ಷಗಳು ರಾಜಕೀಯಕ್ಕೆ ಕರೆತರಲು ಇನ್ನಿಲ್ಲದ ಪ್ರಯತ್ನವನ್ನು ಮಾಡಿದ್ದವು .ವಿಶೇಷವೆಂದರೆ, 1978 ರ ಲೋಕಸಭಾ ಉಪಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಸ್ಪರ್ಧಿಸಬೇಕೆಂದು ಜನತಾ ಪಕ್ಷ ಬಯಸಿತು. ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದ ಕಾರಣ, ಅವರಿಗೆ ಗೆಲುವು ಸುಲಭವಾಗುತ್ತದೆ ಎನ್ನುವುದು ಜನತಾ ಪಕ್ಷದ ಲೆಕ್ಕಾಚಾರವಾಗಿತ್ತು.
ಇದನ್ನೂ ಓದಿ: ಡಾ.ರಾಜ್ ಕುಮಾರ್ ಜನ್ಮದಿನದಂದು ಯುವ ರಾಜ್‌ಕುಮಾರ್ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ಈಗ ವಿಚಾರವಾಗಿ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಚುನಾವಣೆಯಿಂದ ಹೇಗೆ ತಪ್ಪಿಸಿಕೊಂಡರು ಎನ್ನುವ ವಿಚಾರವಾಗಿ ರಾಘವೇಂದ್ರ ರಾಜಕುಮಾರ್ ಅವರು ಮಾತನಾಡಿದ್ದಾರೆ.ಜನತಾ ಪಕ್ಷದ ನಾಯಕರು ರಾಜಕುಮಾರ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದರಿಂದ ರಾಜಕುಮಾರ್ ಅವರು ಒಂದು ವಾರಗಳ ಕಾಲ ಅಜ್ಞಾತರಾಗಿ ಅರಣ್ಯ ಅತಿಥಿಗೃಹವೊಂದಕ್ಕೆ ತೆರಳಿದ್ದರು.ನಾಮನಿರ್ದೇಶನ ದಿನಾಂಕ ಮುಗಿದ ನಂತರವೇ ಅವರು ಹಿಂದಿರುಗಿದರು ಎನ್ನುವ ವಿಷಯವನ್ನು ಹಂಚಿಕೊಂಡಿದ್ದಾರೆ.
"ನಾನು ಎರಡನೇ ಪಿಯು ಪೂರ್ಣಗೊಳಿಸಿ ವೈದ್ಯಕೀಯ ಕಾಲೇಜಿಗೆ ಸೇರಲು ತಯಾರಿ ನಡೆಸಿದ್ದೆ. ಈ ವಿಷಯದ ಬಗ್ಗೆ ನನ್ನ ತಂದೆವರನ್ನು ಕೇಳಲು ಬಯಸಿದೆ. ಆಗ ಇದಕ್ಕೆ ಪ್ರತಿಕ್ರಿಯಿಸಿದ ಅವರು 'ನೀನು ಅದನ್ನು ಅರ್ಥಮಾಡಿಕೊಳ್ಳುವಷ್ಟು ವಯಸ್ಸಾಗಿಲ್ಲ, ಆದ್ದರಿಂದ ಅದನ್ನು ಬಹಿರಂಗಪಡಿಸಲು ಸೂಕ್ತ ಸಮಯವಲ್ಲ. ಸೂಕ್ತ ಸಮಯದಲ್ಲಿ ಇದನ್ನು ನಾನು ಹೇಳುತ್ತೇನೆ.ನಿನಗೆ ಕವಿರತ್ನ ಕಾಳಿದಾಸ ನೆನಪಿದೆಯೇ? ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ " ಎಂದು ಅವರು ಹೇಳಿದ್ದರು ಎನ್ನುವ ವಿಚಾರವನ್ನು ರಾಘವೇಂದ್ರ ರಾಘವೇಂದ್ರ ರಾಜಕುಮಾರ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ನಟ ಸಾಮ್ರಾಟ್ ಡಾ.ರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ
1977 ರಲ್ಲಿ ಅವಮಾನಕರ ಸೋಲಿನ ನಂತರ ಮರುಚುನಾವಣೆ ಬಯಸುತ್ತಿದ್ದ ಇಂದಿರಾ ಗಾಂಧಿಯನ್ನು ಸೋಲಿಸುವ ಮೂಲಕ ಡಾ.ರಾಜ್ ಕುಮಾರ್ ಬಹುಶಃ ಇತಿಹಾಸವನ್ನು ರಚಿಸಬಹುದಿತ್ತು. ತಮಿಳುನಾಡಿನ ಎಂಜಿಆರ್ ಮತ್ತು ಆಂಧ್ರದಲ್ಲಿ ಎನ್‌ಟಿಆರ್ ಅವರಂತೆ ಡಾ.ರಾಜ್‌ಕುಮಾರ್ ಬಹುಶಃ ಮುಖ್ಯಮಂತ್ರಿಯಾಗಬಹುದಿತ್ತೆಂದು ರಾಜಕೀಯ ವೀಕ್ಷಕರು ಹೇಳುತ್ತಾರೆ. ಆದರೆಡಾ. ರಾಜ್‌ಕುಮಾರ್ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಾಗಿದ್ದರು. ಆದ್ದರಿಂದ, ಅವರು ಎಲ್ಲಾ ಪಕ್ಷಗಳಿಂದ ಪ್ರೀತಿ ಮತ್ತು ಗೌರವವನ್ನು ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.