ಡಾ.ರಾಜ್ ಕುಮಾರ್ ಜನ್ಮದಿನದಂದು ಯುವ ರಾಜ್‌ಕುಮಾರ್ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

 ಡಾ.ರಾಜ್‌ಕುಮಾರ್ ಅವರ ಮೊಮ್ಮಗ ಯುವ ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಚೊಚ್ಚಲ ಪ್ರವೇಶ ಮಾಡುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ನ್ನು ಅವರ ಅಜ್ಜ, ಡಾ.ರಾಜ್‌ಕುಮಾರ್ ಜನ್ಮದಿನದಂದು ಅನಾವರಣ ಮಾಡಿ' ನಿಮ್ಮ ಮುಂದೆ ಫಸ್ಟ್ ಲುಕ್ ಪೋಸ್ಟರ್ .. ಪ್ರೀತಿಸಿ , ಆಶೀರ್ವದಿಸಿ' ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

Last Updated : Apr 24, 2020, 06:58 PM IST
ಡಾ.ರಾಜ್ ಕುಮಾರ್ ಜನ್ಮದಿನದಂದು ಯುವ ರಾಜ್‌ಕುಮಾರ್ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ title=
Photo Courtsey : Twitter

ಬೆಂಗಳೂರು:  ಡಾ.ರಾಜ್‌ಕುಮಾರ್ ಅವರ ಮೊಮ್ಮಗ ಯುವ ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಚೊಚ್ಚಲ ಪ್ರವೇಶ ಮಾಡುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ನ್ನು ಅವರ ಅಜ್ಜ, ಡಾ.ರಾಜ್‌ಕುಮಾರ್ ಜನ್ಮದಿನದಂದು ಅನಾವರಣ ಮಾಡಿ' ನಿಮ್ಮ ಮುಂದೆ ಫಸ್ಟ್ ಲುಕ್ ಪೋಸ್ಟರ್ .. ಪ್ರೀತಿಸಿ , ಆಶೀರ್ವದಿಸಿ' ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಚಿತ್ರದ ಶೀರ್ಷಿಕೆಗೆ  'ಯುವ 01' ಹೆಸರಿಸಲಾಗಿದೆ, ವಿಶೇಷವೆಂದರೆ ಈ ಚಿತ್ರವನ್ನು ನಿರ್ದೇಶಿಸಿದವರು 'ಕೆಜಿಎಫ್ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಪುನೀತ್ , ಅವರು ಪ್ರಶಾಂತ್ ನೀಲ್ ಅವರೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅಷ್ಟೇ ಅಲ್ಲದೇ 'ಕೆಜಿಎಫ್' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ಚಿತ್ರದಲ್ಲಿ ಪಾತ್ರವನ್ನು ನಿರ್ವಹಿಸಲು ಯುವ ರಾಜ್‌ಕುಮಾರ್ ತಮ್ಮ ದೇಹವನ್ನು ದಂಡಿಸಿದ್ದಾರೆ.

ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮೊದಲು ಯುವ ರಾಜ್‌ಕುಮಾರ್ ಅವರ ತಂದೆ ರಾಘವೇಂದ್ರ ರಾಜ್‌ಕುಮಾರ್ ಅವರು ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.ರಾಘವೇಂದ್ರ ರಾಜ್‌ಕುಮಾರ್ ಅವರ ಮೊದಲ ಪುತ್ರ ವಿನಯ್ ಈಗಾಗಲೇ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಈಗ, ಅವರ ಎರಡನೇ ಮಗ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಆಗಲು ಸಿದ್ಧರಾಗಿದ್ದಾರೆ.

Trending News