Telugu actor Nagarjuna Bigg Boss Remuneration: ಎಲ್ಲಾ ಭಾಷೆಗಳಲ್ಲೂ ಸೂಪರ್ ರೆಸ್ಪಾನ್ಸ್ ಪಡೆಯುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಕನ್ನಡದಲ್ಲೂ ಅತಿ ಶೀಘ್ರದಲ್ಲೇ ತೆರೆಗೆ ಬರಲಿದೆ ಎಂಬ ಮಾತು ಕೇಳಿಬರುತ್ತಿದೆ. ತೆರೆಮರೆಯಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು ಸ್ಪರ್ಧಿಗಳ ಲಿಸ್ಟ್‌ ಕೂಡ ಸಿದ್ಧವಾಗುತ್ತಿದೆ ಎಂದು ಹೇಳಲಾಗುತ್ತಿದೆ.  


COMMERCIAL BREAK
SCROLL TO CONTINUE READING

ಈ ಎಲ್ಲದರ ಮಧ್ಯೆ ತೆಲುಗಿನಲ್ಲಿ 7 ಸೀಸನ್‌ʼಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಶೋ ಇದೀಗ 8ನೇ ಸೀಸನ್‌ʼಗೆ ಸಜ್ಜಾಗುತ್ತಿದೆ. ಸೀಸನ್ 7 ರಲ್ಲಿ, ಪಲ್ಲವಿ ಪ್ರಶಾಂತ್ ವಿನ್ನರ್ ಆಗಿ ಹೊರಹೊಮ್ಮಿದರೆ, ಧಾರಾವಾಹಿ ನಟ ಅಮರದೀಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.


ಇದನ್ನೂ ಓದಿ:  ಅನಿಲ್ ಕುಂಬ್ಳೆ ಪತ್ನಿ ಯಾರು ಗೊತ್ತಾ? ವಿಚ್ಛೇದಿತೆಯನ್ನೇ ವರಿಸಿದ್ದಲ್ಲದೆ ಕಾನೂನು ಹೋರಾಟ ಮಾಡಿ ಆಕೆಯ ಮಗಳನ್ನು ದತ್ತು ಪಡೆದಿದ್ರು ʼಜಂಬೋʼ


ಬಿಗ್ ಬಾಸ್ ತೆಲುಗು ಸೀಸನ್ 8 ಯಾವಾಗ ಆರಂಭವಾಗುತ್ತದೆ ಎಂದು ಎಲ್ಲರೂ ಕಾಯುತ್ತಿರುವ ಹಿನ್ನಲೆಯಲ್ಲಿ ಸ್ಟಾರ್ ಮಾ ಇತ್ತೀಚೆಗೆ ಬಿಗ್ ಬಾಸ್ 8 ರ ಪ್ರೋಮೋವನ್ನು ಬಿಡುಗಡೆ ಮಾಡಿತ್ತು. ಸ್ಪರ್ಧಿಗಳ ಪಟ್ಟಿ ಬಹುತೇಕ ಅಂತಿಮವಾಗಿದೆ.


ಟಾಲಿವುಡ್ ನಟ ಸಾಮ್ರಾಟ್ ನಾಗಾರ್ಜುನ ಕಳೆದ ಐದು ಸೀಸನ್‌ʼಗಳಲ್ಲಿ ಬಿಗ್ ಬಾಸ್ ತೆಲುಗು ಶೋ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಕನ್ನಡದಲ್ಲಿ ಕಿಚ್ಚನ ಖಡಕ್‌ ಮಾತಿನ ಶೈಲಿಯಂತೆ ತೆಲುಗಿನಲ್ಲಿ, ನಾಗಾರ್ಜುಕ ಅವರ ಡೈನಾಮಿಕ್ ಹೋಸ್ಟಿಂಗ್ ಶೈಲಿ ಪ್ರೇಕ್ಷಕರ ಮನ ಗೆದ್ದಿದೆ. 


ಬಿಗ್ ಬಾಸ್ ತೆಲುಗು ಸೀಸನ್‌ 8 ಮುಂದಿನ ತಿಂಗಳು ಪ್ರಸಾರವಾಗಲಿದೆ ಎಂದು ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರುವ ಸ್ಟಾರ್ ಮಾ ಚಾನೆಲ್ ಅಧಿಕೃತವಾಗಿ ಘೋಷಿಸಿದೆ. ಈ ಹೊಸ ಸೀಸನ್‌ʼನಲ್ಲಿ ನಾಗಾರ್ಜುನ ಸಂಭಾವನೆ ಮತ್ತೊಮ್ಮೆ ಕುತೂಹಲ ಮೂಡಿಸಿದೆ. 


ನಾಗಾರ್ಜುನ ಈ ಬಾರಿ ಭಾರೀ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಾರಿ ರೂ. 20 ಕೋಟಿಗಳ ಹೊರತಾಗಿ ರೂ. 30 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಕಳೆದ ಸೀಸನ್ʼನಲ್ಲಿ ನಾಗಾರ್ಜುನ ರೂ. 20 ಕೋಟಿ ಪಡೆದಿರುವುದಾಗಿ ವರದಿಯಾಗಿತ್ತು. ಆದರೆ ಇದೀಗ 30 ಕೋಟಿಗೆ ಸಂಭಾವನೆ ಹೆಚ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. 


ಇನ್ನೊಂದೆಡೆ ಬಿಗ್ ಬಾಸ್ ಶೋ ಶುರುವಾಗುತ್ತಿದ್ದಂತೆ ಕಿರುತೆರೆ ಅಭಿಮಾನಿಗಳೆಲ್ಲಾ ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿಯೂ ನಾಗಾರ್ಜುನ ಹೋಸ್ಟ್ ಮಾಡುತ್ತಿರುವುದರಿಂದ ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಏನೆಲ್ಲಾ ಹೊಸ ಟ್ವಿಸ್ಟ್ʼಗಳು ಇರಲಿದೆ ಎಂದು ಕಾದು ನೋಡುತ್ತಿದ್ದಾರೆ.


ಇದನ್ನೂ ಓದಿ: ಅನುಷ್ಕಾ ಮದುವೆಯಾಗಿದ್ದು ಕೊಹ್ಲಿಯನ್ನಲ್ಲ!! ʼರಾಹುಲ್‌ʼ ಎಂಬಾತನನ್ನು... ಇವರಿಬ್ಬರ ಮಧ್ಯೆ ಬಂದ ಈತ?


ತೆಲುಗಿನಲ್ಲಿ ಮೊದಲ ಸೀಸನ್ ಅನ್ನು ಯಂಗ್ ಟೈಗರ್ ಎನ್‌ ಟಿ ಆರ್ ಹೋಸ್ಟ್ ಮಾಡಿದ್ದರೆ, ನಂತರ ನ್ಯಾಚುರಲ್ ಸ್ಟಾರ್ ನಾನಿ ಎರಡನೇ ಸೀಸನ್ ಅನ್ನು ಹೋಸ್ಟ್ ಮಾಡಿದ್ದರು. ಅಕ್ಕಿನೇನಿ ನಾಗಾರ್ಜುನ ಮೂರನೇ ಸೀಸನ್‌ʼನಿಂದ ಬಿಗ್ ಬಾಸ್ ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ