ಅನುಷ್ಕಾ ಮದುವೆಯಾಗಿದ್ದು ಕೊಹ್ಲಿಯನ್ನಲ್ಲ!! ʼರಾಹುಲ್‌ʼ ಎಂಬಾತನನ್ನು... ಇವರಿಬ್ಬರ ಮಧ್ಯೆ ಬಂದ ಈತ ಯಾರು ಗೊತ್ತಾ?

Virat Kohli fake name: ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಕೂಡ ತಮ್ಮ ಮದುವೆ ವಿಚಾರವನ್ನು ಸೀಕ್ರೆಟ್‌ ಆಗಿಡಲು ಪ್ರಯತ್ನ ಮಾಡಿದ್ದರು. ಆದರೆ ಅದಾಗಲೇ ಆ ಸುದ್ದಿ ರಿವೀಲ್‌ ಆಗಿತ್ತು. ಇನ್ನು ವಿರಾಟ್ ಮತ್ತು ಅನುಷ್ಕಾ ಈ ವಿಷಯದಲ್ಲಿ ಯಶಸ್ವಿಯಾಗಿದ್ದರು. 

Written by - Bhavishya Shetty | Last Updated : Jul 27, 2024, 02:52 PM IST
    • ಡಿಸೆಂಬರ್ 2017ರಲ್ಲಿ ವಿರಾಟ್‌ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು
    • ಈ ಮದುವೆ ಇಟಲಿಯ ದ್ವೀಪವೊಂದರಲ್ಲಿ ಭಾರೀ ಗೌಪ್ಯವಾಗಿ ಆಯೋಜನೆಗೊಂಡಿತ್ತು
    • ಮದುವೆ ಸ್ಥಳದಲ್ಲಿ ಅನುಷ್ಕಾ ಮತ್ತು ವಿರಾಟ್ ಪರಸ್ಪರ ನಕಲಿ ಹೆಸರುಗಳಿಂದ ಸಂವಹನ ಮಾಡುತ್ತಿದ್ದರಂತೆ
ಅನುಷ್ಕಾ ಮದುವೆಯಾಗಿದ್ದು ಕೊಹ್ಲಿಯನ್ನಲ್ಲ!! ʼರಾಹುಲ್‌ʼ ಎಂಬಾತನನ್ನು... ಇವರಿಬ್ಬರ ಮಧ್ಯೆ ಬಂದ ಈತ ಯಾರು ಗೊತ್ತಾ? title=
File Photo

Virat Kohli fake name: ಡಿಸೆಂಬರ್ 2017ರಲ್ಲಿ,  ಟೀಂ ಇಂಡಿಯಾದ ಸ್ಟಾರ್‌ ಬಾಟ್ಸ್‌ʼಮನ್‌ ವಿರಾಟ್‌ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಮದುವೆಗೆ ಆಪ್ತರಷ್ಟೇ ಭಾಗಿಯಾಗಿ ಶುಭಕೋರಿದ್ದರು. 

ಇನ್ನು ಈ ಮದುವೆ ಇಟಲಿಯ ದ್ವೀಪವೊಂದರಲ್ಲಿ ಭಾರೀ ಗೌಪ್ಯವಾಗಿ ಆಯೋಜನೆಗೊಂಡಿತ್ತು. ಮಾಧ್ಯಮದವರಿಗೂ ಈ ಮದುವೆಗೆ ಪ್ರವೇಶ ನೀಡಿರಲಿಲ್ಲ.

ಇದನ್ನೂ ಓದಿ:  ಅನಿಲ್ ಕುಂಬ್ಳೆ ಪತ್ನಿ ಯಾರು ಗೊತ್ತಾ? ವಿಚ್ಛೇದಿತೆಯನ್ನೇ ವರಿಸಿದ್ದಲ್ಲದೆ ಕಾನೂನು ಹೋರಾಟ ಮಾಡಿ ಆಕೆಯ ಮಗಳನ್ನು ದತ್ತು ಪಡೆದಿದ್ರು ʼಜಂಬೋʼ

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಕೂಡ ತಮ್ಮ ಮದುವೆ ವಿಚಾರವನ್ನು ಸೀಕ್ರೆಟ್‌ ಆಗಿಡಲು ಪ್ರಯತ್ನ ಮಾಡಿದ್ದರು. ಆದರೆ ಅದಾಗಲೇ ಆ ಸುದ್ದಿ ರಿವೀಲ್‌ ಆಗಿತ್ತು. ಇನ್ನು ವಿರಾಟ್ ಮತ್ತು ಅನುಷ್ಕಾ ಈ ವಿಷಯದಲ್ಲಿ ಯಶಸ್ವಿಯಾಗಿದ್ದರು. 

ಅಂದಹಾಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸೆಂಬರ್ 11, 2017 ರಂದು ಇಟಲಿಯ ಟಸ್ಕನಿಯಲ್ಲಿ ವಿವಾಹವಾದರು. ಮದುವೆಗೆ ಎರಡು ದಿನಗಳ ಮೊದಲು ಮಾಧ್ಯಮಗಳಲ್ಲಿ ಊಹಾಪೋಹಗಳು ಬಿತ್ತರವಾಗ ತೊಡಗಿತು. ಆದರೆ ಈ ವರದಿಗಳನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ. 

ಅದಾದ ಬಳಿಕ ಇದ್ದಕ್ಕಿದ್ದಂತೆ ಡಿಸೆಂಬರ್ 11 ರಂದು ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಮದುವೆಯ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. 

ಇನ್ನು ಮದುವೆ ಸ್ಥಳದಲ್ಲಿ ಅನುಷ್ಕಾ ಮತ್ತು ವಿರಾಟ್ ಪರಸ್ಪರ ನಕಲಿ ಹೆಸರುಗಳಿಂದ ಸಂವಹನ ಮಾಡುತ್ತಿದ್ದರಂತೆ.  ಹೀಗಂತ ಸ್ವತಃ ಅನುಷ್ಕಾ ಶರ್ಮಾ ಸಂದರ್ಶನವೊಂದರಲ್ಲಿ ಹೇಳಿದ್ದರು. ವಿಶೇಷವಾಗಿ ಸಿಬ್ಬಂದಿ ಮತ್ತು ಅಡುಗೆ ಮಾಡುವವರ ಮುಂದೆ. ಅನುಷ್ಕಾ ವಿರಾಟ್ ಕೊಹ್ಲಿಯನ್ನು ರಾಹುಲ್ ಎಂಬ ಹೆಸರಿನಿಂದ ಕರೆಯುತ್ತಿದ್ದರಂತೆ. 

ಇದನ್ನೂ ಓದಿ:  ನಮ್ಮನ್ನು ಸರ್ವನಾಶ ಮಾಡುವುದು ಕುಮಾರಸ್ವಾಮಿ ಅವರ ನಿತ್ಯದ ಆಲೋಚನೆ: ಡಿಸಿಎಂ ಡಿಕೆ ಶಿವಕುಮಾರ್

ಇದೇ ಕಾರಣದಿಂದ ಅವರ ಮದುವೆಯ ಸುದ್ದಿ ಮಾಧ್ಯಮಗಳಿಂದ ಮರೆಯಾಗಿತ್ತು. ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ, ವಿರಾಟ್ ಮತ್ತು ಅನುಷ್ಕಾ ತಮ್ಮ ಮದುವೆಯ ಪ್ರತಿಯೊಂದು ವಿಧಿಯನ್ನು ಆನಂದಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News