Karthik Mahesh: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಮುಗಿದು ಹಲವು ದಿನಗಳೇ ಆಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಕಾರ್ತಿಕ್ ಮಹೇಶ್ ವಿನ್ನರ್‌ ಆಗಿದ್ದರು. ಬಿಗ್‌ ಬಾಸ್‌ ಗೆಲುವಿನ ಬಳಿಕ ಕಾರ್ತಿಕ್ ಮಹೇಶ್ ಸಿಕ್ಕಾಪಟ್ಟೆ ಫೇಮಸ್‌ ಆದರು. ಹೊಸ ಸಿನಿಮಾಗಳ ಆಫರ್‌ ಕೂಡ ಬರುತ್ತಿರುವುದು ಅವರ ಫ್ಯಾನ್ಸ್‌ಗೆ ಖುಷಿ ತಂದಿದೆ. ಈ ಮಧ್ಯೆ ಕಾರ್ತಿಕ್ ಮಹೇಶ್ ತಮಗೆ ಬಿಗ್‌ ಬಾಸ್‌ ನಿಂದ ಬಂದ ಹಣದ ಬಗ್ಗೆ ಮಾತನಾಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಾರಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ವಿನ್ನರ್‌ ಕಾರ್ತಿಕ್ ಅವರಿಗೆ 50 ಲಕ್ಷ ರೂಪಾಯಿ ಬಹುಮಾನದ ಮೊತ್ತದ ಜೊತೆಗೆ ಬ್ರೇಜಾ ಕಾರು‌ ಮತ್ತು ಎಲೆಕ್ಟ್ರಿಕ್ ಬೈಕ್ ಕೂಡ ಸಿಕ್ಕಿತ್ತು. ಎಲೆಕ್ಟ್ರಿಕ್ ಬೈಕ್ ಬಂದಿದ್ದು, ಮಾರುತಿ ಸುಜುಕಿ ಬ್ರೇಜಾ ಕಾರು ಇನ್ನೂ ಅವರ ಕೈ ಸೇರಿಲ್ಲ.


ಇದನ್ನೂ ಓದಿ: ಅಭಿಷೇಕ್‌ ಬಚ್ಚನ್‌ ಜೊತೆಗಿಲ್ಲ ಐಶ್ವರ್ಯಾ ರೈ..‌ ಮಗಳೊಂದಿಗೆ ಗಂಡನ ಮನೆ ಬಿಟ್ಟು ಬಂದಿದ್ದೇ ನಿಜ! ಆನಿವರ್ಸರಿ ದಿನವೇ ಬಯಲಾಯ್ತು ಎಲ್ಲ ಸತ್ಯ!! 


ಈ ಬಗ್ಗೆ ಕಾರ್ತಿಕ್ ಮಹೇಶ್ ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ. ಜೊತೆಗೆ ಎಷ್ಟು ಹಣ ಸಿಕ್ಕಿದೆ ಎಂಬ ಬಗ್ಗೆ ತಿಳಿಸಿದ್ದಾರೆ. ಕಾರ್ತಿಕ್ ಮಹೇಶ್,  ಬ್ರೇಜಾ ಕಾರು ಬರೋಕೆ ಇನ್ನೂ ಐದಾರು ತಿಂಗಳು ಕಾಯಬೇಕು. ಇದಕ್ಕೆ ಇನ್ನೂ ಟೈಮ್‌ ತಗೊಳ್ಳುತ್ತೆ.  ಮನೆ ನೋಡ್ತಾ ಇದ್ದೇನೆ. ಬಿಗ್ ಬಾಸ್ʼನಿಂದ ಬಂದ ಹಣದಲ್ಲಿ ಮನೆ ಕಟ್ಟಲು ಆಗಲ್ಲ. ಬೆಂಗಳೂರಲ್ಲಿ ಮನೆ ಕಟ್ಟಬೇಕು ಎಂದರೆ ಬಿಗ್ ಬಾಸ್ ಹಣ ಎಲ್ಲಿಯೂ ಸಾಕಾಗಲ್ಲ. ನಾನು ಸಹ ದುಡಿಬೇಕು ಎಂದು ಕಾರ್ತಿಕ್‌ ಮಹೇಶ್‌ ಹೇಳಿದ್ದಾರೆ. 


50 ಲಕ್ಷ ಗೆದ್ದಿದ್ದೇನೆ ನಿಜ. ಅದರೆ ಅದರಲ್ಲಿ ಪೂರ್ತಿ 50 ಲಕ್ಷ ನಮ್ಮ ಕೈ ಸೇರಲ್ಲ. 35 ಲಕ್ಷ ರೂಪಾಯಿ ಮಾತ್ರ ಬರುತ್ತದೆ. 15 ಲಕ್ಷ ರೂಪಾಯಿ ಟ್ಯಾಕ್ಸ್​ ಡಿಡೆಕ್ಟ್‌ ಆಗುತ್ತದೆ. ಹಂತ ಹಂತವಾಗಿ ಹಣ ಬಂದು ಕೈ ಸೇರುತ್ತಿದೆ ಎಂದಿದ್ದಾರೆ. 


ಇದನ್ನೂ ಓದಿ: ನಯನತಾರಾ ಹಾಕಿರುವ ಈ ಚಿನ್ನದ ವಾಚ್ ಬೆಲೆ ಎಷ್ಟು ಕೋಟಿ ಗೊತ್ತೇ ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.