ನಯನತಾರಾ ಹಾಕಿರುವ ಈ ಚಿನ್ನದ ವಾಚ್ ಬೆಲೆ ಎಷ್ಟು ಕೋಟಿ ಗೊತ್ತೇ ?

Nayanthara watch price: ಸೌತ್‌ ಬ್ಯೂಟಿ ನಯನತಾರಾ ಖಾಸಗಿ ಜೆಟ್‌, ದುಬಾರಿ ಬಂಗಲೆ ಮತ್ತು ಕಾರುಗಳನ್ನು ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ. 

Written by - Chetana Devarmani | Last Updated : Apr 18, 2024, 03:33 PM IST
  • ಸೌತ್‌ ಬ್ಯೂಟಿ ನಯನತಾರಾ
  • ನಯನತಾರಾ ವಾಚ್‌ ಬ್ರ್ಯಾಂಡ್‌
  • ನಯನತಾರಾ ವಾಚ್‌ ಬೆಲೆ
ನಯನತಾರಾ ಹಾಕಿರುವ ಈ ಚಿನ್ನದ ವಾಚ್ ಬೆಲೆ ಎಷ್ಟು ಕೋಟಿ ಗೊತ್ತೇ ? title=

Nayanthara watch price: ಸೌತ್‌ ಬ್ಯೂಟಿ ನಯನತಾರಾ ಖಾಸಗಿ ಜೆಟ್‌, ದುಬಾರಿ ಬಂಗಲೆ ಮತ್ತು ಕಾರುಗಳನ್ನು ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ನಯನತಾರಾ ಕುಟುಂಬದವರು ತೊಡುವ ಬಟ್ಟೆಯಿಂದ ಹಿಡಿದು ಬಳಸುವ ಬ್ಯಾಗ್ ವರೆಗೆ ಎಲ್ಲವೂ ಬಹುಬೆಲೆಯ ಬ್ರ್ಯಾಂಡ್‌ಗಳೇ ಆಗಿವೆ. ಇದೀಗ ನಯನತಾರಾ ಧರಿಸುವ ವಾಚ್‌ ಅತ್ಯಂತ ದುಬಾರಿ ಬ್ರಾಂಡ್‌ಗೆ ಸೇರಿದೆ. 

ನಯನತಾರಾ ಚೆನ್ನೈನಲ್ಲಿ ಸಿನಿಮಾ ಥಿಯೇಟರ್ ಒಂದನ್ನು ಖರೀದಿಸಿದ್ದರು. ಇದೀಗ ತನಗಾಗಿ ಹೊಸ ಆಫೀಸ್ ಕಟ್ಟಡವನ್ನು ನಿರ್ಮಿಸಿಕೊಂಡಿದ್ದಾರೆ. ಇದೀಗ ನಯನತಾರಾ ವಾಚ್ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ನಯನತಾರಾ ರೋಲೆಕ್ಸ್ ವಾಚ್ ಧರಿಸಿದ್ದಾರೆ. ಈ ವಾಚ್ ರೋಲೆಕ್ಸ್ ಆಯ್ಸ್ಟರ್ ಪರ್ಪೆಚುಯಲ್ ಬ್ರಾಂಡ್ʼನದ್ದಾಗಿದೆ.  

ಇದನ್ನೂ ಓದಿ: Shilpa Shetty: ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ED ಬಿಗ್‌ ಶಾಕ್‌.. 98 ಕೋಟಿ ಮೌಲ್ಯದ ಆಸ್ತಿ ಜಪ್ತಿ ! 

luxurywatchesusa.com ವೆಬ್‌ಸೈಟ್ ಪ್ರಕಾರ, ನಯನತಾರಾ ಧರಿಸಿರುವ ಈ ವಾಚ್‌ನ ಬೆಲೆ $5,000 ರಿಂದ $38,000 US ಡಾಲರ್‌ಗಳಷ್ಟಿದೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ ಇದರ ಬೆಲೆ ಸುಮಾರು ಅರ್ಧ ಕೋಟಿ. ಬಹುಕಾಂತೀಯ ಡಯಲ್ 18 ಕ್ಯಾರೆಟ್ ಚಿನ್ನದ್ದಾಗಿದೆ. ಆಯ್ಸ್ಟರ್ ಪರ್ಪೆಚುಯಲ್ ಸಿಲ್ವರ್ ಮತ್ತು ಸ್ಟೇನ್‌ಲೆಸ್ ಸ್ಟೀಲ್ ಡಯಲ್‌ಗಳಲ್ಲಿ ಲಭ್ಯವಿದೆ. ಬೆಳ್ಳಿಯ ಡಯಲ್ ಅಗ್ಗವಾಗಿದೆ. ಸ್ಟೇನ್ಲೆಸ್ ಸ್ಟೀಲ್ ಮಾದರಿ ಹೆಚ್ಚು ದುಬಾರಿಯಾಗಿದೆ. 

ವಿಘ್ನೇಶ್ ಶಿವನ್ ಅವರು ನಯನತಾರಾ ಅವರ ಹುಟ್ಟುಹಬ್ಬದಂದು ಕೋಟ್ಯಂತರ ರೂಪಾಯಿ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಬರ್ತ್ ಡೇ ಗಿಫ್ಟ್ ಆಗಿ ರೂ.2.69 ಕೋಟಿ ಮೌಲ್ಯದ ಮರ್ಸಿಡಿಸ್ ಮೇಬ್ಯಾಕ್ ಮಾಡೆಲ್ ಕಾರನ್ನು ಪಡೆದಿರುವ ನಯನ ಈಗ ದುಬಾರಿ ವಾಚ್ ನಿಂದ ಬಣ್ಣ ಹಚ್ಚುತ್ತಿದ್ದಾರೆ.

ಇದನ್ನೂ ಓದಿ: ದ್ವಾರಕೀಶ್‌ ಕೊನೆಯ ಆಸೆ ಈಡೇರಿಸಿದ ನಟಿ ಶ್ರುತಿ ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News