ನವದೆಹಲಿ: ಮೋಹಕ ನಟಿ ಸನ್ನಿ ಲಿಯೋನ್ (Sunny Leone) ಮತ್ತು ಅವರ ಪತಿ ಡೇನಿಯಲ್ ವೆಬರ್ ಇತ್ತೀಚಿನ ಡೇಟ್ ನೈಟ್ ಸದ್ಯಕ್ಕೆ ಚರ್ಚೆಯ ವಿಷಯವಾಗಿದೆ. ಲಾಕ್​ಡೌನ್ ವೇಳೆ ಸನ್ನಿ ಲಿಯೋನ್ ಡೇಟ್ ನೈಟ್ ಗಾಗಿ ಎಲ್ಲಿ ಹೋಗಿದ್ರು ಅಂತ ಯೋಚನೆ ಮಾಡ್ತಾ ಇದ್ದೀರಾ....: ಲಾಕ್​ಡೌನ್ ಮಧ್ಯೆ ಸನ್ನಿ ಲಿಯೋನ್ ಆರಿಸಿಕೊಂಡ ಡೇಟ್ ನೈಟ್ ಸ್ಥಳದ ಬಗ್ಗೆ ತಿಳಿದರೆ ನಿಮಗೂ ಆಶ್ಚರ್ಯವಾಗಬಹುದು. ಈ ಬಗ್ಗೆ ಚಿತ್ರದೊಂದಿಗೆ ಸ್ಪಷ್ಟವಾಗಿ ಮಾಹಿತಿ ನೀಡಿರುವ ಸನ್ನಿ ಲಿಯೋನ್ “ಡೇನಿಯಲ್ ಜೊತೆ ಡೇಟ್ ನೈಟ್ !! ಲಾಲ್ ಊಟದ ಕೋಣೆಯಲ್ಲಿ... ” ಎಂದು ಬರೆದಿದ್ದಾರೆ. ದಂಪತಿಗಳು ಈ ಸುಮಧುರ ಕ್ಷಣವನ್ನು ಕಳೆಯಲು ವೈನ್ ಜೊತೆಗೆ ಬೆಸ್ಟ್ ಬ್ಲಾಕ್ ಉಡುಗೆ ಆರಿಸಿಕೊಂಡಿದ್ದಾರೆ.


VIDEO: ಫುಟ್ಬಾಲ್ ಆಡುತ್ತಿದ್ದ Sunny Leoneಗೆ ವ್ಯಕ್ತಿಯೋರ್ವ ಕೇಳಿದ ಪ್ರಶ್ನೆ ಏನು ಗೊತ್ತಾ..!


COMMERCIAL BREAK
SCROLL TO CONTINUE READING

ಡೇನಿಯಲ್ ಕೂಡ ತನ್ನ ಇನ್ಸ್ಟಾಗ್ರಾಮ್ ಪುಟದಲ್ಲಿ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಅದಕ್ಕೆ  "ಕ್ಯಾರೆಂಟೈನ್ ನ 40 ನೇ ದಿನ !!! ಆಕೆ ಡೇಟ್ ಮಾಡಬಹುದಾದ ಏಕೈಕ ವ್ಯಕ್ತಿ ನಾನೂ ಎಂದು ಅವಳು ಕಡೆಗೂ ಅರಿತುಕೊಂಡಳು" ಎಂದು ಬರೆದಿದ್ದಾರೆ.


ಕೆಳಗಿನ ಚಿತ್ರವನ್ನು ನೋಡಿ:




ಸನ್ನಿ ಮತ್ತು ಡೇನಿಯಲ್ ಮದುವೆಯಾಗಿ ಒಂಬತ್ತು ವರ್ಷಗಳಾಗಿದ್ದು ಈ ದಂಪತಿಗೆ ಮೂವರು ಮಕ್ಕಳಿದ್ದಾರೆ - ಮಗಳು ನಿಶಾ ಮತ್ತು ಅವಳಿ ಹುಡುಗರಾದ ನೋವಾ ಮತ್ತು ಆಶರ್.


ಲಾಕ್​ಡೌನ್ ಮಧ್ಯೆ ಸನ್ನಿ ತನ್ನ ಹೊಸ ಕಾರ್ಯಕ್ರಮ 'ಲಾಕ್ಡ್ ಅಪ್ ವಿಥ್ ಸನ್ನಿ' ಯಲ್ಲಿ ನಿರತರಾಗಿದ್ದಾಳೆ, ಇದರಲ್ಲಿ ಅವರು ಲೈವ್‌ಗೆ ಹೋಗುವ ಮೂಲಕ ಸೆಲೆಬ್ರಿಟಿಗಳೊಂದಿಗೆ ಸಂವಹನ ನಡೆಸುತ್ತಾರೆ. ಪ್ಲಾಟ್‌ಫಾರ್ಮ್ ಮೂಲಕ ಅತಿಥಿಗಳು ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಹೇಗೆ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ ಎಂಬುದನ್ನು ಚರ್ಚಿಸುತ್ತಾರೆ.