ನಿಮ್ಮ Love ನಿಜವೋ.. ಸುಳ್ಳೋ.. ಅಂತ ಈ ʼಕಿತ್ತಳೆ ಸಿಪ್ಪೆ ಸಿದ್ಧಾಂತʼ ತಿಳಿಸುತ್ತದೆ..! ತಮಾಷೆ ಅಲ್ಲ ಗುರು
Orange Peel Theory : ನೀವು ಇಷ್ಟ ಪಡುವ ಮಹಿಳೆ/ಪುರುಷ ನಿಮ್ಮನ್ನು ಪ್ರೀತಿಸುತ್ತಿದ್ದಾರಾ.. ಇಲ್ಲವೋ.. ಅಂತ ತಿಳಿಯಲು ಮಾಟ, ಮಂತ್ರ, ತಂತ್ರದ ಮೊರೆ ಹೋಗಬೇಕಿಲ್ಲ. ಜಸ್ಟ್ ಈ ಕಿತ್ತಳೆ ಸಿದ್ದಾಂತ ಅದನ್ನು ನಿಖರವಾಗಿ ಹೇಳುತ್ತದೆ. ಅಯ್ಯೋ..! ಇದು ಹೇಗೆ ಸಾಧ್ಯ ಅಂತ ಬಾಯ್ತೆರೆದು ನೋಡುವ ಬದಲು ಸಂಪೂರ್ಣವಾಗಿ ಸುದ್ದಿ ಓದಿ ನಿಮಗೆ ಅರ್ಥವಾಗುತ್ತದೆ.
True Love test : ಇಂದು ಪ್ರತಿಯೊಬ್ಬರೂ ನಿಜವಾದ ಪ್ರೀತಿಯ ಹುಡುಕಾಟದಲ್ಲಿದ್ದಾರೆ. ಕೆಲವರು ಇದಕ್ಕಾಗಿ ಮಾಟ, ಮಂತ್ರ, ತಂತ್ರದ ಮೊರೆ ಹೋಗುತ್ತಾರೆ. ಇನ್ನು ಕೆಲವರು ಅನೇಕ ವಿಧಾನಗಳನ್ನು ಬಳಸುತ್ತಾರೆ. ಆದರೆ ಅವರು ನಿಜವಾದ ಪ್ರೀತಿಯನ್ನು ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇಂದು ನಾವು ನಿಮಗೆ ನಿಮ್ಮ ಪ್ರೀತಿ ನಿಜವೋ.. ಸುಳ್ಳೋ... ಎನ್ನುವುದನ್ನು ಕಿತ್ತಳೆ ಹಣ್ಣಿನ ಸಿಪ್ಪೆಯ ಮೂಲಕ ತಿಳಿಯುವುದು ಹೇಗೆ ಅಂತ ಹೇಳಿಕೊಡುತ್ತೇವೆ. ಸಧ್ಯ ಈ ವಿಚಿತ್ರ ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಜನರು ಅದನ್ನು ಪ್ರಯತ್ನಿಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಟಿಕ್ಟಾಕ್ನಲ್ಲಿ ಹೊಸ ಟ್ರೆಂಡ್ ಪ್ರಾರಂಭವಾಗಿದೆ. ಇದರಲ್ಲಿ ಜನರು ತಮ್ಮ ಲವ್ ಸತ್ಯವೋ ಅಥವಾ ಸುಳ್ಳೋ ಎಂದು ತಿಳಿಯಲು ಬಯಸುತ್ತಿದ್ದಾರೆ. ಇದನ್ನು ಕಿತ್ತಳೆ ಸಿಪ್ಪೆಯ ಸಿದ್ಧಾಂತ ಎಂದು ಕರೆಯಲಾಗುತ್ತದೆ. ಇದೀಗ ಈ 'ಕಿತ್ತಳೆ ಸಿಪ್ಪೆಯ ಸಿದ್ಧಾಂತ' ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ?
ಇದನ್ನೂ ಓದಿ:ಹೊಳೆಯುವ ಕೋಮಲ ತ್ವಚೆಗಾಗಿ ರಾತ್ರಿ ಮಲಗುವ 5 ನಿಮಿಷ ಮೊದಲು ಈ ಕೆಲಸ ಮಾಡಿದರೆ ಸಾಕು
ಈ ಸಿದ್ಧಾಂತದ ಪ್ರಕಾರ.. ನಿಮ್ಮ ಸಂಗಾತಿ ನಿಮ್ಮನ್ನು ಕೇಳದೆ ನಿಮಗಾಗಿ ಕಿತ್ತಳೆ ಸಿಪ್ಪೆ ಸುಲಿದರೆ, ನಿಮ್ಮ ಸಂಗಾತಿ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ ಅಂತ ಅರ್ಥ.. ಏಕೆಂದರೆ ಅವಳು ನಿಮ್ಮ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ ಮತ್ತು ನಿಮ್ಮ ಮೇಲೆ ಹೆಚ್ಚಿನ ಪ್ರೀತಿ ಹೊಂದಿದ್ದಾಳೆ ಅಂತ ತಿಳಿದುಕೊಳ್ಳಿ. ಸಧ್ಯ ಈ ಸಿದ್ಧಾಂತ ಇನ್ಸ್ಟಾಗ್ರಾಮ್ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಅಲ್ಲದೆ, ಜನರು ಇದನ್ನು ಪ್ರಯತ್ನಿಸಿ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ.
ಅದರಂತೆ ಕೆಲವು ಪುರುಷರು ಮತ್ತು ಮಹಿಳೆಯರು ತಮಗಾಗಿ ತಮ್ಮ ಸಂಗಾತಿ ಕಿತ್ತಳೆ ಸುಲಿದು ತಿನ್ನು ಕೈ ಕೊಟ್ಟರು. ಅದು ನನಗೆ ತುಂಬಾ ಖುಷಿ ಅನಿಸಿತು ಅಂತ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇನ್ನು ಕೆಲವರು ಕಿತ್ತಳೆ ಕೈಗೆ ಕೊಟ್ರೆ ಸುಲಿದು ತಿನ್ನು ನಿನಗೆ ಕೈ ಇಲ್ವಾ ಅಂತ ಹೇಳಿದ್ದಾಗಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಬೆಳಗಿನ ಉಪಾಹಾರದಲ್ಲಿ ಪಪ್ಪಾಯಿಯನ್ನು ತಿನ್ನಿ, ಈ 5 ಅದ್ಭುತ ಪ್ರಯೋಜನ ಪಡೆಯಿರಿ
ಅಲ್ಲದೆ, ಅನೇಕ ಬಳಕೆದಾರರು ಟಿಕ್ಟಾಕ್ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. 'ಆರೆಂಜ್ ಪಿಲ್ ಥಿಯರಿ' ನಿಜವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಹಾಗಿದ್ರೆ ಇನ್ಯಾಕೆ ತಡ ನಿಮ್ಮ ಸಂಗಾತಿಗೆ ಒಂದು ಕಿತ್ತಳೆ ಹಣ್ಣನ್ನು ಕೊಟ್ಟು ನಿಮ್ಮ ಪ್ರೀತಿಯನ್ನು ಪರೀಕ್ಷಿಸಿಕೊಳ್ಳಿ.. ಏನಾಯ್ತು ಅಂತ ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.