ನಾನು ಕುಸುಮ... ಟೈಟಲ್ಲೇ ಹೇಳುವಂತೆ ಇದೊಂದು ಭಿನ್ನ ಬಗೆಯ ಮಹಿಳಾ ಪ್ರಧಾನ ಸಿನಿಮಾ. ಈಗಾಗಲೇ ಹಲವು ರಾಷ್ಟ್ರೀಯ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಂಸೆಗಳ ಜೊತೆಗೆ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ನಾನು ಕುಸುಮ ಚಿತ್ರ ಇತ್ತೀಚೆಗಷ್ಟೇ ನಡೆದ ‘14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಪ್ರದರ್ಶನಗೊಂಡು ಕನ್ನಡ ಸಿನಿಮಾ ವಿಭಾಗದಲ್ಲಿ ಪ್ರಥಮ ಸಿನಿಮಾವಾಗಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರೋದು ಸಿನೆಮಾ ತಂಡಕ್ಕಷ್ಟೇ ಅಲ್ಲದೇ ಕನ್ನಡ ಸಿನಿ ಪ್ರಿಯರ ಪಾಲಿಗೂ ಹೆಮ್ಮೆಯ ವಿಷಯ. 


COMMERCIAL BREAK
SCROLL TO CONTINUE READING

ಸದ್ಯ ಸಿನಿಮಾದ ಪ್ರಚಾರ ಹಾಗೂ ಬಿಡುಗಡೆಯ ತಯಾರಿಯಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ತಿಂಗಳ ಅಂದ್ರೆ ಜೂನ್ 30 ರಂದೇ ಥಿಯೇಟರ್ ನಲ್ಲಿ ಪ್ರೇಕ್ಷಕರ ಮುಂದೆ ಹಾಜರಾಗಲಿದೆ. ಈ ಸಿನಿಮಾದಲ್ಲಿ ಅನಿತಾ ಎಂಬ ವಿಶೇಷ ಪಾತ್ರದಲ್ಲಿ ನಟಿಸಿರುವ ನಟಿ ಸನಾತನಿ ತಮ್ಮ ಪಾತ್ರದ ಬಗ್ಗೆ ಅನುಭವವನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ- Ketika Sharma : ನಿದ್ದೆಯಲ್ಲೂ ಕಾಡುವಂತಿದೆ ಕೇತಿಕಾ ಕಾಂತಿಯು ಅಂದ..! ಫೋಟೋಸ್‌ ನೋಡಿ


ಕೆಲವೊಂದು ಪಾತ್ರಗಳನ್ನು ಕಲಾವಿದರೆ ಹುಡುಕಿಕೊಂಡು ಹೋದರೆ, ಇನ್ನು ಕೆಲವು ಪಾತ್ರಗಳು  ಕಲಾವಿದರನ್ನೇ ಹುಡುಕಿಕೊಂಡು ಅರಸಿ ಬರುತ್ತವೆ. ತನ್ನನ್ನು ಕೂಡ ಹಾಗೆಯೇ ಹುಡುಕಿಕೊಂಡು ಬಂದ ‘ನಾನು ಕುಸುಮ’ ಸಿನಿಮಾದ  ‘ಅನಿತಾ’ ಪಾತ್ರ ಎನ್ನುತ್ತಾರೆ ನಟಿ ಸನಾತನಿ ಜೋಶಿ. 


‘ಸಿನಿಮಾದ ಹೆಸರೇ ಹೇಳುವಂತೆ, ‘ನಾನು ಕುಸುಮ’ ಒಂದು ಅಪ್ಪಟ ಮಹಿಳಾ ಪ್ರದಾನ ಸಿನಿಮಾ. ನಮ್ಮ ನಡುವೆಯೇ ಹೆಣ್ಣೊಬ್ಬಳು ಅನುಭವಿಸುವ ಸಂಕಟ, ತಳಮಳ ಸಿನಿಮಾದಲ್ಲಿದೆ.  ತಪ್ಪು ಮಾಡಿದ ತಂದೆಯೊಬ್ಬನನ್ನು ಖಂಡಿಸುವಂಥ ಸಿನಿಮಾದ ಕಥೆಯಲ್ಲಿ ತುಂಬ ಪ್ರಾಮುಖ್ಯತೆ ಇರುವಂಥ ಅನಿತಾ ಪಾತ್ರ ತಮಗೆ ಸಿಕ್ಕಿದ್ದು, ಸಂತೃಪ್ತಿ ತಂದಿದೆ,‘ಈಗಾಗಲೇ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ‘ನಾನು ಕುಸುಮ’ ಸಿನಿಮಾ ಪ್ರದರ್ಶನವಾಗಿದೆ. ಚಿತ್ರರಂಗದ ಅನೇಕ ಹಿರಿಯರು ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ನನಗೂ ಕೂಡ ಸಿನಿಮಾ ನೋಡಿ ತುಂಬ ಖುಷಿಯಾಯಿತು. ಇಡೀ ಸಮಾಜದಲ್ಲಿ ಗಂಡು-ಹೆಣ್ಣು ಎಂಬ ಬೇಧ-ಭಾವವಿಲ್ಲದೆ, ಎಲ್ಲರೂ ಕುಳಿತು ನೋಡುವಂಥ ಸಿನಿಮಾ ಇದಾಗಿದೆ’ ಎಂಬ ಅಭಿಪ್ರಾಯ ಪಡುತ್ತಾರೆ ಸನಾತನಿ.


ಇದನ್ನೂ ಓದಿ- Tamannaah Bhatia : ತಮನ್ನಾ ಬ್ಯೂಟಿಗೆ ಬೋಲ್ಡ್‌ ಆದ ಯುವ ಪಡೆ..! ಫೋಟೋಸ್‌ ನೋಡಿ


ಇನ್ನು ‘ನಾನು ಕುಸುಮ’ ಚಿತ್ರ: 
ಕನ್ನಡದ ಹಿರಿಯ ಲೇಖಕ ಬೆಸಗರಹಳ್ಳಿ ರಾಮಣ್ಣ ಅವರ ಕಥೆಯನ್ನು ಆಧರಿಸಿ ತಯಾರಾಗಿದ್ದು, ಕೃಷ್ಣೇಗೌಡ ನಿರ್ಮಿಸಿ, ನಿರ್ದೇಶಿಸಿದ್ದಾರೆ. ತಾರಾಬಳಗದಲ್ಲಿ ನಟಿ ಗ್ರೀಷ್ಮಾ ಶ್ರೀಧರ್‌ ‘ಕುಸುಮ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕೃಷ್ಣೇಗೌಡ, ಕಾವೇರಿ ಶ್ರೀಧರ್, ಸೌಮ್ಯ ಭಾಗವತ್, ವಿಜಯ್‌ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ  ‘ನಾನು ಕುಸುಮ’ ಸಿನಿಮಾ ಇದೇ 30 ರಂದು ತೆರೆಗೆ ಬರಲಿದ್ದು ಪ್ರೇಕ್ಷಕ ಪ್ರಭುಗಳ ಮುಂದೆ ಹಾಜರಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ