Ileana D'Cruz Pregnant! ಖ್ಯಾತ ಬಹುಭಾಷಾ ನಟಿ ಇಲಿಯಾನಾ ಡಿಕ್ರೂಜ್ ತನ್ನ ಪ್ರೇಗ್ನೆನ್ಸಿ ಕುರಿತು ಘೋಷಣೆ ಮೊಳಗಿಸಿದ್ದಾಳೆ ಎಂಬ ಸಂಗತಿ ಈಗಾಗಲೇ ನಿಮ್ಮೆಲ್ಲರಿಗೂ ತಿಳಿದೇ ಇದೆ, ಮದುವೆಗೆ ಮುಂಚೆಯೇ ಆಕೆ ಗರ್ಭಿಣಿಯಾಗಿದ್ದಾಳೆ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ನಟಿ ತಾನು ಗರ್ಭಿಣಿಯಾಗಿರುವ ಸುದ್ದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾಳೆ. ನಟಿ ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಹಲವು ದಿಟ್ಟ ನಿರ್ಧಾರಗಳನ್ನು ಸಾಮಾಜಿಕ ಮಾಘ್ಯಮಗಳ ಮೂಲಕ ಹಂಚಿಕೊಂಡಿರುವುದು ಇದೇ ಮೊದಲಲ್ಲ.


COMMERCIAL BREAK
SCROLL TO CONTINUE READING

ಇಲಿಯಾನಾ ಡಿಕ್ರೂಜ್ ಚಿತ್ರರಂಗದಲ್ಲಿ ನಡೆಯುವ ಗುಂಪುಗಾರಿಕೆಯಿಂದ ಹಿಡಿದು ಅವರ ಫಿಗರ್ ಹಾಗೂ ಲ್ಲುಕ್ಸ್  ಬಗ್ಗೆ  ಟ್ರೋಲ್ ಮಾಡುವವರಿಗೆ  ಹಲವಾರು ಬಾರಿ ತಕ್ಕ ಉತ್ತರಗಳನ್ನು  ನೀಡಿದ್ದಾಳೆ. ಒಮ್ಮೆ 2019 ರಲ್ಲಿ, 'ಆಸ್ಕ್ ಮೀ ಎನಿಥಿಂಗ್' ಸೆಷನ್‌ನಲ್ಲಿ, ಕೆಲವು ಟ್ರೋಲ್‌ಗಳು ಆಕೆಯ ಕನ್ಯತ್ವದ ಬಗ್ಗೆ ಪ್ರಶ್ನಿಸಿದ್ದರು. ಟ್ರೋಲಿಗರ ಈ ಪ್ರಶ್ನೆಗಳಿಗೆ ನಟಿ ತಕ್ಕ ಉತ್ತರ ನೀಡಿ ಅವರ ಬಾಯಿಯನ್ನು ಮುಚ್ಚಿಸಿದ್ದಳು. 
 


ಆಸ್ಕ್ ಮೀ ಎನಿಥಿಂಗ್' ಶೇಷನ್ ನಲ್ಲಿ ಆಕೆಯ ಬಹುತೇಕ ಅಭಿಮಾನಿಗಳು ಆಕೆಯ ಮುಂಬರುವ ಚಿತ್ರ ಹಾಗೂ ಇಷ್ಟ-ಇಷ್ಟವಾಗದೆ ಇರುವುದರ ಕುರಿತು ಪ್ರಶ್ನಿಸಿದ್ದಾರೆ. ಆದರೆ, ಓರ್ವ ಬಳಕೆದಾರ ಮಾತ್ರ 'ಡಿಯರ್.. ನೀನು ನಿಮ್ಮ ವರ್ಜೀನಿಟಿ ಯಾವಾಗ ಕಳೆದುಕೊಂಡೆ' ಎಂದು ಪ್ರಶ್ನಿಸಿದ್ದ. ಇದಕ್ಕೆ ಕೋಪಗೊಂಡ ನಟಿ, ಟ್ರೋಲ್ ಮಾಡಿದವನಿಗೆ ತಕ್ಕ ಉತ್ತರ ನೀಡಿದ್ದಳು. ಈ ಕುರಿತು ಬರೆದುಕೊಂಡ ನಟಿ, " ವಾಹ್, ನೋಸೀ, ಇನ್ನೂ ಹೆಚ್ಚು? ನಿಮ್ಮ ತಾಯಿ ಏನು ಹೇಳುತ್ತಾಳೆ? Tsk Tsk" ಎಂದಿದ್ದಳು. 


ಇದನ್ನೂ ಓದಿ-Celina Jaitly Viral Tweet: 'ತಂದೆ-ಮಗ ಇಬ್ಬರ ಜೊತೆಗೂ ಮಲಗಿದ್ದಾಳೆ' ಎಂದ ವ್ಯಕ್ತಿಗೆ ಸೇಲಿನಾ ಮಾಡಿದ್ದೇನು ಗೊತ್ತಾ?

ಪ್ರೇಗ್ನೆನ್ಸಿ ಕುರಿತು ಘೋಷಿಸಿಕೊಂಡ ಇಲಿಯಾನಾ
ಇಲಿಯಾನಾ ಮಂಗಳವಾರ ತನ್ನ  ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದಾಳೆ. ಅದರ ಮೇಲೆ ಪರ್ಸನಲೈಜ್ ಕ್ಯಾಪ್ಶನ್ ಬರೆಯಲಾಗಿದೆ ಮತ್ತು ಈ ಪಯಣ ಆರಂಭವಾಗುತ್ತದೆ. ಇದಲ್ಲದೇ ಮಮ್ಮಿ ಎಂದು ಬರೆದಿರುವ ನೆಕ್ ಪೀಸ್ ಕೂಡ ಧರಿಸಿದ್ದಾರೆ ಮತ್ತು ಅದರ ಶೀರ್ಷಿಕೆಯಲ್ಲಿ "ಶೀಘ್ರದಲ್ಲೇ ಆಗಮಿಸಲಿದೆ" ಎಂದು ಬರೆದಿದ್ದಾಳೆ. ನಿನ್ನನ್ನು ಭೇಟಿಯಾಗಲು ನಿರೀಕ್ಷೆಯಲ್ಲಿರುವುದು ಸಾಧ್ಯವಾಗುತ್ತಿಲ್ಲ ನನ್ನ ಪುಟ್ಟ ಪ್ರಾಣ"


ಇದನ್ನೂ ಓದಿ-Viral News: 'ಇದು ಎಂಥಾ ಲೋಕವಯ್ಯ...!' ಬೊಂಬೆ ಜೊತೆ ವಿವಾಹ ಮಾಡಿಕೊಂಡು ಗರ್ಭಿಣಿಯಾದ ಮಹಿಳೆ!


ಇಲಿಯಾನಾ ಅವರ ಈ ಪೋಸ್ಟ್ ಶೇರ್ ಆದ ತಕ್ಷಣ  ಭಾರಿ ವೈರಲ್ ಆಗಿದೆ. ಈ ಮಗುವಿನ ತಂದೆ ಯಾರು? ಎಂಬ ಕೂತೂಹಲ ಇದೀಗ ಅಭಿಮಾನಿಗಳ ಮನದಲ್ಲಿ ಒಂದೆಡೆ ಮನೆಮಾಡಿದ್ದರೇ,   ಇನ್ನೊಂದೆಡೆ ಇಲಿಯಾನಾ ಇದುವರೆಗೂ ತಮ್ಮ ಸಂಬಂಧದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.