ಮೈಸೂರು: ಮೈಸೂರಿನ ಹೊರವಲಯದಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು,  ದರ್ಶನ್​, ಪ್ರಜ್ವಲ್​ ದೇವರಾಜ್​ ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ದರ್ಶನ್​ ಅವರ ಬಲಗೈ ಮೂಳೆ ಮುರಿದುಹೋಗಿದ್ದರಿಂದ ಸತತ ಒಂದೂವರೆ ಗಂಟೆಗಳ ಕಾಲ ತುರ್ತು ಚಿಕಿತ್ಸೆ ನಡೆಸಲಾಗಿದೆ. ಆಪರೇಷನ್​ ಯಶಸ್ವಿಯಾಗಿದ್ದು, ದರ್ಶನ್​ ಅವರನ್ನು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ: ನಾಲ್ವರಿಗೆ ಗಾಯ


ಕಾರು ಅಪಘಾತದಲ್ಲಿ ಗಾಯಗೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ನನಗೆ ಏನೂ ಆಗಿಲ್ಲ, ಯಾರೂ ಆಸ್ಪತ್ರೆಯ ಬಳಿ ಬರಬೇಡಿ ಪ್ಲೀಸ್ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ದಚ್ಚು ಮನವಿ ಮಾಡಿರುವ ಆಡಿಯೋವನ್ನು ಡಿ ಕಂಪನಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.


ಅಪಘಾತಕ್ಕೀಡಾದ ದರ್ಶನ್​ ಕಾರು ನಾಪತ್ತೆ; ಚಾಲೆಂಜಿಂಗ್​ ಸ್ಟಾರ್​ ಕೈಗೆ ಆಪರೇಷನ್


‘ನನ್ನ ಅನ್ನದಾತರಿಗೆ ಅರ್ಥಾತ್ ನನ್ನ ಅಭಿಮಾನಿಗಳಿಗೆ ತಿಳಿಸುವುದೇನೆಂದರೆ ನನಗೆ ಏನು ಆಗಿಲ್ಲ. ನಾಳೆ ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದೇನೆ. ಆ ನಂತರ ನಿಮ್ಮೆಲ್ಲರನ್ನು ಕಾಣುತ್ತೇನೆ. ದಯವಿಟ್ಟು ಯಾರೂ ಆಸ್ಪತ್ರೆಯ ಹತ್ತಿರ ಬರಬೇಡಿ. ಆಸ್ಪತ್ರೆಯಲ್ಲಿರುವ ಬೇರೆ ರೋಗಿಗಳಿಗೆ ನನ್ನಿಂದ ತೊಂದರೆಯಾಗುವುದು ಸರಿಯಲ್ಲ. ದಯಮಾಡಿ ಶಾಂತಿಯಿಂದಿರಿ’ ಎಂದು ಟ್ವಿಟ್ಟರ್ ಖಾತೆಯ ಶೀರ್ಷಿಕೆಯಲ್ಲಿ ಬರೆಯಲಾಗಿದೆ.


ಡಿ ಕಂಪನಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿರುವ ಆಡಿಯೋದಲ್ಲಿ ದರ್ಶನ್  ಏನ್ ಹೇಳಿದಾರೆ ಅನ್ನೋದನ್ನ ನೀವೇ ಕೇಳಿ...