Parineeti Raghav Wedding : ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಈ ವರ್ಷದ ಮೇ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥದ ನಂತರ ಈ ಜೋಡಿ ಬಹುತೇಕ ಸ್ಥಳಗಳಲ್ಲಿ ಜೋತೆಯ್ಹಾಗಿ ಕಾಣಿಸಿಕೊಂಡಿದೆ. ಇವರಿಬ್ಬರ ಮದುವೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಇದುವರೆಗೂ ಈ ಇಬ್ಬರೂ ತಾರೆಯರು ಮದುವೆಯ ದಿನಾಂಕವನ್ನು ಪ್ರಕಟಿಸಿಲ್ಲ. ಏತನ್ಮಧ್ಯೆ, ಮದುವೆಗೆ ಸಂಬಂಧಿಸಿದಂತೆ ಈ ಜೋಡಿ ನಿರ್ಧಾರವೊಂದನ್ನು ತೆಗೆದುಕೊಂಡಿದೆ ಎನ್ನುವ ಸುದ್ದಿ ಹೊರ ಬಿದ್ದಿದೆ.  


COMMERCIAL BREAK
SCROLL TO CONTINUE READING

ನಡೆಯುವುದು ಒಂದೇ ಆರತಕ್ಷತೆ : 
ಮದುವೆಗೆ ಸಂಬಂಧಿಸಿದಂತೆ ಈ ಮೊದಲು ಎರಡು ಆರತಕ್ಷತೆ ನಡೆಯಲಿದೆ ಎನ್ನುವ ಮಾಹಿತಿ ಕೇಳಿ ಬಂದಿತ್ತು. ಮುಂಬೈ ಮತ್ತು ಚಂಡೀಗಢದಲ್ಲಿ ಇಬ್ಬರೂ ಆರತಕ್ಷತೆ ನೀಡಲಿದ್ದಾರೆ ಎಂಬ ವರದಿಗಳು  ಹೊರ ಬಿದ್ದಿತ್ತು. ಆದರೆ ಈಗ  ಈ ಜೋಡಿ ಗುರುಗ್ರಾಮ್‌ನ 'ದಿ ಲೀಲಾ ಆಂಬಿಯನ್ಸ್ ಗುರುಗ್ರಾಮ್ ಹೋಟೆಲ್' ನಲ್ಲಿ ಮಾತ್ರ ಆರತಕ್ಷತೆಯನ್ನು ಯೋಜಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಪರಿಣಿತಿ ಮತ್ತು ರಾಘವ್ ಅವರ ಪೋಷಕರು ಫುಡ್ ಟೆಸ್ಟಿಂಗ್ ಗಾಗಿ ಹೋಟೆಲ್‌ಗೆ ಆಗಮಿಸಿದ್ದರಂತೆ. 


 


Monalisa : ಬಿಕಿನಿಯಲ್ಲಿ ಮಿಂಚಿದ ನಟಿ ಮೋನಾಲಿಸಾ..! ಫೋಟೋಸ್‌ ನೋಡಿ


ಆಹಾರದ ರುಚಿ ನೋಡಲು ಬಂದ ಪೋಷಕರು : 
ಮಾಧ್ಯಮಗಳ ವರದಿ ಪ್ರಕಾರ, ಶುಕ್ರವಾರ ಇಬ್ಬರ ಪೋಷಕರು ಆಹಾರ ರುಚಿ ನೋಡುವುದಕ್ಕಾಗಿ ಹೊಟೇಲ್ ಗೆ ಆಗಮಿಸಿದ್ದರು ಎನ್ನಲಾಗಿದೆ. ಆದರೆ ಈ ಸಮಯದಲ್ಲಿ ಪರಿಣಿತಿ ಮತ್ತು ರಾಘವ್ ಕಾಣಿಸಿಕೊಂಡಿಲ್ಲ. ವರದಿಗಳನ್ನು ನಂಬುವುದಾದರೆ, ಫುಡ್ ಟೆಸ್ಟಿಂಗ್ ವೇಳೆ ದೊಡ್ಡ ಮೆನುವನ್ನೇ ಸಿದ್ದ ಪಡಿಸಲಾಗಿತ್ತು ಎನ್ನಲಾಗಿದೆ. 


ದೆಹಲಿ-ಎನ್‌ಸಿಆರ್‌ನಲ್ಲಿ ನಡೆಯಲಿದೆ  ಆರತಕ್ಷತೆ : 
ಪರಿಣಿತಿ ರಾಘವ್  ಜೋಡಿ ದೆಹಲಿಯಲ್ಲೇ ಆರತಕ್ಷತೆಯನ್ನು ನಿಗದಿಪಡಿಸಲಿದ್ದಾರೆ. ರಾಘವ್ ಅವರ ಜನ್ಮಸ್ಥಳ ದೆಹಲಿ ಮತ್ತು ಅವರ ಸ್ನೇಹಿತರು ಮತ್ತು ಹತ್ತಿರದ ಸಂಬಂಧಿಕರು ಕೂಡಾ ದೆಹಲಿಯಲ್ಲಿಯೇ ವಾಸವಿದ್ದಾರೆ.  ಮದುವೆಯ ದಿನಾಂಕದ ಬಗ್ಗೆ ದಂಪತಿಗಳು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ, ಆದರೆ ಈ ವರ್ಷ ಅಕ್ಟೋಬರ್‌ನಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದೆ ಎನ್ನಲಾಗಿದೆ.  ನಿಶ್ಚಿತಾರ್ಥದ ನಂತರ, ಪರಿಣಿತಿ ಮತ್ತು ರಾಘವ್ ನಿರಂತರವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ನಡುವಿನ ಕೆಮಿಸ್ಟ್ರಿ ಕೂಡಾ ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ. 


 


ಮದುವೆಯಾಗದೇ ಗರ್ಭಿಣಿಯಾದ ನಟಿ ಸಾಯಿ ಪಲ್ಲವಿ..! ವಿಡಿಯೋ ವೈರಲ್ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.