Ramya Dance: ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ ಸ್ಯಾಂಡಲ್‍ವುಡ್ ‘ಪದ್ಮಾವತಿ’ ರಮ್ಯಾ!

Kannada actress Ramya Dance: ಕಪ್ಪು ಡ್ರೆಸ್‍ನಲ್ಲಿ ರಮ್ಯಾ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋಗೆ ‘E N D O R P H I N S’ ಅಂತಾ ಕ್ಯಾಪ್ಸನ್ ನೀಡಿದ್ದಾರೆ. ಬಹುದಿನಗಳ ನಂತರ ರಮ್ಯಾ ಡ್ಯಾನ್ಸ್ ಜೋಶ್ ನೋಡಿದ ಅವರ ಫ್ಯಾನ್ಸ್ ಭರ್ಜರಿ ಖುಷಿಯಾಗಿದ್ದಾರೆ.

Written by - Puttaraj K Alur | Last Updated : Jul 16, 2023, 11:00 PM IST
  • ಕಪ್ಪು ಡ್ರೆಸ್‍ನಲ್ಲಿ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ ನಟಿ ರಮ್ಯಾ
  • ಸ್ಯಾಂಡಲ್‍ವುಡ್ ‘ಪದ್ಮಾವತಿ’ಯ ಸಖತ್ ಡ್ಯಾನ್ಸ್ ಗೆ ಫ್ಯಾನ್ಸ್ ಫಿದಾ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ ವಿಡಿಯೋ
Ramya Dance: ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ ಸ್ಯಾಂಡಲ್‍ವುಡ್ ‘ಪದ್ಮಾವತಿ’ ರಮ್ಯಾ! title=
ರಮ್ಯಾ ಡ್ಯಾನ್ಸ್ ಗೆ ಫ್ಯಾನ್ಸ್ ಫಿದಾ!

ಬೆಂಗಳೂರು: ಸ್ಯಾಂಡಲ್‍ವುಡ್ ಪದ್ಮಾವತಿ ಖ್ಯಾತಿಯ ನಟಿ ರಮ್ಯಾ @ ದಿವ್ಯ ಸ್ಪಂದನಾ ಒಂದಷ್ಟು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದರು. ಇದೀಗ ಮತ್ತೆ ಬಣ್ಣದ ಲೋಕದಲ್ಲಿ ಹೈಪರ್ ಆಕ್ಟೀವ್ ಆಗಿದ್ದಾರೆ. ತಮ್ಮ ನೆಚ್ಚಿನ ನಟಿಯನ್ನು ಮತ್ತೆ ತೆರೆಮೇಲೆ ನೋಡಬೇಕೆಂದು ಲಕ್ಷಾಂತರ ಅಭಿಮಾನಿಗಳು ಬಹುದಿನಗಳಿಂದ ಕಾತುರದಿಂದ ಕಾಯುತ್ತಿದ್ದಾರೆ. ಹೀಗಾಗಿ ರಮ್ಯಾ ಕೆಲವು ತಿಂಗಳ ಹಿಂದೆ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೋಡ್ತೀನಿ ಅಂತಾ ಹೇಳುವ ಮೂಲಕ ಗುಡ್ ನ್ಯೂಸ್ ನೀಡಿದ್ದರು.

ಮುಂದಿನ ಸಿನಿಮಾ ಯಾವುದು ಅಂತಾ ಬಹುದಿನಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದ ರಮ್ಯಾ ತಾವು ನಟಿಸುತ್ತಿರುವ ಚಿತ್ರಗಳ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಜುಲೈ 21ರಂದು ರಮ್ಯಾ ನಟನೆಯ 2 ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಕಾತುರ ಜಾಸ್ತಿಯಾಗಿದೆ. ರಮ್ಯಾ ನಟಿಸಿರುವ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಜುಲೈ 21ರಂದು ಬಿಡುಗಡೆ ಆಗಲಿದೆ. ಅದೇ ದಿನ ರಮ್ಯಾ ಮತ್ತು ತಮಿಳು ನಟ ಸೂರ್ಯ ಅಭಿನಯದ ಹಳೇ ಸಿನಿಮಾ ‘ಸೂರ್ಯ ಸನ್​ ಆಫ್​ ಕೃಷ್ಣನ್​’ (Surya S/O Krishnan) ಮರು ರಿಲೀಸ್ ಆಗ್ತಿದೆ. ಇದು ಫ್ಯಾನ್ಸ್‍ಗೆ ಸಖತ್ ಖುಷಿ ನೀಡಿದೆ.

 
 
 
 

 
 
 
 
 
 
 
 
 
 
 

A post shared by Ramya|Divya Spandana (@divyaspandana)

ಇದನ್ನೂ ಓದಿ: ವಿಜಯ್‌ ದೇವರಕೊಂಡ ತಮ್ಮನ ʼಬೇಬಿʼ ನೋಡುವಾಗ ಕಣ್ಣಲ್ಲಿ ನೀರು ಬಂತು..! ರಶ್ಮಿಕಾ ಮಂದಣ್ಣ

ರಮ್ಯಾ ಡ್ಯಾನ್ಸ್ಗೆ ಫ್ಯಾನ್ಸ್ ಫಿದಾ!

ಇದೀಗ ವಿಷಯ ಏನಪ್ಪಾ ಅಂದ್ರೆ ‘ಸೂರ್ಯ ಸನ್​ ಆಫ್​ ಕೃಷ್ಣನ್​’ ಪೋಸ್ಟರ್ ಹಂಚಿಕೊಂಡು ಹಳೆಯ ನೆನೆಪುಗಳನ್ನು ಮೆಲಕು ಹಾಕಿದ್ದ ರಮ್ಯಾ ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‍ನಲ್ಲಿ ಅವರು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಹೌದು, ಮತ್ತೆ ಹಳೆಯ ಜೋಶ್‍ಗೆ ಮರಳಿರುವ ರಮ್ಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಡ್ಯಾನ್ಸ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಕಪ್ಪು ಡ್ರೆಸ್‍ನಲ್ಲಿ ರಮ್ಯಾ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋಗೆ ‘E N D O R P H I N S’ ಅಂತಾ ಕ್ಯಾಪ್ಸನ್ ನೀಡಿದ್ದಾರೆ. ಬಹುದಿನಗಳ ನಂತರ ರಮ್ಯಾ ಡ್ಯಾನ್ಸ್ ಜೋಶ್ ನೋಡಿದ ಅವರ ಫ್ಯಾನ್ಸ್ ಭರ್ಜರಿ ಖುಷಿಯಾಗಿದ್ದಾರೆ. ಈ ವಿಡಿಯೋವನ್ನು 74 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಕೆಲವರು ಸುಂದ್ರಿ ಅಂತಾ ಕಾಮೆಂಟ್ ಮಾಡಿದ್ರೆ, ಇನ್ನೂ ಕೆಲವರು ರಮ್ಯಾಗೆ ರಮ್ಯಾನೇ ಸಾಟಿ ಎಂದು ಹೇಳಿದ್ದಾರೆ. ‘ನೀವು ಈ ಗ್ರಹದಲ್ಲಿರುವ ಪ್ರತಿಯೊಬ್ಬ ನಾಯಕಿಯರನ್ನು destroy’ ಮಾಡಿದ್ದೀರಿ’ ಅಂತಾ ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ‘ನನ್ನ ಬಾಲ್ಯದ ನೆಚ್ಚಿನ ನಾಯಕಿ’ ಎಂದು ಮತ್ತೊಬ್ಬ ಅಭಿಮಾನಿ ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಾಖಿ ಭಾಯ್‌ಗೆ ಶಾಕ್ ಕೊಟ್ಟ ಚಿಟ್ಟಿಬಾಬು..! 'ಕೆಜಿಎಫ್' ದಾಖಲೆ ಮುರಿದ 'ರಂಗಸ್ಥಳಂ'

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News