Amruthadhaare Serial: ಹೆಂಡತಿಗಾಗಿ ಉರುಳು ಸೇವೆ ಮಾಡಿದ ಗೌತಮ್:ಗಂಡನ ಕಷ್ಟ ನೋಡಲಾರೆದೆ ಕಣ್ಣೀರಿಟ್ಟ ಭೂಮಿಕಾ!
Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ತನ್ನ ಪತ್ನಿ ಭೂಮಿಕಾ ಆರೋಗ್ಯ ಚೆನ್ನಾಗಿರಬೇಕೆಂದು ಉರುಳು ಸೇವೆ ಮಾಡುತ್ತಾನೆ. ಗಂಡ ಕಷ್ಟವನ್ನು ನೋಡಲು ಆಗದೆ ಭೂಮಿಕಾ ಕಣ್ಣೀರು ಹಾಕುತ್ತಾಳೆ. ಹಾಗಿದ್ರೇ ಗೌತಮ್ ಹರಕೆ ಕಟ್ಟಿಕೊಂಡಿದ್ದು ಏಕೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bhumika Cries For Gautham: ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಇನ್ನೇನು ಗಂಡ-ಹೆಂಡ್ತಿ ಥರ ಜೀವನ ನಡೆಸಬೇಕು ಅಂತ ಅಂದುಕೊಂಡಿದ್ದರು. ಅಷ್ಟರಲ್ಲಿ ಗೌತಮ್ ಮಲತಾಯಿ ಶಾಕುಂತಲಾ ಇವರಿಬ್ಬರು ಒಂದಾದರೇ ಕುಟುಂಬದ ಆಸ್ತಿ ಸಿಗುವುದಿಲ್ಲವೆಂದು ಒಂದು ಪ್ಲಾನ್ ಮಾಡುತ್ತಾಳೆ. ದುಡ್ಡಿನ ಆಸೆಯಿರುವ ಜ್ಯೋತಿಷಿಯನ್ನು ಕರೆಸಿ ಸುಳ್ಳು ಭವಿಷ್ಯವನ್ನು ಹೇಳಿಸುತ್ತಾಳೆ.
ಹೌದು.. ದಿವಾನ್ ಕುಟುಂಬದ ಮನೆಯ ಬಂದಿದ್ದ ಜ್ಯೋತಿಷಿ ಗೌತಮ್ ಹತ್ತಿರ "ನೀವು, ಭೂಮಿಕಾ ದೈಹಿಕವಾಗಿ ಒಂದಾದರೆ, ಗಂಡ ಹೆಂಡ್ತಿ ಥರ ಇದ್ದರೆ ಭೂಮಿಕಾ ಪ್ರಾಣ ಹೋಗುತ್ತದೆ, ನಿಮ್ಮಿಬ್ಬರ ಜಾತಕ ಹೊಂದಾಣಿಕೆ ಆಗೋದಿಲ್ಲ. ನೀವು ಅವರಿಂದ ದೂರ ಇರಬೇಕು" ಎಂದು ಹೇಳುತ್ತಾನೆ. ಇದನ್ನು ಕೇಳಿ ಗೌತಮ್ ಕಂಗಾಲಾಗುತ್ತಾನೆ. ಆ ಜ್ಯೋತಿಷಿ ಬಳಿ ಗೌತಮ್ ಪರಿಹಾರ ಕೇಳಿದಾಗ, ಆತ ನೀವಿಬ್ಬರು ದೂರ ಇರುವುದೇ ಸದ್ಯಕ್ಕೆ ಇರುವ ಪರಿಹಾರ. ಇದು ಬಿಟ್ರೇ ಬೇರೇನು ಇಲ್ಲ ಎಂದು ಹೇಳುತ್ತಾನೆ.
ಇದನ್ನೂ ಓದಿ: Shrirastu Shubhamasthu: ಶಾರ್ವರಿ-ದೀಪಿಕಾಗೆ ಶುರುವಾಯಿತು ಅನುಮಾನ: ಸಂಕಷ್ಟಕ್ಕೆ ಒಳಗಾಗುತ್ತಾ ತುಳಸಿ ಜೀವನ!
ಗೌತಮ್ ದೇವರ ಮುಂದೆ ತನ್ನ ಪತ್ನಿ ಭೂಮಿಕಾ ಆರೋಗ್ಯ ಚೆನ್ನಾಗಿರಬೇಕು, ಅವಳಿಗೆ ಏನೂ ಆಗಬಾರದು. ಅದಕ್ಕೆ ಉರುಳು ಸೇವೆ ಮಾಡುತ್ತೇನೆ ಹಾಗೂ ದೇವಸ್ಥಾನದ ನೆಲದ ಮೇಲೆ ಊಟ ಮಾಡುತ್ತೇನೆ ಎಂದು ಹರಕೆ ಕಟ್ಟಿಕೊಳ್ಳುತ್ತಾನೆ. ಗೌತಮ್ ಭೂಮಿಕಾಗಾಗಿ ಇಂತಹ ಹರಕೆ ಹೊತ್ತಿದ್ದರಿಂದ ಅವಳಿಗೆ ದೇವಸ್ಥಾನಕ್ಕೆ ಬರುವುದಕ್ಕೆ ಕೆರೆದಿದ್ದನು. ಭೂಮಿಕಾಗೆ ಗೌತಮ್ ಮನೆಯವರಿಗೆ ಎಲ್ಲರಿಗೂ ಒಳ್ಳೆಯದಾಗಬೇಕು ಅಂತ ಹರಕೆ ಕಟ್ಟುಕೊಂಡಿದ್ದೇನೆ ಎಂದು ಹೇಳುತ್ತಾನೆ. ಭೂಮಿಗೆ ತನ್ನ ಸಲುವಾಗಿ ತನ್ನ ಗಂಡ ಇಷ್ಟೆಲ್ಲ ಮಾಡ್ತಿದ್ದಾನೆ ಅಂತ ಗೊತ್ತಿಲ್ಲ.
ದೇವಸ್ಥಾನದಲ್ಲಿ ಗೌತಮ್ ತನ್ ಗೆಳೆಯ ಆನಂದ್ ಹಾಗೂ ಭೂಮಿಕಾ ಮುಂದೆ ಹರಕೆ ತೀರಿಸುತ್ತಾನೆ. ಆದರೆ ಭೂಮಿಕಾ ಎಲ್ಲವೂ ಇರುವ ಗಂಡ ಮನೆಯವರ ಖುಷಿಗೆ ಈ ಥರ ಹರಕೆ ತೀರಿಸುತ್ತಿದ್ದಾರೆ ಎಂದು ಬೇಸರ ಪಡುತ್ತಾಳೆ. ತನ್ನ ಗಂಡ ಗೌತಮ್ ಉರುಳು ಸೇವೆ ಮಾಡೋದು, ನೆಲದ ಮೇಲೆ ಊಟ ಮಾಡೋದು ನೋಡಿ ಸಂಕಷ್ಟಕ್ಕೆ ಒಳಗಾರುತ್ತಾಲೆ. ಭೂಮಿಕಾ ಗಂಡ ಪರಿಸ್ಥಿತಿ ನೋಡಲಾರದೆ ಕಣ್ಣೀರು ಹಾಕುತ್ತಾಳೆ. ಪ್ರಾಣಕ್ಕಿಂತ ಗಂಡನನ್ನು ಹೆಚ್ಚಾಗಿ ಪ್ರೀತಿಸುವ ಭೂಮಿಕಾ ಮುಂದೆ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಾಳಾ ಅಂತ ಕಾದು ನೋಡಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.