Flashback 2020: 2020 ವರ್ಷ ಬೇಗನೆ ಮುಕ್ತಾಯಗೊಳ್ಳಲಿ ಎಂಬುದೇ ಇದೀಗ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಹಾಗೆ ನೋಡುವುದಾದರೆ ಈ ವರ್ಷ ಯಾರಿಗೂ ಒಳ್ಳೆಯ ಸಂಗತಿಗಳನ್ನು ನೀಡಿಲ್ಲ. ಕರೋನಾ ಸೋಂಕಿನ ವೈರಸ್ ವಿಶ್ವಾದ್ಯಂತ ತನ್ನ ಪ್ರಕೋಪ ಸೃಷ್ಟಿಸಿ ಹಲವಾರು ಜೀವಗಳನ್ನು ಬಲಿ ಪಡೆದಿದೆ.ಭಾರತದ ಬಗ್ಗೆ ಮಾತನಾಡುವುದಾದರೆ, ಕರೋನಾ ಸೋಂಕಿನ ಪ್ರಕೋಪ ಇನ್ನೂ ಜಾರಿಯಲ್ಲಿದೆ ಈ ಎಲ್ಲದರ ನಡುವೆ 2020 ರ ವರ್ಷವು ಎಲ್ಲಾ ಕೈಗಾರಿಕೆಗಳಿಗೆ ಮತ್ತು ಬಾಲಿವುಡ್ ಮತ್ತು ಹಾಲಿವುಡ್ ಸೇರಿದಂತೆ ಅನೇಕ ಮನರಂಜನಾ (Entertainment) ಉದ್ಯಮಗಳಿಗೆ ಉತ್ತಮವಾಗಿರಲಿಲ್ಲ. ಈ ವರ್ಷ ಬಾಲಿವುಡ್‌ನ ಅನೇಕ ದಿಗ್ಗಜ ತಾರೆಗಳು ನಮ್ಮನ್ನು ಶಾಶ್ವತವಾಗಿ ಅಗಲಿದ್ದಾರೆ. 2020 ರಲ್ಲಿ ಯಾವ ಬಾಲಿವುಡ್ ತಾರೆಗಳು ಜಗತ್ತಿಗೆ ವಿದಾಯ ಹೇಳಿದರು ಎಂಬುದನ್ನೊಮ್ಮೆ ನೋಡೋಣ.


COMMERCIAL BREAK
SCROLL TO CONTINUE READING

ಇರ್ಫಾನ್ ಖಾನ್ Irfan Khan
ತಮ್ಮ ಅತ್ಯುತ್ತಮ ನಟನೆ ಮತ್ತು ಅದ್ಭುತ ಗಂಭೀರತೆಯಿಂದ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದ ಇರ್ಫಾನ್ ಖಾನ್, 2020 ರಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರು ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಅಂತಿಮವಾಗಿ ಅವರು ಏಪ್ರಿಲ್ 29 ರಂದು ಮುಂಬೈನಲ್ಲಿ ಚಿಕಿತ್ಸೆಯ ಸಮಯದಲ್ಲಿ ನಿಧನರಾದರು. ಇರ್ಫಾನ್ ಖಾನ್ ಬಾಲಿವುಡ್ನಲ್ಲಿ ಮಾತ್ರವಲ್ಲದೆ ಅನೇಕ ಹಾಲಿವುಡ್ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದರು ಮತ್ತು ತಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಅವರ ಕೊನೆಯ ಹಿಂದಿ ಚಿತ್ರ ಇಂಗ್ಲಿಷ್ ಮೀಡಿಯಂ. ಅವರ ಆರೋಗ್ಯ ಹದಗೆಟ್ಟ ನಂತರವೂ ಅವರು ಈ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದರು. ಈ ಚಿತ್ರವು 2020 ರಲ್ಲಿ ಬಿಡುಗಡೆಯಾಗಿತ್ತು.
ಖ್ಯಾತ ಹಿರಿಯ ನಟ Ravi Patwardhan ನಿಧನ, 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ


ಹಿರಿಯ ಬಂಗಾಳಿ ಚಿತ್ರ ನಟ ಸೌಮಿತ್ರ ಚಟರ್ಜಿ ಇನ್ನಿಲ್ಲ


ಜಗದೀಪ್ Jagadeep
ಹಿಂದಿ ಚಿತ್ರತಳಲ್ಲಿ ತನ್ನ ಅದ್ಭುತ ಕಾಮಿಡಿ ನಟನೆಯ ಮೂಲಕ ಎಲ್ಲರ ಮನೆ ಮಾತಾಗಿದ್ದ ನಟ ಜಗದೀಪ್ ಕೂಡ ಈ ವರ್ಷ ನಮ್ಮನ್ನು ಅಗಲಿದ್ದಾರೆ. ತನ್ನ ವಯಸ್ಸಿನ 81ನೆ ವರ್ಷದಲ್ಲಿ ಜಗದೀಪ್ ಪ್ರಪಂಚಕ್ಕೆ ಗುಡ್ ಬೈ ಹೇಳಿದ್ದಾರೆ. ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿಯೇ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ. ಅಲಿ ಅಬ್ಬಾಸ್ ಚೌಧರಿ ಅವರ 'ಮಸ್ತಿ ನಹಿ ಸಸ್ತಿ' ಇದು ಜಗದೀಪ್ ಅವರ ಕೊನೆಯ ಚಿತ್ರವಾಗಿದೆ.


ಸೌಮಿತ್ರ ಚಟರ್ಜೀ Soumitra Chaterjee
ಬಂಗಾಳಿ ಚಿತ್ರರಂಗದ ಹಿರಿಯ ನಟ ಸೌಮಿತ್ರ ಚಟರ್ಜೀ  ಕೂಡ ನವೆಂಬರ್ 15, 2020 ರಂದು ನಿಧನರಾದರು. ಕರೋನಾ ಸೋಂಕಿಗೆ ಒಳಗಾಗುವುದರ ಜೊತೆಗೆ, ಅವರು ನರ ಸಂಬಂಧಿತ ಕಾಯಿಲೆಗಳ ವಿರುದ್ಧ ಹೋರಾಡುತ್ತಿದ್ದರು. ಸೌಮಿತ್ರ ಅತ್ಯುತ್ತಮ ನಟರಲ್ಲಿ ಒಬ್ಬರಾಗಿದ್ದರು. ಅವರು ಬರಹಗಾರ ಮತ್ತು ನಿರ್ದೇಶಕರಾಗಿ ಕೂಡ ಕಾರ್ಯನಿರ್ವಹಿಸಿದ್ದರು. ಅವರ ಕೊನೆಯ ಚಿತ್ರ ಬೇಲಾ ಶೇಷೆ. ಆದರೆ ಕರೋನಾದ ಕಾರಣ ಈ ಚಿತ್ರ ಬಿಡುಗಡೆಯಾಗಲಿಲ್ಲ. ಅವರು ತಮ್ಮ ಬಯೋಪಿಕ್ ಚಿತ್ರ ಅಭಿಜನ್ ನಲ್ಲಿಯೂ ಕೆಲಸ ಮಾಡುತ್ತಿದ್ದರು.


ಶಾನ್ ಕೋನರಿ Sean Connery
ಶಾನ್ ಕೊನರಿ ಅವರನ್ನು  ಹಾಲಿವುಡ್‌ನ ಮೊದಲ ಜೇಮ್ಸ್ ಬಾಂಡ್ ಎಂದು ಕರೆಯಲಾಗುತ್ತದೆ. ಈ ಅನುಭವಿ ನಟ 2020 ರ ಅಕ್ಟೋಬರ್ 30 ರಂದು ಶಾಶ್ವತವಾಗಿ ಜಗತ್ತಿಗೆ ವಿದಾಯ ಹೇಳಿದರು. ಅವರು ತಮ್ಮ 90 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಶಾನ್ ಕೊನರಿ  ಹಾಲಿವುಡ್‌ನಲ್ಲಿ ಹಲವು  ಅತ್ಯುತ್ತಮ ಚಲನಚಿತ್ರಗಳನ್ನು ನೀಡಿದ್ದಾರೆ. ಅವರ ಕೊನೆಯ ಚಿತ್ರ 'ದಿ ಲೀಗ್ ಆಫ್ ಎಕ್ಸ್ಟ್ರಾಆರ್ಡಿನರಿ ಜಂಟಲ್ಮೆನ್'.


ಚಾಡ್ವಿಕ್ ಬೂಸ್ಮನ್ Chadwick Boseman
ಚಾಡ್ವಿಕ್ ಬೋಸ್ಮನ್ ಅವರ ನಿಧನದ ಸುದ್ದಿ ಕೇಳಿ, ವಿಶ್ವಾದ್ಯಂತ  ಅವರ ಲಕ್ಷಾಂತರ ಅಭಿಮಾನಿಗಳ ಕಣ್ಣೀರಿಟ್ಟಿದ್ದಾರೆ. ತಮ್ಮ ವಯಸ್ಸಿನ 43 ನೇ ವಯಸ್ಸಿನಲ್ಲಿ, ಚಾಡ್ವಿಕ್ ಆಗಸ್ಟ್ 28 ರಂದು ಕೊಲೊನ್ ಕ್ಯಾನ್ಸರ್ ವಿರುದ್ಧ ಹೋರಾಡುವಾಗ ನಿಧನರಾಗಿದ್ದಾರೆ. ಮಾರ್ವೆಲ್ ಸಿನೆಮ್ಯಾಟಿಕ್ ಯೂನಿವರ್ಸ್ನ ದೊಡ್ಡ ಭಾಗವಾಗಿದ್ದ ಚಾಡ್ವಿಕ್ ಅವರ ಕೊನೆಯ ಚಿತ್ರ 'ಮಾ ರೆನಿಜ್ ಬ್ಲ್ಯಾಕ್ ಬಾಟಮ್.