ಖ್ಯಾತ ಹಿರಿಯ ನಟ Ravi Patwardhan ನಿಧನ, 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ

ರವಿ ಪಟವರ್ಧನ್ ಶನಿವಾರ ರಾತ್ರಿ ತಮಗಾಗುತ್ತಿರುವ ಉಸಿರಾಟದ ತೊಂದರೆ ಬಗ್ಗೆ ದೂರಿದ್ದರು. ಬಳಿಕ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ.

Last Updated : Dec 6, 2020, 04:45 PM IST
  • ಖ್ಯಾತ ಮರಾಠಿ ಮತ್ತು ಹಿಂದಿ ಚಿತ್ರ ನಟ ರವಿ ಪಟವರ್ಧನ್ ನಿಧನ.
  • 200ಕ್ಕೂ ಅಧಿಕ ಚಿತ್ರಗಳು ಹಾಗೂ 150 ನಾಟಕಗಳಲ್ಲಿ ಅವರು ನಟಿಸಿದ್ದರು.
  • ಹೃದಯಾಘಾತದಿಂದ ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ.
ಖ್ಯಾತ ಹಿರಿಯ ನಟ Ravi Patwardhan ನಿಧನ, 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ title=

ಮುಂಬೈ: ಖ್ಯಾತ ಬಾಲಿವುಡ್ (Bollywood) ಹಿರಿಯ ನಟ ಹಾಗೂ  ಮರಾಠಿ ಚಿತ್ರ ನಟ ರವಿ ಪಟವರ್ಧನ್ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.  ದೀರ್ಘಕಾಲದಿಂದ ಅವರು ವಯೋ ಸಹಜ ಕಾಯಿಲೆ ವಿರುದ್ಧ ಹೋರಾಡುತ್ತಿದ್ದರು. ಭಾನುವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ.

ಇದನ್ನು ಓದಿ-ಕನ್ನಡದ ಹಿರಿಯ ನಟ ಹುಲಿವಾನ್ ಗಂಗಾಧರಯ್ಯ ಕೊರೋನಾಗೆ ಬಲಿ

ಮಾರ್ಚ್ ನಲ್ಲಿ ಹೃದಯಾಘಾತ ಸಂಭವಿಸಿತ್ತು
ಮೂಲಗಳು ನೀಡಿರುವ ಮಾಹಿತಿ ಪ್ರಕಾರ ನಟ ರವಿ ಪಟವರ್ಧನ್ (Ravi Patwardhan) ಶನಿವಾರ ತಮಗೆ ಉಸಿರಾಟದ ತೊಂದರೆಯಗುತ್ತಿದೆ ಎಂದು ದೂರಿದ್ದರು. ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಇಂದು ಬೆಳಗ್ಗೆ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ. ಮುಂಬೈ ಮಿರರ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಅವರು ಹೃದಯಾಘಾತಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

ಇದ್ನನ್ನು ಓದಿ-ಖ್ಯಾತ ಹಿರಿಯ ಶಾಸ್ತ್ರೀಯ ಗಾಯಕ Pandit Jasraj ನಿಧನ

150 ನಾಟಕ ಹಾಗೂ 200 ಚಿತ್ರಗಳಲ್ಲಿ ನಟನೆ
ಮರಾಠಿ ಮತ್ತು ಹಿಂದಿ ನಟ ರವಿ ಪಟವರ್ಧನ್ ಸೆಪ್ಟೆಂಬರ್ 6, 1937 ರಂದು ಜನಿಸಿದ್ದಾರೆ. ಅಂಕುಶ್ (ಹಿಂದಿ), ಆಶ್ವಾ ಆಸ್ಯ ಸುನಾ (ಮರಾಠಿ), ಉಂಬರ್ಠಾ (ಮರಾಠಿ), ತೇಜಾಬ್ (ಹಿಂದಿ) ಮತ್ತು ಜ್ಯೋತಿಬಾ ಫುಲೆ (ಮರಾಠಿ) ಚಿತ್ರದಲ್ಲಿನ ತಮ್ಮ ಅದ್ಭುತ ನಟನೆಗೆ ಹೆಸರುವಾಸಿಯಾಗಿದ್ದರು. ರವಿ ಪಟವರ್ಧನ್ ಸುಮಾರು 150 ನಾಟಕಗಳು ಮತ್ತು 200 ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ನಅವರು ಕೊನೆಯ ಬಾರಿಗೆ ಮರಾಠಿ ಧಾರಾವಾಹಿ(ಅಗ ಬೈ ಸಾಸು ಬೈ)ಯಲ್ಲಿ ದಾದಾ (ದತ್ತಾತ್ರೇಯ ಕುಲಕರ್ಣಿ) ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ತಮ್ಮ ಪತ್ನಿ, ಇಬ್ಬರು ಮಕ್ಕಳು, ಸೊಸೆ, ಮತ್ತು ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.

Trending News