ಭಾರತದ ರಿಕ್ಕಿ ಕೇಜ್ಗೆ ಗ್ರ್ಯಾಮಿ ಅವಾರ್ಡ್: `ನಮಸ್ತೆ` ಎನ್ನುತ್ತಾ ವೇದಿಕೆ ಏರಿದ ಸಂಗೀತ ಸರದಾರ
ಭಾರತದ ಮ್ಯೂಸಿಕ್ ಕಂಪೋಸರ್ ರಿಕ್ಕಿ ಕೇಜ್(Ricky Kej)ಗೆ ಗ್ರ್ಯಾಮಿ ಅವಾರ್ಡ್ ದೊರೆತಿದೆ. 2015ರಲ್ಲಿ ‘ವಿಂಡ್ಸ್ ಆಫ್ ಸಂಸಾರ’ ಎಂಬ ಆಲ್ಬಂಗೆ ಗ್ರ್ಯಾಮಿ ಅವಾರ್ಡ್ ದೊರೆತಿತ್ತು.
64ನೇ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮ (Grammy Awards 2022)ವು ಅಮೆರಿಕಾದ ಲಾಸ್ ವೇಗಸ್ನಲ್ಲಿ ನಡೆದಿದ್ದು, ಭಾರತದ ಮ್ಯೂಸಿಕ್ ಕಂಪೋಸರ್ ರಿಕ್ಕಿ ಕೇಜ್(Ricky Kej)ಗೆ ಪ್ರಶಸ್ತಿ ದೊರೆತಿದೆ.
"ನಮಸ್ತೆ" ಎನ್ನುತ್ತಾ ವೇದಿಕೆ ಏರಿದ ರಿಕ್ಕಿ ಭಾರತೀಯ ಸಂಸ್ಕೃತಿಯನ್ನು ವಿದೇಶದಲ್ಲೂ ಪಸರಿಸಿದರು ಎನ್ನಬಹುದು. ಇನ್ನು ಈ ಹಿಂದೆ 2015ರಲ್ಲಿ ‘ವಿಂಡ್ಸ್ ಆಫ್ ಸಂಸಾರ’ (Winds of Samsara) ಎಂಬ ಆಲ್ಬಂಗೆ ಗ್ರ್ಯಾಮಿ ಅವಾರ್ಡ್ ದೊರೆತಿತ್ತು. ಈ ಬಾರಿ ‘ಡಿವೈನ್ ಟೈಡ್ಸ್’ (Devine Tides)ಎಂಬ ಆಲ್ಬಂಗೆ ಸ್ಟೀವರ್ಟ್ ಕೋಪ್‌ಲ್ಯಾಂಡ್ ಮತ್ತು ರಿಕ್ಕಿ ಕೇಜ್ ಇಬ್ಬರೂ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದಾರೆ.
ಇದನ್ನು ಓದಿ: Drug Case: ಮತ್ತೆ ಸದ್ದು ಮಾಡಿದ ಡ್ರಗ್ ಕೇಸ್: ನಟಿ ಸೇರಿ ಬಿಗ್‌ಬಾಸ್ ವಿನ್ನರ್ ಪೊಲೀಸ್ ವಶಕ್ಕೆ..!
ಇನ್ನು ಜಾನ್ ಬ್ಯಾಟಿಸ್ಟ್ ಸಂಗೀತ ವಿಭಾಗದಲ್ಲಿ ಬರೋಬ್ಬರಿ 5 ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಅಮೆರಿಕದ ಸಿಂಗರ್ ಒಲಿವಿಯಾ ರೋಡ್ರಿಗೊ ಅವರು ಸಹ ಈ ಬಾರಿಯ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಮೂರು ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಇದನ್ನು ಓದಿ: KGF 2 Booking: 'ಕೆಜಿಎಫ್ 2' ಸಿನಿಮಾಗೆ ಬುಕ್ಕಿಂಗ್ ಆರಂಭ.. ದಾಖಲೆ ಬರೆದ ಯಶ್ ಸಿನಿಮಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.