Drug Case: ಮತ್ತೆ ಸದ್ದು ಮಾಡಿದ ಡ್ರಗ್‌ ಕೇಸ್‌: ನಟಿ ಸೇರಿ ಬಿಗ್‌ಬಾಸ್‌ ವಿನ್ನರ್‌ ಪೊಲೀಸ್‌ ವಶಕ್ಕೆ..!

ಬಂಜಾರಾ ಹಿಲ್ಸ್‌ನ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್‌ನಲ್ಲಿರುವ ಪುಡ್ಡಿಂಗ್ ಮತ್ತು ಮಿಂಕ್ ಪಬ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಟಿ ನಿಹಾರಿಕಾ ಕೊನಿಡೆಲಾ ಮತ್ತು ಖ್ಯಾತ ಗಾಯಕ, ತೆಲುಗು ಬಿಗ್ ಬಾಸ್ ವಿನ್ನರ್  ರಾಹುಲ್ ಸಿಪ್ಲಿಗುಂಜ್ ಭಾಗಿಯಾಗಿದ್ದರು ಎನ್ನಲಾಗಿದ್ದು, ಅವರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Written by - Zee Kannada News Desk | Edited by - Zee Kannada News Desk | Last Updated : Apr 4, 2022, 03:09 PM IST
  • ನಟಿ ನಿಹಾರಿಕಾ ಕೊನಿಡೆಲಾ, ಬಿಗ್‌ಬಾಸ್‌ ವಿನ್ನರ್‌ ರಾಹುಲ್‌ ಪೊಲೀಸರ ವಶಕ್ಕೆ
  • ಪುಡ್ಡಿಂಗ್ ಮತ್ತು ಮಿಂಕ್ ಪಬ್ ಮೇಲೆ ಪೊಲೀಸರ ದಾಳಿ
  • ಡ್ರಗ್‌ ಕೇಸ್‌ನಲ್ಲಿ ನಿಹಾರಿಕಾ ಕೊನಿಡೆಲಾ, ರಾಹುಲ್‌ ಸೇರಿ 130ಕ್ಕೂ ಹೆಚ್ಚು ಮಂದಿ ಬಂಧನ
Drug Case: ಮತ್ತೆ ಸದ್ದು ಮಾಡಿದ ಡ್ರಗ್‌ ಕೇಸ್‌: ನಟಿ ಸೇರಿ ಬಿಗ್‌ಬಾಸ್‌ ವಿನ್ನರ್‌ ಪೊಲೀಸ್‌ ವಶಕ್ಕೆ..! title=
ನಟಿ ನಿಹಾರಿಕಾ ಕೊನಿಡೆಲಾ ಬಂಧನ

ತೆಲಂಗಾಣ: ಹೈದರಾಬಾದ್‌ನ ಶ್ರೀಮಂತ ಜನವಸತಿ ಪ್ರದೇಶವಾದ ಬಂಜಾರಾ ಹಿಲ್ಸ್‌ನಲ್ಲಿ ನಡೆಯುತ್ತಿದ್ದ ಡ್ರಗ್‌ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಟಿ ನಿಹಾರಿಕಾ ಕೊನಿಡೆಲಾ ಮತ್ತು ಬಿಗ್ ಬಾಸ್ ವಿನ್ನರ್ ರಾಹುಲ್ ಸಿಪ್ಲಿಗುಂಜ್ ಸೇರಿದಂತೆ 130ಕ್ಕೂ ಹೆಚ್ಚು ಮಂದಿಯನ್ನು  ವಶಕ್ಕೆ ಪಡೆದಿದ್ದಾರೆ. 

ಕಳೆದ 2 ದಿನದ ಹಿಂದೆ ತಡರಾತ್ರಿ ಬಂಜಾರಾ ಹಿಲ್ಸ್‌ (Banjara Hills)ನ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್‌ನಲ್ಲಿರುವ ಪುಡ್ಡಿಂಗ್ ಮತ್ತು ಮಿಂಕ್ ಪಬ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಟಿ ನಿಹಾರಿಕಾ ಕೊನಿಡೇಲಾ (Actress Niharika Konidela),ಖ್ಯಾತ ಗಾಯಕ (Singer) ಹಾಗೂ ತೆಲುಗು ಬಿಗ್ ಬಾಸ್ ( Bigg Boss) ಸೀಸನ್‌ 3ರ ವಿನ್ನರ್  ರಾಹುಲ್ ಸಿಪ್ಲಿಗುಂಜ್ ಭಾಗಿಯಾಗಿದ್ದರು ಎನ್ನಲಾಗಿದ್ದು, ಅವರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಇದನ್ನು ಓದಿ: KGF 2 Booking: 'ಕೆಜಿಎಫ್ 2' ಸಿನಿಮಾಗೆ ಬುಕ್ಕಿಂಗ್ ಆರಂಭ.. ದಾಖಲೆ ಬರೆದ ಯಶ್ ಸಿನಿಮಾ

ಸಮಯದ ಮಿತಿ ಮೀರಿಯೂ ಪಬ್​ ತೆರೆದಿರುವುದಾಗಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಬಳಿಕ ದಾಳಿ ನಡೆಸಿದ ಪೊಲೀಸರು, ಪಬ್‌ನಲ್ಲಿ ಕೊಕೇನ್, ಗಾಂಜಾ ಮತ್ತು ಐಎಸ್‌ಡಿಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನು ಓದಿ: ತಮ್ಮನ್ನು ಬದಲಿಸಿದ ವ್ಯಕ್ತಿಯ ಬಗ್ಗೆ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಹೇಳಿದ್ದೇನು ಗೊತ್ತೇ?

ಪಬ್​ ಮಾಲೀಕ ಸೇರಿ 130ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News