Shruti Haasan speech : ನಟ ಕಮಲ್ ಹಾಸನ್ ಕೂಡ ವೇದಿಕೆ ಮೇಲೆ ಕೂತು ಹುಡುಗಿಯ ಮಾತು ಕೇಳುತ್ತಿದ್ದರು. ಯಾಕೆಂದರೆ ಆಕೆ ಈಗ ಸೌತ್ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್. ಕೋಟಿಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ತಾರೆ ತೆಲುಗು ಮತ್ತು ತಮಿಳಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಹೆಸರು ಮಾಡಿದ್ದಾರೆ. ಲಕ್ಷಾಂತರ ಸಿನಿ ಪ್ರೇಕ್ಷಕರ ಪ್ರೀತಿಗೆ ಪಾತ್ರರಾದ ತಾರೆ ಈಕೆ. ಜೊತೆಗೆ ಭಾರತೀಯ ಚಿತ್ರರಂಗದ ಸ್ಟಾರ್ ಹೀರೋ ಮಗಳು.


COMMERCIAL BREAK
SCROLL TO CONTINUE READING

ಸದ್ಯ ಟಾಲಿವುಡ್ ಸ್ಟಾರ್ ಹೀರೋಯಿನ್ ಒಬ್ಬರ ಥ್ರೋಬ್ಯಾಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ. ವೀಡಿಯೋದಲ್ಲಿ ಹುಡುಗಿಯೊಬ್ಬಳು ತುಂಬಿದ ಜನಸಮೂಹದ ಮುಂದೆ ಭಯೋತ್ಪಾದನೆಯ ವಿರುದ್ಧ ಭಾವೋದ್ರಿಕ್ತ ಭಾಷಣವನ್ನು ಆತ್ಮವಿಶ್ವಾಸದಿಂದ ಮಾಡಿದರು. ಗಾಂಭೀರ್ಯದ ಕಂಠ ಮತ್ತು ಅಖಂಡ ಆತ್ಮಸ್ಥೈರ್ಯದಿಂದ ಭಾಷಣ ಮಾಡಿದ ಹುಡುಗಿಯನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. 


ಇದನ್ನೂ ಓದಿ:12ನೇ ತರಗತಿ ಇನ್ನೂ ಮುಗಿದಿಲ್ಲ, ಆಗ್ಲೇ ಒಂದು ಮಗುವಿನ ತಾಯಿ, ಸ್ಟಾರ್‌ ನಟನ ಹೆಂಡತಿ ಈಕೆ..! 


ಹೌದು.. ಆ ಹುಡುಗಿ ಬೇರೆ ಯಾರೂ ಅಲ್ಲ ವಿಶ್ವನಾಯಕ ನಟ ಕಮಲ್‌ ಹಾಸನ್‌ ಪುತ್ರಿ ಶ್ರುತಿ ಹಾಸನ್.  ಕಮಲ್‌ ಮತ್ತು ಸಾರಿಕಾ ದಂಪತಿಯ ಹಿರಿಯ ಪುತ್ರಿ. ಈ ಸುಂದರಿ ತನ್ನ ಆರನೇ ವಯಸ್ಸಿನಲ್ಲಿ 'ದೇವರ್‌ ಮಗನ್' ಚಿತ್ರದ ಮೂಲಕ ಗಾಯಕಿಯಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. 


ಕಮಲ್ ಹಾಸನ್ ಅಭಿನಯದ 'ಹೇ ರಾಮ್' ಚಿತ್ರದಲ್ಲೂ ಶ್ರುತಿ ಬಾಲನಟಿಯಾಗಿ ನಟಿಸಿದ್ದರು. ಚೆನ್ನೈನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ, ಶ್ರುತಿ ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿದರು. ಅಲ್ಲಿ ಸೈಂಟ್ ಆಂಡ್ರ್ಯೂಸ್ ಕಾಲೇಜಿನಲ್ಲಿ ಮನೋವಿಜ್ಞಾನ ಪದವಿಯನ್ನು ಪೂರ್ಣಗೊಳಿಸಿದರು. ಯುನೈಟೆಡ್ ಸ್ಟೇಟ್ಸ್ನಲ್ಲಿ ಸಂಗೀತವನ್ನು ಅಧ್ಯಯನ ಮಾಡಿದರು. ಬಾಲಿವುಡ್‌ ‘ಲಕ್’ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.


ಇದನ್ನೂ ಓದಿ:ಒಂದು ರಾತ್ರಿ ನನ್ನ ಸ್ನೇಹಿತರ ಜೊತೆ ಮಲಗು..! ಸ್ಟಾರ್‌ ನಟಿಗೆ ಗಂಡನಿಂದಲೇ ಒತ್ತಾಯ


 


ಓ ಧೀರುಡು ಚಿತ್ರದ ಮೂಲಕ ತೆಲುಗು ಮತ್ತು ತಮಿಳಿನಲ್ಲಿ ನಟನೆಯನ್ನು ಪ್ರಾರಂಭಿಸಿದರು. ಮೊದಲ ಸಿನಿಮಾ ಫ್ಲಾಪ್ ಆಗಿದ್ದರಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿದರು. ಆದರೆ ಅದ್ಯಾವುದನ್ನೂ ಲೆಕ್ಕಿಸದೆ ಇಂದು ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕೊನೆಯದಾಗಿ ಪ್ರಭಾಸ್ ಅಭಿನಯದ ಸಲಾರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ಶೃತಿ. ಸಲಾರ್ 2 ಸಿನಿಮಾ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - 
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.