ಒಂದು ರಾತ್ರಿ ನನ್ನ ಸ್ನೇಹಿತರ ಜೊತೆ ಮಲಗು..! ಸ್ಟಾರ್‌ ನಟಿಗೆ ಗಂಡನಿಂದಲೇ ಒತ್ತಾಯ

Bollywood actress Life : ಬಾಲಿವುಡ್‌ನಲ್ಲಿ ಟಾಪ್ ಹೀರೋಯಿನ್‌ಗಳು ಉದ್ಯಮಿಯನ್ನು ಮದುವೆಯಾಗಿ ಸೆಟಲ್‌ ಆಗುವ ಟ್ರೆಂಡ್ ಇದೆ. ಈ ಪ್ರಮುಖ ನಟಿ ಕೂಡ ಉದ್ಯಮಿಯೊಬ್ಬರನ್ನು ಮದುವೆಯಾಗಿ ಸಾವಿರ ಕನಸುಗಳೊಂದಿಗೆ ಹನಿಮೂನ್‌ಗೆ ಹೋಗಿದ್ದರು. ಆದರೆ ಅವಳು ನಿರೀಕ್ಷಿಸಿದ್ದೇ ಬೇರೆ... ಅಲ್ಲಿ ನಡೆದದ್ದೇ ಬೇರೆ..
 

1 /8

ಎಲ್ಲರ ಜೀವನವೂ ಸುಂದರವಾಗಿರುವುದಿಲ್ಲ. ಎಲ್ಲರ ದಾಂಪತ್ಯವೂ ಚನ್ನಾಗಿರುವುದಿಲ್ಲ. ಎಲ್ಲವನ್ನೂ ಪಡೆಯಲು ಅದೃಷ್ಟವೂ ಬೇಕು. ಟಾಪ್ ನಟಿಯನ್ನ ಸ್ವಂತ ಪತಿಯೇ ಹರಾಜಿಗಿಟ್ಟ ಘಟನೆಯೊಂದು ಭಾರತೀಯ ಸಿನಿರಂಗದಲ್ಲಿ ನಡೆದಿದೆ.. ಯಾರು ಆ ಖ್ಯಾತ ನಟಿ..? ಅಂದು ನಡೆದ ಘಟನೆ ಏನು..? ಬನ್ನಿ ನೋಡೋಣ..   

2 /8

ಆ ನಟಿ ಬೇರೆ ಯಾರೂ ಅಲ್ಲ ಕರಿಷ್ಮಾ ಕಪೂರ್. ಕರಿಷ್ಮಾ ಒಂದು ಕಾಲದಲ್ಲಿ ಸ್ಟಾರ್‌ ನಾಯಕಿ. ಈಕೆಯ ಸಿನಿಮಾ ನೋಡಲು ಸಿನಿ ಪ್ರೇಕ್ಷಕರು ಚಿತ್ರಮಂದಿರಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ ಮದುವೆಯ ನಂತರ ಈ ಸುಂದರಿ ಬದುಕು ಮಾತ್ರ ಛಿದ್ರ ಛಿದ್ರವಾಗಿತ್ತು..  

3 /8

ಉದ್ಯಮಿಯನ್ನು ಮದುವೆಯಾದ ನಟಿ ಕಂಡ ಕನಸಿನ ಬದುಕು ಅವಳಿಗೆ ಸಿಗಲಿಲ್ಲ. ನಟಿ ತನ್ನ ದಾಂಪತ್ಯ ಜೀವನದಲ್ಲಿ ನರಕಯಾತನೆ ಅನುಭವಿಸಿದರು. ಯೋಚಿಸಲಾಗದಂತಂಹ ಅನೇಕ ಘಟನೆಗಳು ಆಕೆಯ ಜೀವನದಲ್ಲಿ ಸಂಭವಿಸಿತು. ಮದುವೆಯಾದ ಒಂದೇರಡು ದಿನದಲ್ಲಿಯೇ ತಾನು ಕೆಟ್ಟ ಮನುಷ್ಯನನ್ನು ಆರಿಸಿಕೊಂಡಿದ್ದಾಗಿ ಅರಿತುಕೊಂಡಳು.  

4 /8

ಒಂದು ಕಾಲದಲ್ಲಿ ಬಾಲಿವುಡ್ ಅನ್ನು ಆಳಿದ ನಾಯಕಿಯರಲ್ಲಿ ಕರಿಷ್ಮಾ ಕಪೂರ್ ಒಬ್ಬರು. ಅವರು ಸೈಫ್ ಅಲಿ ಖಾನ್ ಪತ್ನಿ ಕರೀನಾ ಕಪೂರ್ ಅವರ ಅಕ್ಕ.  90 ರ ದಶಕದಲ್ಲಿ ಕರಿಷ್ಮಾಗೆ ಬಾಲಿವುಡ್‌ನಲ್ಲಿ ಇನ್ನಿಲ್ಲದೆ ಕ್ರೇಜ್  ಇತ್ತು. ಈ ಬ್ಯೂಟಿ ಸಿನಿಮಾ ರಿಲೀಸ್ ಆದ್ರೆ ಸಾಕು.. ಪ್ರೇಕ್ಷಕರು ಥಿಯೇಟರ್ ಗಳತ್ತ ಓಡುತ್ತಿದ್ದರು.  

5 /8

ವರ್ಷಕ್ಕೆ ಕನಿಷ್ಠ ಐದರಿಂದ ಆರು ಚಿತ್ರಗಳನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ತುಂಬಾ ಬ್ಯುಸಿ ನಟಿಯರಲ್ಲಿ ಇವರೂ ಒಬ್ಬರು. ಸುಮಾರು ಒಂದು ದಶಕದಿಂದ ಬಾಲಿವುಡ್‌ನಲ್ಲಿ ಆಕೆಯ ವೇಗಕ್ಕೆ ಕಡಿವಾಣ ಹಾಕದವರೇ ಇರಲಿಲ್ಲ. ಅಷ್ಟು ಬೇಡಿಕೆಯಿತ್ತು ಈ ನಟಿಗೆ..   

6 /8

ಈ ಸುಂದರಿ ದೆಹಲಿಯ ಉದ್ಯಮಿ ಸಂಜಯ್ ಕಪೂರ್ ಅವರನ್ನು 2003 ರಲ್ಲಿ ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯಾದ 11 ವರ್ಷಗಳ ನಂತರ ಅವರ ನಡುವಿನ ಜಗಳದಿಂದ ವಿಚ್ಛೇದನ ಪಡೆದರು. ಇತ್ತೀಚಿನ ಸಂದರ್ಶನವೊಂದರಲ್ಲಿ, ಈ ಸುಂದರಿ ತನ್ನ ಮಾಜಿ ಪತಿ ಬಗ್ಗೆ ಶಾಕಿಂಗ್‌ ವಿಚಾರಗಳನ್ನು ಬಹಿರಂಗಪಡಿಸಿದರು..  

7 /8

ಸಂಜಯ್ ಕಪೂರ್ ಒಳ್ಳೆಯ ವ್ಯಕ್ತಿಯಲ್ಲ. ನನ್ನ ತುಂಬಾ ಹಿಂಸಿಸಿದ್ದಾನೆ. ಹನಿಮೂನ್‌ಗೆ ಹೋದಾಗ ಅವನು ತನ್ನ ಸ್ನೇಹಿತರೊಂದಿಗೆ ರಾತ್ರಿ ಕಳೆಯಬೇಕೆಂದು ಒತ್ತಾಯಿಸಿದ್ದ. ಒಂದು ಹಂತದಲ್ಲಿ ನನ್ನನ್ನು ಹರಾಜಿಗೆ ಇಟ್ಟಿದ್ದ ಅಂತ ಕರಿಷ್ಮಾ ಹೇಳಿಕೊಂಡಿದ್ದಾಳೆ.    

8 /8

ನಾನು ಅಂತಹ ಕೆಲಸ ಮಾಡುವುದಿಲ್ಲ ಎಂದು ದೃಢವಾಗಿ ಹೇಳಿದೆ. ಇದಲ್ಲದೆ, ಆಕೆಯನ್ನು ಮದುವೆಯಾದ ನಂತರವೂ ಸಂಜಯ್ ತನ್ನ ಅಕ್ರಮ ಸಂಬಂಧವನ್ನು ಮುಂದುವರೆಸಿದ್ದ. ಇದನ್ನೆಲ್ಲ ಸಹಿಸಲಾಗದೆ ಆತನಿಗೆ ವಿಚ್ಛೇದನ ನೀಡಿದ್ದೇನೆ ಎಂದು ಕರಿಷ್ಮಾ ಹೇಳಿದ್ದಾರೆ.