ನವದೆಹಲಿ: ಫ್ಯಾಶನ್‌ ಮತ್ತು ಇವೆಂಟ್‌ ಮ್ಯಾನೇಜ್ಮೆಂಟ್‌ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಿಸೆಸ್‌ ಯೂನಿವರ್ಸ್‌ ಶ್ರೀಮತಿ ಸುಧಾ ನೇತೃತ್ವದ ಸುಧಾ ವೆಂಚರ್ಸ್‌ ಸಂಸ್ಥೆಯ ಆಯೋಜನೆಯಲ್ಲಿ ನಡೆದ ಮಿಸ್ಟರ್, ಮಿಸ್ ಮತ್ತು ಮಿಸೆಸ್ ಸ್ಟಾರ್‌ ಯೂನಿವರ್ಸ್‌ 2023 ಹಾಗೂ ಇಂಟರ್‌ ನ್ಯಾಷನಲ್‌ ಪ್ರೈಡ್‌ ಅವಾರ್ಡ್‌ 2023 ಅದ್ಭುತವಾದ ಯಶಸ್ಸಿನೊಂದಿಗೆ ವರ್ಣರಂಜಿತ ತೆರೆ ಕಂಡಿತು. ಮೊಟ್ಟಮೊದಲ ಬಾರಿಗೆ ಯುನೈಟೆಡ್‌ ಅರಬ್‌ ಇಮೆರೆಟ್ಸ್‌ ನ ದುಬೈನಲ್ಲಿ ಇಂಡೋ-ಇಂಟರ್ನ್ಯಾಷನಲ್ ಫ್ಯಾಶನ್ ಕಾರ್ನಿವಲ್ ಮತ್ತು ಅವಾರ್ಡ್ಸ್ (IIFCA) ಮತ್ತು ಇಂಟರ್ನ್ಯಾಷನಲ್ ಪ್ರೈಡ್ ಅವಾರ್ಡ್ಸ್ (IPA) ಸೌಂದರ್ಯ ಪ್ರದರ್ಶನ ಅದ್ಧೂರಿಯಾಗಿ ನಡೆಯಿತು.
 
ಖ್ಯಾತ ಬಾಲಿವುಡ್ ಸೆಲೆಬ್ರಿಟಿ ನಟ ಅಫ್ತಾಬ್ ಶಿವದಾಸನಿ ಅವರು ಸೌಂದರ್ಯ ಸ್ಪರ್ಧೆ ವಿಜೇತರಿಗೆ ಕ್ರೌನ್ ಹಾಕಿದರು ಹಾಗೂ ಎಲ್ಲಾ ಸಾಧಕರಿಗೆ ಇಂಟರ್‌ ನ್ಯಾಷನಲ್‌ ಪ್ರೌಡ್ ಪ್ರಶಸ್ತಿಗಳನ್ನು ವಿತರಿಸಿದರು. ವಿಶ್ವದ 28 ದೇಶಗಳ ಸ್ಪರ್ಧಿಗಳು ಈ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.ಮಿಸೆಸ್ ಸ್ಟಾರ್ ಯೂನಿವರ್ಸ್ ವಿಭಾಗದಲ್ಲಿ ಮಂಗಳೂರಿನ ಶ್ರೀಮತಿ ಮಂಗಳಾ ಸ್ವಾತಿ ವಿಜೇತರಾದರೆ, ನೇಪಾಳದ ಶ್ರೀಮತಿ ಶೃಷ್ಟಿ ಮಹರ್ಜನ್ ಮಿಸ್ ಸ್ಟಾರ್ ಯೂನಿವರ್ಸ್ ಕ್ರೌನ್‌ ಅನ್ನು ಮುಡಿಗೇರಿಸಿಕೊಂಡರು. ದೀಪಕ್ ಸೋಮಶೇಖರ್ ಅವರು ಮಿಸ್ಟರ್ ಯೂನಿವರ್ಸ್ ಪ್ರಶಸ್ತಿಗೆ ಭಾಜನರಾದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: "ನಾವು ಈಗ ಕೊಟ್ಟಿರುವ 5 ಗ್ಯಾರಂಟಿಗಳನ್ನು ಇಡೀ ದೇಶವೇ ಮೆಚ್ಚಿದೆ"


ಡಾ. ಇಶಾ ಫರ್ಹಾನ್ ಖುರೈಶಿ, ಮಿಸ್. ಯೂನಿವರ್ಸ್ ಸಾಲಿಡಾರಿಟಿ UAE ಯುನೈಟೆಡ್ ನೇಷನ್ಸ್, ಮಿಸಸ್ ಯೂನಿವರ್ಸ್ ನೇಪಾಳ 2019 ಖ್ಯಾತಿಯ ಶ್ರೀಮತಿ ಅನಿಲಾ ಶ್ರೇಷ್ಠಾ, ಮಿಸೆಸ್ ಯೂನಿವರ್ಸ್ ಮ್ಯಾನ್ಮಾರ್ ಪುರಸ್ಕೃತೆ ಹನಿ ಚೋ, ಎಮಿರೇಟ್ಸ್ ಹೋಲ್ಡಿಂಗ್ ಗ್ರೂಪ್ ನ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಹನೀಫ್ ಶೇಖ್, ತೀರ್ಪುಗಾರರಾಗಿದ್ದರು.ಈ ಸೌಂದರ್ಯ ಸ್ಪರ್ಧೆ ಕಾರ್ಯಕ್ರಮದ ಪ್ರಮುಖ ಅಂಶವೆಂದರೆ ಟ್ಯಾಲೆಂಟ್ ರೌಂಡ್ ಮತ್ತು ಫ್ಯಾಶನ್ ರನ್‌ವೇ. ಇದರಲ್ಲಿನ ಪ್ರಖ್ಯಾತ ವಿನ್ಯಾಸಕರ ವಿನ್ಯಾಸವನ್ನು ಪ್ರದರ್ಶಿಸಲಾಯಿತು. ಫ್ಯಾಶನಬಲ್‌ ಸುತ್ತಿನಲ್ಲಿ ಅಜ್ಮಾನ್‌ ನ ಸೈಯದಾ ಫ್ಯಾಶನ್ ಸ್ಪರ್ಧಿಗಳಿಗಾಗಿ ಹಾಗೂ ರೂಪದರ್ಶಿಗಳಿಗಾಗಿ ತಾವು ವಿನ್ಯಾಸಗೊಳಿಸಿದ ವಿಶೇಷ ವಿನ್ಯಾಸಗಳನ್ನು ಪ್ರದರ್ಶಿಸಿದರು. ಪಾರ್ಟಿ ಗೌನ್‌ ಸುತ್ತಿನಲ್ಲಿ ಪ್ರಿಯಾ ಫ್ಯಾಶನ್ಸ್ ಬೊಟಿಕ್ ಒಡತಿ ಶ್ರೀಮತಿ ಪ್ರಿಯಾ ಫೆರ್ನಾಂಡಿಸ್ ತಮ್ಮ ಆಕರ್ಷಕ ವಿನ್ಯಾಸಗಳ ಸಂಗ್ರಹವನ್ನು ಪ್ರದರ್ಶಿಸಿದರು.


ಮಿಸೆಸ್ ಯೂನಿವರ್ಸ್ ಚಾರ್ಮ್-2019 & ಮಿಸೆಸ್ ಈಸ್ಟ್ ಪೆಸಿಫಿಕ್ ಏಷ್ಯಾ ಸೇರಿದಂತೆ ಹತ್ತು ಹಲವು ಸೌಂದರ್ಯ ಸ್ಪರ್ಧೆಯಲ್ಲಿ winner  ಸುಧಾ ವೆಂಚರ್ಸ್‌ನ ಸಂಸ್ಥಾಪಕರು, ನಿರ್ದೇಶಕರು ಮತ್ತು ಸಂಘಟಕರಾದ ಮಿಸೆಸ್‌ ಯೂನಿವರ್ಸ್‌ ಸುಧಾ ಅವರು ಈ ಇಂಟರ್‌ ನ್ಯಾಷನಲ್‌ ಸೌಂದರ್ಯ ಸ್ಪರ್ಧೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ವಿವಿಧ ದೇಶಗಳ ಹಲವು ಕ್ಷೇತ್ರಗಳ ಗಣ್ಯರು, ಸೆಲೆಬ್ರಿಟಿಗಳು ಮತ್ತು ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಂಭ್ರಮಿಸಿದರು.


ಇದನ್ನೂ ಓದಿ:ತಾಕತ್ತಿದ್ದರೆ ದೇಶದ ಎಲ್ಲಾ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಜಾರಿ ಮಾಡಲಿ : ಸಿಎಂ ಚಾಲೆಂಜ್


ಈ ಅದ್ಭುತ ಕಾರ್ಯಕ್ರಮವನ್ನು ವೀಕ್ಷಿಸಲು Dr bu Abdullah Dubai, prince, social media, famous Bada bhai, Chota bhai, many celebrities and chief guest royal family members ಅಲ್ ಮುಅಲ್ಲಾ ಕುಟುಂಬದ ಉಮ್ ಅಲ್ ಕುವೈನ್‌ನ ಪದಾಧಿಕಾರಿಗಳನ್ನು ವಿಐಪಿ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಈ ಫ್ಯಾಶನ್ ಕಾರ್ನೀವಲ್ ಮತ್ತು ಪ್ರಶಸ್ತಿ ಕಾರ್ಯಕ್ರಮವು ವಿವಿಧ ರಾಷ್ಟ್ರೀಯತೆ ಮತ್ತು ಹಿನ್ನೆಲೆಯಿಂದ ಜನರನ್ನು ಒಟ್ಟುಗೂಡಿಸಿ, ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶವನ್ನು ನೀಡಿತು. IIFCA ಮತ್ತು ಇಂಟರ್ನ್ಯಾಷನಲ್ ಪ್ರೈಡ್ ಪ್ರಶಸ್ತಿಗಳು (IPA) ಸಾಧಕರಿಗೆ ತಮ್ಮ ಯಶಸ್ಸನ್ನು ಪ್ರದರ್ಶಿಸಲು ಮತ್ತು ಆಯಾ ಕ್ಷೇತ್ರಗಳಲ್ಲಿ ಅವರ ಕೊಡುಗೆಗಳನ್ನು ಗುರುತಿಸಿಕೊಳ್ಳಲು ಉತ್ತಮ ವೇದಿಕೆಯನ್ನು ಒದಗಿಸುತ್ತದೆ.
 
ಎಸ್‌.ವಿ ಫಿದಾ ಇಂಟರ್‌ನ್ಯಾಶನಲ್ ಬ್ಯೂಟಿ ಪೇಜೆಂಟ್ ಬ್ಯಾನರ್‌ನಡಿಯಲ್ಲಿ ಮಿಸೆಸ್‌ ಯೂನಿವರ್ಸ್ ಸುಧಾ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.