Actor Darshan murder case : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅನ್ನು ರೇಣುಕಾಸ್ವಾಮಿ ಕುಟುಂಬ ಕ್ಷಮಿಸಿದ್ರೆ ದರ್ಶನ್ ಗೆ ಜೈಲು ಶಿಕ್ಷೆ ತಪ್ಪುತ್ತಾ, ರೇಣುಕಾಸ್ವಾಮಿ ಕುಟುಂಬವನ್ನ ವಿಜಯ ಲಕ್ಷ್ಮಿ ಸಂಪರ್ಕ ಮಾಡಿದ್ರೆ ಇದು ಸಾಧ್ಯನಾ ಎಂಬ ಚರ್ಚೆಗಳು ದೊಡ್ಡ ಮಟ್ಟಕ್ಕೆ ನಡೆಯುತ್ತಿವೆ. ಮತ್ತೊಂದು ಕಡೆ ದೊಡ್ಡ ದೊಡ್ಡವರನ್ನ ಭೇಟಿ ಮಾಡಿದ್ರೆ ಈ ಕೇಸಲ್ಲಿ ಉಪಯೋಗ ಏನು. ಕೊಲೆ ಕೇಸಲ್ಲಿ ಕಾನೂನು ಏನು ಹೇಳುತ್ತೆ ಎಂಬುದನ್ನು ನಾವು ಹೇಳ್ತಿವಿ ಕೇಳಿ.


COMMERCIAL BREAK
SCROLL TO CONTINUE READING

ಹೌದು.. ಕೊಲೆ ಕೇಸಲ್ಲಿ ರೇಣುಕಾಸ್ವಾಮಿ‌ ಕುಟುಂಬಸ್ಥರು ರಾಜಿ ಆದ್ರೆ ಈ ಕೇಸ್ ಏನಾಗುತ್ತೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಸಿಆರ್ ಪಿಸಿ 320 ರ ಪ್ರಕಾರ ಕೊಲೆ ಪ್ರಕರಣ ಸೇರಿ ಕೆಲವು ಪ್ರಕರಣಗಳಲ್ಲಿ ಕಾಂಪ್ರಮೈಸ್ ಗೆ ಅವಕಾಶ ಇದೆ. ಮುಸ್ಲಿಂ ಕಾನೂನಿನಲ್ಲಿ ದಿಯಾತ್ ಕುಟುಂಬದವರು ಕ್ಷಮಿಸಿದರೆ ಅವಕಾಶವಿದೆ. ಭಾರತದಲ್ಲಿ ಕೆಲ ಸಂದರ್ಭಗಳಲ್ಲಿ ಕೊಲೆ ಕೇಸಲ್ಲಿ ಕಾಂಪ್ರಮೈಸ್ ಗೆ ಅವಕಾಶವನ್ನು ಕೊಡಲಾಗಿದೆ. ಇದೇ ರೀತಿ ರಾಜಿ ಆದ ಕೆಲ ಕೇಸ್‌ಗಳು ಯಾವುದು ಅಂದ್ರೆ..


ಇದನ್ನೂ ಓದಿ:ಒಂಟಿ ಹೆಣ್ಣು ಕಂಡ್ರೆ ಹುಚ್ಚನಂತೆ ವರ್ತಿಸುತ್ತಾನೆ..! ಖ್ಯಾತ ನಟನ ಮೇಲೆ ಗಾಯಕಿಯ ಶಾಕಿಂಗ್‌ ಹೇಳಿಕೆ


ರಾಜಿಯಾದ ಕೆಲವು ಕೊಲೆ ಪ್ರಕರಣಗಳು


ಮಹಾರಾಷ್ಟ್ರದಲ್ಲಿ ಮಹಮ್ಮದ್ ಯುಸೂಫ್ ಅನ್ಸಾರಿ ಕೇಸ್- 2014
ಗುಜರಾತ್ ನಲ್ಲಿ ಚಂದ್ರಕಾಂತ್ ಭಸಾವರ್ ಕೇಸ್- 2011
ಉತ್ತರ ಪ್ರದೇಶದಲ್ಲಿ  ರಾಮಕುಮಾರ್- 2008 
ಕರ್ನಾಟಕದಲ್ಲಿ ಶಶಿಧರ್ ಎನ್ನುವವರ ಪ್ರಕರಣ-2013 ಕಾಂಪ್ರಮೈಸ್‌ಗೆ ಅವಕಾಶ ನೀಡಲಾಗಿದೆ


ಹಾಗಾದ್ರೆ ದರ್ಶನ್ ಗೂ ಈ ರೀತಿಯಾಗಿ ಕಾಂಪ್ರಮೈಸ್ ಸಿಗುತ್ತಾ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆದರೆ ದರ್ಶನ್ ಗೆ ಕಾಂಪ್ರಮೈಸ್ ಆಗೋಕೆ ಯಾವುದೇ ಕಾರಣಕ್ಕೂ ಅವಕಾಶ ಸಿಗಲ್ಲ. ಮೊದಲನೇಯದಾಗಿ ರಾಜಿ ಆಗೋಕೆ ರೇಣುಕಾಸ್ವಾಮಿ ಕುಟುಂಬಸ್ಥರು ಒಪ್ಪಬೇಕು.


ಇದನ್ನೂ ಓದಿ:100ಕ್ಕೂ ಹೆಚ್ಚು ಸಿನಿಮಾದಲ್ಲಿ ನಟನೆ.. ಅಪರೂಪದ ಸೌಂದರ್ಯ, ಕೊನೆಗೆ ಅನಾಥೆಯಾಗಿ ಸಾವನ್ನಪ್ಪಿದ ಸ್ಟಾರ್ ನಟಿ..!


ಮತ್ತೊಂದು ಕಡೆ ದರ್ಶನ್ ಸಹ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಸಂತ್ರಸ್ಥನ ಕುಟುಂಬಕ್ಕೆ ಪರಿಹಾರ ನೀಡಬೇಕು. ಕೊಲೆಯ ಹಿಂದೆ ಯಾವುದೇ ಉದ್ದೇಶವಿರಬಾರದು ಹಾಗೂ ಕೊಲೆ ಆಕಸ್ಮಿಕವಾಗಿ ನಡೆದಿರಬೇಕು. ಇಷ್ಟೆಲ್ಲ ಇದ್ದಾಗ ನ್ಯಾಯಾಲಯ ವಿರಳಾತಿವಿರಳ ಸಂದರ್ಭದಲ್ಲಿ ಆ ಕೇಸಿನ ಅನುಗುಣವಾಗಿ ರಾಜಿಗೆ ಅವಕಾಶ ನೀಡುತ್ತೆ. 


ಆದರೆ ದರ್ಶನ್ ಪ್ರಕರಣದಲ್ಲಿ ಇದೆಲ್ಲವೂ ಸಾಧ್ಯವೇ ಇಲ್ಲ. ಏಕೆಂದರೆ ಇದು ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ಅಪಹರಿಸಿ ಕೊಲೆ ಮಾಡಿ ಸಾಕ್ಷಿ ನಾಶಕ್ಕೆ ಯತ್ನಿಸಿರುವ ಪ್ರಕರಣವಾಗಿದೆ. ಅದಲ್ಲದೇ ಇದು ಆಕಸ್ಮಿಕವಾಗಿ ನಡೆದಿರುವ ಕೊಲೆಯಲ್ಲ. ಹಲ್ಲೆ ಮಾಡಿದ್ರೆ ವ್ಯಕ್ತಿ ಸಾಯುತ್ತಾನೆ ಅಂತಾ ಗೊತ್ತಿದ್ರೂ ಭೀಕರವಾಗಿ ಹಲ್ಲೆ ಮಾಡಿ ಕರೆಂಟ್ ಶಾಕ್ ಕೊಟ್ಟು ಕೊಂದಿರುವ ಆರೋಪವಿದೆ.  


ಇದನ್ನೂ ಓದಿ:ಚೊಚ್ಚಲ ತಾಯ್ತನದ ಮಧ್ಯೆ ಮಹತ್ವದ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ..! ಇನ್ಮುಂದೆ ಸಿನಿಮಾ ಮಾಡಲ್ವಾ?


ಹೀಗಾಗಿ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗುವ ಸಾಧ್ಯತೆ ಇಲ್ಲವೇ ಇಲ್ಲ. ಹೀಗಾಗಿಯೇ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾದ ಮೇಲೆ ಜಾಮೀನು ಅರ್ಜಿ ಸಲ್ಲಿಸಲು ದರ್ಶನ್ ಪರ ವಕೀಲರು ಮುಂದಾಗಿದ್ದಾರೆ. ಒಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ನಡೆದ ಕೊಲೆಯಲ್ಲಿ ನಟ ದರ್ಶನ್ ಹಾಗೂ ಸಂಗಡಿಗರಿಗೆ ಕಾನೂನಿನ ಸಂಕಷ್ಟ ತಪ್ಪಿದ್ದಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.