Actress Ashwini death : 100ಕ್ಕೂ ಹೆಚ್ಚು ಸಿನಿಮಾ ಮಾಡಿದ ಈ ಸ್ಟಾರ್ ಹೀರೋಯಿನ್ ಕೊನೆಗೆ ಅನಾಥೆಯಾಗಿ ಸಾವನ್ನಪ್ಪಿದ್ದು, ಸಿನಿರಂಗವನ್ನೇ ಬೆಚ್ಚಿ ಬೀಳಿಸಿತ್ತು.. ಅಷ್ಟೇ ಅಲ್ಲ ಭಿಕ್ಷುಕರ ರೀತಿ ನಿಧನರಾಗಿದ್ದರು.. ಅದೂ ಶವಸಂಸ್ಕಾರಕ್ಕೂ ಹಣವಿಲ್ಲದ ಪರಿಸ್ಥಿತಿಯಲ್ಲಿ.. ಯಾರು ಆ ನಟಿ..? ಏನಾಯ್ತು..? ಬನ್ನಿ ತಿಳಿಯೋಣ..
ಚಿತ್ರೋದ್ಯಮವೆಂದರೆ ಬಣ್ಣದ ಲೋಕ.. ಈ ಬಣ್ಣದ ಲೋಕದ ಹಿಂದೆ ಹಲವು ಕಷ್ಟ, ನಷ್ಟ, ದುರಂತಗಳು ಇವೆ. ಆದರೆ ಅವುಗಳನ್ನು ತೋರಿಸದೆ ಪ್ರೇಕ್ಷಕರನ್ನು ರಂಜಿಸುತ್ತಾರೆ ನಟ-ನಟಿ ನಿರ್ದೇಶಕರು. ಕೋಟಿ-ಕೋಟಿ ಸಂಪಾದಿಸಿದವರೂ.. ಆ ಹಣವನ್ನು ಇಟ್ಟುಕೊಳ್ಳಲಾಗದೆ.. ಕೊನೆಗೆ ತುಂಬಾ ಕಷ್ಟ ಪಡುತ್ತಾರೆ. ಈಗ ಅಂತಹ ನಾಯಕಿಯ ಬಗ್ಗೆ ನಿಮಗೆ ಹೇಳಲು ಹೊರಟ್ಟಿದ್ದೇವೆ..
ಹೆಚ್ಚಿನ ಜನರು ಕಠಿಣ ಪರಿಶ್ರಮದಿಂದ ಸಿನಿರಂಗಕ್ಕೆ ಪ್ರವೇಶಿಸುತ್ತಾರೆ. ಸಾಲು ಸಾಲು ಸಿನಿಮಾಗಳನ್ನು ಮಾಡಿ.. ಸ್ಟಾರ್ ಪಟ್ಟದೊಂದಿಗೆ ಬ್ಯುಸಿಯಾಗುತ್ತಾರೆ.. ಆದ್ರೆ, ಸೆಲೆಬ್ರಿಟಿಯಾಗಿ ಐಡೆಂಟಿಟಿ ಉಳಿಸಿಕೊಳ್ಳಬೇಕೆಂದರೂ ಕಷ್ಟಪಡಬೇಕಾಗುತ್ತದೆ. ಸತತ ಆಫರ್ ಗಳನ್ನು ಪಡೆದು ಕೆರಿಯರ್ ನಲ್ಲಿ ಒಳ್ಳೆ ಕ್ರೇಜ್ ಗಿಟ್ಟಿಸಿಕೊಂಡಿರುವ ತಾರೆಯರು.. ನಂತರ ಅವಕಾಶಗಳು ಕಡಿಮೆಯಾಗುತ್ತಿದ್ದಂತೆ ನಿಧಾನವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಇಂಡಸ್ಟ್ರಿಗೆ ಮರಳಿ ಬರಲಾಗದೆ, ಆದಾಯವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ ಸಾಕಷ್ಟು ನಟಿಯರೂ ಇದ್ದಾರೆ.. ಅಂತಹವರ ಪೈಕಿ ನಟಿ ಅಶ್ವಿನಿ ಒಬ್ಬರು...
ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಗಳ ಎದುರು ನಟಿಸುವ ಮೂಲಕ ಅಶ್ವಿನಿ ಸಿನಿ ರಸಿಕರ ನೆಚ್ಚಿನ ನಟಿಯಾಗಿ ಗುರುತಿಸಿಕೊಂಡರು. 90 ರ ದಶಕದಲ್ಲಿ ತೆಲುಗಿನಲ್ಲಿ ನಟಿಸುವುದನ್ನು ನಿಲ್ಲಿಸಿದರು. ಚಾಲೆಂಜ್ ಗೋಪಾಲಕೃಷ್ಣ ಎಂಬ ಕನ್ನಡ ಸಿನಿಮಾದಲ್ಲಿ ನಟ ಶಶಿಕುಮಾರ ಜೊತೆ ನಟಿಸಿದ್ದಾರೆ..
ಆ ನಂತರ ಅಶ್ವನಿ ಅವರು ತಮಿಳು ಸಿನಿಮಾಗಳಿಗೆ ಸೀಮಿತವಾದರು. ನೆಲ್ಲೂರು ಜಿಲ್ಲೆಯಲ್ಲಿ ಜನಿಸಿದ ಅಚ್ಚ ತೆಲುಗು ಬಾಲ ಕಲಾವಿದೆಯಾಗಿ ನಟಿಸಿ ನಂತರ ನಾಯಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ಹಾಗೆ ನೋಡಿದರೆ ಸುಮಾರು 150 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದ ಚೆಲುವೆ, ಕೊನೆಗೆ ಯಾರೂ ಇಲ್ಲದೆ ಅನಾಥಳಾಗಿ ತೀರಿಕೊಂಡಳು. ಅವಳಿಗೆ ಇಷ್ಟೊಂದು ಕಷ್ಟ ಬಂದಿದ್ದು ಹೇಗೆ? ಅಶ್ವಿನಿ ಸಾವಿನ ನಂತರ ಅವರ ಶವವನ್ನು ಸ್ವಗ್ರಾಮಕ್ಕೆ ಸಾಗಿಸಲೂ ಹಣವಿರಲಿಲ್ಲ. ಆಗ ಸ್ಟಾರ್ ಹೀರೋ ಪಾರ್ಧಿಬನ್ ಸಹಾಯ ಮಾಡಿದ್ದಾರಂತೆ.
ಜುಲೈ 14, 1967 ರಂದು ಜನಿಸಿದ ಅಶ್ವಿನಿ ಅವರು ಹಿರಿಯ ನಟಿ ಭಾನುಮತಿ ಅವರ ಭಕ್ತ ಧ್ರುವ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ನಟಿಸಿದ್ದಾರೆ. ಇಂಟರ್ ಓದುತ್ತಿರುವಾಗಲೇ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.