ಬೆಂಗಳೂರು: ಸ್ಯಾಂಡಲ್ವುಡ್‌ ಯಾವುದೇ ಭಾಷೆ ಸಿನಿಮಾಗಿಂತ ಕಮ್ಮಿ ಇಲ್ಲ. ಇಲ್ಲಿಯೇ ಕಥೆ ಸೃಷ್ಠಿಯಾಗಿ ಜನ ಮೆಚ್ಚುವುದರ ಜೊತೆಗೆ ಬೇರೆ ಭಾಷೆಯ ನಿರ್ದೇಶಕರು ಕನ್ನಡ ಸಿನಿಮಾವನ್ನು ಡಬ್‌ ಮಾಡಿ ರೀಲಿಸ್‌ ಮಾಡುತ್ತಾರೆ.


COMMERCIAL BREAK
SCROLL TO CONTINUE READING

ಬೇರೆ ಭಾಷೆಯ ಸಿನಿಮಾಗಳ ಕಥೆ ಮೆಚ್ಚುವಂತ್ತಿದ್ದರೇ ಅಂಥಹ ಕಥೆಗಳನ್ನು ಸ್ಯಾಂಡಲ್ವುಡ್‌ ನಲ್ಲಿ ಅದಕ್ಕೊಂದು ಹೊಸ ರೂಪ ಕೊಟ್ಟು ಸಿನಿಮಾ ತೆಗೆಯುವುದನ್ನು ನೋಡಬಹುದು. ಅದೇ ರೀತಿ ಈಗಾಗಲೇ ಹಿಂದಿ, ತಮಿಳು, ತೆಲುಗು ಡಬ್‌ ಆಗಿ ಕನ್ನಡದಲ್ಲಿ ಬಿಡುಗಡೆಯಾಗುತ್ತಿವೆ. ಅದರಂತೆ ಈಗ ಗುಜರಾತಿ ಸಿನಿಮಾವೊಂದು ಕನ್ನಡದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. 


ಇದನ್ನೂ ಓದಿ: ಮತ್ತೆ 3 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ‘ಪಠಾಣ್​’ ಬಿಡುಗಡೆ; ಇಲ್ಲಿದೆ ಚಿತ್ರ ಮಂದಿರಗಳ ವಿವರ.. !


ʼರಾಯರು ಬಂದರು ಮಾವನ ಮನೆಗೆʼ ಎಂಬ ಶೀರ್ಷೀಕೆ ಆಧಾರಿತ ಚಿತ್ರವೊಂದು ಕನ್ನಡಿಗರ ಮನೆ ತಲುಪಲಿದೆ. ಸದ್ಯ ಈ ಚಿತ್ರವನ್ನು ಜಾಕ್‌ ಮಂಜು ತಮ್ಮದೇ ಶಾಲಿನಿ ಆರ್ಟ್‌ ಬ್ಯಾನರ್‌ ನಡಿ ಬಿಡುಗಡೆ ಮಾಡುತ್ತಿದ್ದಾರೆ. ಸಿನಿಮಾ ಕುರಿತಂತೆ ಖಾಸಗಿ ಹೋಟೆಲ್ ನಲ್ಲಿ ಟ್ರೇಲರ್ ಲಾಂಚ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಡೀ ಚಿತ್ರತಂಡ ಭಾಗಿಯಾಗಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.


ಇನ್ನುಳಿದಂತೆ ನಿರ್ಮಾಪಕರು ಹಾಗೂ ವಿತರಕರು ಆಗಿರುವ ಜಾಕ್ ಮಂಜು ಮಾತನಾಡಿ,ಕನ್ನಡ ಸಿನಿಮಾಗಳನ್ನು ಮಾಡಿ ಅನ್ಯ ಭಾಷೆಗೆ ಡಬ್ ಮಾಡಿ ಅಲ್ಲಿ ಹೋಗಿ ರಿಲೀಸ್ ಮಾಡಿ ಬಹಳಷ್ಟು ಸಿನಿಮಾಗಳು ಗೆದ್ದು ಇವತ್ತು ಕನ್ನಡ ಭಾಷೆ ಹಾಗೂ ಕನ್ನಡ ಸಿನಿಮಾಗಳಿಗೆ ರಾಜ್ಯದ ಮೂಲೆ ಮೂಲೆಗಳಲ್ಲಿ ಗೌರವ ತಂದುಕೊಟ್ಟಿವೆ. ಕಳೆದ ನಾಲ್ಕೈದು ವರ್ಷಗಳಿಂದ ಇದು ನಡೆಯುತ್ತಿದೆ.


ಇದನ್ನೂ ಓದಿ: Meghna Gaonkar : ಇಳಕಲ್ ಸೀರೆ ಉಟ್ಕೊಂಡು.. ಮೊಣಕಾಲ್ ಗಂಟ ಎತ್ಕೊಂಡು ಪಡ್ಡೆಹೈಕ್ಳ ನಿದ್ದೆಗೆಡಿಸಿದ ನಟಿ ಮೇಘನಾ .. 


ಒಂದೇ ಗುಣಗಳಿರುವ ಜೋಡಿ ಪ್ರೀತಿಸಿ ಮದುವೆಯಾಗುತ್ತಾರೆ. ಮದುವೆಯಾದ ಹುಡುಗಿ ಗಂಡನ ಮನೆಗೆ ಬರುವುದು ಕಾಮನ್. ಕೆಲವೊಮ್ಮೆ ಮನೆ ಅಳಿಯನಾಗಿ ಹೋಗುವುದು ಅಪರೂಪ.‌ ಇಲ್ಲಿ ಮನೆ ಅಳಿಯನಾಗಿ ಹೋಗುವ ನಾಯಕನ ವ್ಯಥೆ ಕಥೆ ಸುತ್ತಾ ಇಡೀ ಸಿನಿಮಾ ಸಾಗುತ್ತದೆ. ರತ್ನಪುರ, ಜಿತಿ ಲೇ ಜಿಂದಗಿ ಎಂಬ ಎರಡು ಹಿಟ್‌ ಚಿತ್ರ ಕೊಟ್ಟಿರುವ ವಿಫ‌ುಲ್‌ ಶರ್ಮಾ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗಿದ್ದು, ಶೈಲೇಶ್‌ ಧಮೇಲಿಯಾ, ಅನಿಲ್‌ ಸಂಘವಿ, ಭರತ್‌ ಮಿಸ್ತ್ರೀ ಬಂಡವಾಳ ಹೂಡಿದ್ದಾರೆ.


ಸಾಧುತುರ್ಷಾ, ಕಿಂಜಲ್‌ ರಾಜಪ್ರಿಯಾ, ರಾಗಿ ಜಾನಿ ಮತ್ತು ಕಾಮಿನಿ ಪಾಂಚಾಲ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಪ್ರಶಾಂತ್‌ ಬರೋಟ್, ಜಯ್‌ ಪಾಂಡ್ಯ ಮತ್ತು ಜೈಮಿನಿ ತ್ರಿವೇದಿ ಇತರರು ತಾರಾಬಳಗದಲ್ಲಿದ್ದಾರೆ. ಕೌಟುಂಬಿಕ ಕಥಾಹಂದರದ ರಾಯರು ಬಂದರು ಮಾವನ ಮನೆಗೆ ಸಿನಿಮಾ ಮುಂದಿಮ ತಿಂಗಳ 7ರಂದು ಥಿಯೇಟರ್ ಗೆ ಎಂಟ್ರಿ ಕೊಡಲಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.