Pathan': ಮತ್ತೆ 3 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ‘ಪಠಾಣ್​’ ಬಿಡುಗಡೆ; ಇಲ್ಲಿದೆ ಚಿತ್ರ ಮಂದಿರಗಳ ವಿವರ.. !

Pathan' Re Release: ‘ಪಠಾಣ್​’ ಸಿನಿಮಾ ಇದೀಗ ಮತ್ತೆ 3000 ಪರದೆಗಳ ಮೂಲಕ ಶಾರುಖ್​ ಖಾನ್​ ಕಾಂಬ್ಯಾಕ್‌ ಆಗಲಿದ್ದಾರೆ. ಅಭಿಮಾನಿಗಳ ಒತ್ತಾಸೆ ಮೇರೆಗೆ ‘ಪಠಾಣ್​’ ಸಿನಿಮಾ ಮತ್ತೆ ತೆರೆ ಮೇಲೆ ಬರಲು ಸಜ್ಜಾಗಿದೆ. 

Written by - Zee Kannada News Desk | Last Updated : Jun 10, 2023, 03:23 PM IST
  • ಮತ್ತೆ 3 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ‘ಪಠಾಣ್​’ ಬಿಡುಗಡೆ
  • ಕಮ್​ಬ್ಯಾಕ್​ ಚಿತ್ರವಾಗಿ ಮೂಡಿಬಂದ ‘ಪಠಾಣ್​’ ಸಿನಿಮಾ
  • ಶಾರುಖ್​ ಖಾನ್​ಗೆ ಹಾಗೂ ದೀಪಿಕಾ ಪಡುಕೋಣೆ ಚಿತ್ರ
Pathan': ಮತ್ತೆ 3 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ‘ಪಠಾಣ್​’ ಬಿಡುಗಡೆ; ಇಲ್ಲಿದೆ ಚಿತ್ರ ಮಂದಿರಗಳ ವಿವರ.. ! title=

ಮುಂಬೈ: ನಟ ಶಾರುಖ್​ ಖಾನ್ ಹಾಗೂ ದೀಪಕಾ ಪಡುಕೋಣೆ ನಟನೆಯ ‘ಪಠಾಣ್​’ ಸಿನಿಮಾ ರೀಲೀಸ್‌ಗೂ ಮುನ್ನ ಬಾರಿ ಚರ್ಚೆಗೆ ಕಾರಣವಾಗಿತ್ತು. ಬಳಿಕ ಅದ್ದೂರಿಯಾಗಿ ಪ್ರಪಂಚದಾದ್ಯಂತ ಬಿಡುಗಡೆಯಾಗಿ 1050 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಕೆ .ಜಿ .ಎಫ್‌2 , ʼಬಾಹುಬಲಿʼ ದಾಖಲೆ ಮುರಿದಿತ್ತು.

ಇದೀಗ ಮತ್ತೆ 3000 ಪರದೆಗಲ್ಲಿ ಶಾರುಖ್​ ಖಾನ್​ ಕಾಂಬ್ಯಾಕ್‌ ಆಗಲಿದ್ದಾರೆ. ಮೊದಲ ಬಾರಿ ಸಿನಿಮಾ ಬಿಡುಗಡೆ ವೇಳೆ ಅನೇಕ ದೇಶಗಳನ್ನು ಕೈ ಬಿಟ್ಟು ಚಿತ್ರ ರೀಲಿಸ್‌ ಮಾಡಿದ್ದರು. ಶಾರುಖ್ ಗೆ ದೇಶದ ಗಡಿ ಮೀರಿ ಅಭಿಮಾನಿಗಳನ್ನು ಹೊಂದಿರುವುದರಿಂದ ವಿದೇಶಗಳಲ್ಲಿ ಈ  ಸಿನಿಮಾ ಬಿಡುಗಡೆ ಒತ್ತಾಸೆ ಕೇಳಿ ಬರುತ್ತಿದೆ.

ಇದನ್ನೂ ಓದಿ: Meghna Gaonkar : ಇಳಕಲ್ ಸೀರೆ ಉಟ್ಕೊಂಡು.. ಮೊಣಕಾಲ್ ಗಂಟ ಎತ್ಕೊಂಡು ಪಡ್ಡೆಹೈಕ್ಳ ನಿದ್ದೆಗೆಡಿಸಿದ ನಟಿ ಮೇಘನಾ .. 

ಈ ಹಿನ್ನಲೆ  ಮತ್ತೆ ‘ಪಠಾಣ್ʼ ಚಿತ್ರ ರೀಲಿಸ್‌ ಆಗುತ್ತಿದೆ. ​ಜುಲೈ 13ರಂದು ರಷ್ಯಾ, ತಜಿಕಿಸ್ತಾನ್​, ಅಜರ್​ಬೈಜಾನ್​ ಸೇರಿದಂತೆ ಹಲವು ದೇಶಗಳಲ್ಲಿ ‘ಪಠಾಣ್​’ ಸಿನಿಮಾ ತೆರೆ ಕಾಣಲಿದೆ. ಗೆ ಸಿದ್ದಾರ್ಥ್​ ಆನಂದ್​ ನಿರ್ದೇಶನದ ಈ ಚಿತ್ರದಲ್ಲಿ ನಾಯಕ ನಟ  ಶಾರುಖ್​ ಖಾನ್ ಇವರಿಗೆ ನಟಿಯಾಗಿ ದೀಪಿಕಾ ಪಡುಕೋಣೆ , ವಿಲನ್​ ಪಾತ್ರದಲ್ಲಿ ಜಾನ್​ ಅಬ್ರಾಹಂ ಸಖತ್‌ ಲುಕ್‌ ನಲ್ಲಿ ಮಿಂಚಿದ್ದರು.

ಸದ್ಯ ಶಾರುಖ್​ ಖಾನ್, ಜವಾನ್​’  ಚಿತ್ರದಲ್ಲಿ ಬ್ಯೂಸಿಯಾಗಿದ್ದು, ಇದು ದೊಡ್ಡ ಬಜೆಟ್‌ ಸಿನಿಮಾವಾಗಿದೆ. ಅತ್ತ ‘ಪಠಾಣ್ ಸಿನಿಮಾ ವಿದೇಶಗಳಲ್ಲಿ ಮತ್ತೆ  ಬಿಡುಗಡೆಗೆ ಸಜ್ಜಗಿದ್ದರೇ ಇತ್ತ ʼ ಜವಾನ್​’  ಚಿತ್ರ  ʼಪಠಾಣ್ʼ ಚಿತ್ರದಷ್ಟೇ ಹೆಸರುಗಳಿಸುವ ತಯಾರಿಯಲ್ಲಿದೆ.  

ಇದನ್ನೂ ಓದಿ: Saran Raj: ಸಹಾಯಕ ನಿರ್ದೇಶಕ ನಟ ಶರಣ್​ ರಾಜ್ ಅಪಘಾತದಲ್ಲಿ ನಿಧನ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News