ಪಣಜಿ: ಭಾರತೀಯ ಪನೋರಮಾ ವಿಭಾಗದ ಕಾರ್ಯಕ್ರಮವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ಉದ್ಘಾಟಿಸಿದರು.


COMMERCIAL BREAK
SCROLL TO CONTINUE READING

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಅನುರಾಗ್ ಸಿಂಗ್ ಠಾಕೂರ್ 'ಭಾರತೀಯ ಸಿನಿಮಾಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಇದು ಸಕಾಲ, ಪ್ರತಿಭೆ, ತಂತ್ರಜ್ಞಾನ, ಕೌಶಲ್ಯಭರಿತ ಮಾನವ ಸಂಪನ್ಮೂಲ ಬಳಸಿಕೊಂಡು ವಿಶ್ವದ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಬೇಕು.ಈ ನಿಟ್ಟಿನಲ್ಲಿ ಭಾರತ ವೇದಿಕೆ ಕಲ್ಪಿಸಲಿದೆ. ತೆರೆಯ ಹಿಂದೆ ಕೆಲಸ ಮಾಡಿದ ಹಲವರನ್ನು ಸನ್ಮಾನಿಸಲಾಗುತ್ತಿದೆ" ಎಂದು ಹೇಳಿದರು.


ಇದನ್ನೂ ಓದಿ: ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇಬೇಕು- ಸಿದ್ಧರಾಮಯ್ಯ 


ಭಾರತೀಯ ಪನೋರಮಾ ವಿಭಾಗದಲ್ಲಿ ದಿಮಾಸ ಭಾಷೆಯ ಸೆಮ್‌ಖೋರ್ ಚಿತ್ರ ಪ್ರದರ್ಶಿಸಲಾಯಿತು. ಈ ವೇಳೆ ಚಿತ್ರದ ನಿರ್ದೇಶಕ ಅಮೀ ಬರುಹಾ ಅವರು ಚಿತ್ರವನ್ನು ಗುರುತಿಸಿದ್ದಕ್ಕಾಗಿ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ ಸಮಿತಿಯನ್ನು ಅಭಿನಂದಿಸಿದರು.ಈ ಬಾರಿಯ ಚಿತ್ರೋತ್ಸವದಲ್ಲಿ ೨೪ ಫ್ಯೂಚರ್ ಫಿಲ್ಮ್, ನಾನ್ ಫ್ಯೂಚರ್ ಫಿಲ್ಮ್ ವಿಭಾಗದಲ್ಲಿ ೨೦ ಚಿತ್ರಗಳು ಹಾಗೂ ಭಾರತೀಯ ಪನೋರಮಾ ವಿಭಾಗದಲ್ಲಿ ಹಲವು ಚಿತ್ರಗಳು ಪ್ರದರ್ಶನ ಕಾಣಲಿವೆ.


RSS Chief: '75 ವರ್ಷಗಳು ನಾವು ಸರಿಯಾದ ದಾರಿಯನ್ನು ಅನುಸರಿಸಿಲ್ಲ, ಹೀಗಾಗಿ ಅಭಿವೃದ್ಧಿ ನಿಂತುಹೋಗಿದೆ'


ಗೋವಾದಲ್ಲಿ ೫೨ನೇ ಆವೃತ್ತಿಯ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಗತಿಯಲ್ಲಿದೆ. ಚಿತ್ರೋತ್ಸವದಲ್ಲಿ ದೇಶ-ವಿದೇಶಗಳ ಅತ್ಯುತ್ತಮ ಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.ಜಗತ್ತಿನ ಚಲನಚಿತ್ರಗಳ ಬಗೆಗೆ ತಿಳಿಯಲು ಸಿನಿಪ್ರಿಯರಿಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಏಕ ವೇದಿಕೆಯಾಗಿದೆ.ಈ ಉತ್ಸವದಲ್ಲಿ ಭಾಗವಹಿಸಲು ವರ್ಷಗಳಿಂದ ದೇಶಾದ್ಯಂತ ಸಿನಿಪ್ರಿಯರು ಗೋವಾ ಪ್ರವಾಸಿ ತಾಣಕ್ಕೆ ಭೇಟಿ ಕೊಡುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.