RSS Chief: '75 ವರ್ಷಗಳು ನಾವು ಸರಿಯಾದ ದಾರಿಯನ್ನು ಅನುಸರಿಸಿಲ್ಲ, ಹೀಗಾಗಿ ಅಭಿವೃದ್ಧಿ ನಿಂತುಹೋಗಿದೆ'

RSS Chief On India After Independence - ದೆಹಲಿಯಲ್ಲಿ ನಡೆದ ಸಂತ ಈಶ್ವರ ಸಮ್ಮಾನ್ 2021  (Sant Eeshwar Samman 2021) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat), 'ಕಳೆದ 75 ವರ್ಷಗಳಲ್ಲಿ ನಾವು (ದೇಶ) ಸಾಧಿಸಬೇಕಾದಷ್ಟು ಪ್ರಗತಿ ಸಾಧಿಸಿಲ್ಲ' ಎಂದು ಹೇಳಿದ್ದಾರೆ. 'ದೇಶವನ್ನು (India After Independence) ಮುನ್ನಡೆಸುವ ಹಾದಿಯಲ್ಲಿ ಸಾಗಿದರೆ ನಾವು ಖಂಡಿತಾ ಮುಂದೆ ಸಾಗುತ್ತೇವೆ. ನಾವು ಆ ದಾರಿಯಲ್ಲಿ ಸಾಗಲಿಲ್ಲ. ಹೀಗಾಗಿ ನಾವು ಮುಂದೆಯೂ ಕೂಡ ಸಾಗಲಿಲ್ಲ' ಎಂದೂ ಕೂಡ ಅವರು ಹೇಳಿದ್ದಾರೆ.

Written by - Nitin Tabib | Last Updated : Nov 21, 2021, 09:16 PM IST
  • ಆರ್‌ಎಸ್‌ಎಸ್ ಮುಖ್ಯಸ್ಥರು ದೆಹಲಿಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
  • ಸಾಮಾಜಿಕ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಈ ಕಾರ್ಯಕ್ರಮದಲ್ಲಿ ಗೌರವಿಸಲಾಗಿದೆ.
  • ಇಡೀ ಜಗತ್ತು ನೀಡಿದ ಮಹಾಪುರುಷರಿಗಿಂತ ಹೆಚ್ಚು ಮಹಾಪುರುಷರನ್ನು ಭಾರತ ನೀಡಿದೆ.
RSS Chief: '75 ವರ್ಷಗಳು ನಾವು ಸರಿಯಾದ ದಾರಿಯನ್ನು ಅನುಸರಿಸಿಲ್ಲ, ಹೀಗಾಗಿ ಅಭಿವೃದ್ಧಿ ನಿಂತುಹೋಗಿದೆ' title=
RSS Chief On India After Independence (Photo Courtesy - ANI)

ನವದೆಹಲಿ: RSS Chief On India After Independence - ದೆಹಲಿಯಲ್ಲಿ ನಡೆದ ಸಂತ ಈಶ್ವರ ಸಮ್ಮಾನ್ 2021 ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್  (Mohan Bhagwat) ಭಾಗವತ್, 'ಕಳೆದ 75 ವರ್ಷಗಳಲ್ಲಿ (75 Years Was Not Done) ನಾವು (ದೇಶ) ಸಾಧಿಸಬೇಕಾದಷ್ಟು ಪ್ರಗತಿ ಸಾಧಿಸಿಲ್ಲ' ಎಂದು ಹೇಳಿದ್ದಾರೆ. 'ದೇಶವನ್ನು ಮುನ್ನಡೆಸುವ ಹಾದಿಯಲ್ಲಿ ಸಾಗಿದರೆ ನಾವು ಖಂಡಿತಾ ಮುಂದೆ ಸಾಗುತ್ತೇವೆ. ನಾವು ಆ ದಾರಿಯಲ್ಲಿ ಸಾಗಲಿಲ್ಲ. ಹೀಗಾಗಿ ನಾವು ಮುಂದೆಯೂ ಕೂಡ ಸಾಗಲಿಲ್ಲ' ಎಂದೂ ಕೂಡ ಅವರು ಹೇಳಿದ್ದಾರೆ.

ಸಮಾಜ ಸೇವಕರಿಗೆ ಸನ್ಮಾನ
ವಿಜ್ಞಾನ ಭವನದಲ್ಲಿ 2021 ರ ಸಂತ ಈಶ್ವರ ಸಮ್ಮಾನ್ ಸಮಾರೋಹವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ್ಸಂಘಚಾಲಕ್ ಮೋಹನ್ ಭಾವಗತ ಅವರು ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಸನ್ಮಾನಿಸಿದ್ದಾರೆ. ಈ ಕಾರ್ಯಕ್ರಮವನ್ನು ಸಂತ ಈಶ್ವರ ಫೌಂಡೇಶನ್  ವತಿಯಿಂದ ರಾಷ್ಟ್ರೀಯ ಸೇವಾ ಭಾರತಿ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ಕೇವಲ ಗಟ್ಟಿಯಾಗಿ 'ಜೈ ಶ್ರೀರಾಮ್' ಘೋಷಣೆ ಹೇಳುವುದು ಸಾಕಾಗುವುದಿಲ್ಲ
"ನಾವು ತುಂಬಾ ಗಟ್ಟಿಯಾಗಿ 'ಜೈ ಶ್ರೀ ರಾಮ್' ಎಂಬ ಘೋಷಣೆಯನ್ನು ಮೊಳಗಿಸುತ್ತೇವೆ ಮತ್ತು ಅದನ್ನು ಮೊಳಗಿಸಲು ಬೇಕು. ಆದರೆ ನಾವು ಕೂಡ ಅವರಂತೆ ಆಗಬೇಕು. ಅವರನ್ನು ದೇವರೆಂದು ನಾವು ಭಾವಿಸುತ್ತೇವೆ. ಭರತನಂತಹ ಸಹೋದರನನ್ನು ದೇವರು ಮಾತ್ರ ಪ್ರೀತಿಸಬಲ್ಲನು, ನಮ್ಮಿಂದ ಸಾಧ್ಯವಿಲ್ಲ. ಶ್ರೀಸಾಮಾನ್ಯನ ಆಲೋಚನೆ ಹೀಗಿದೆ. ಆದುದರಿಂದಲೇ ಅವರು ಆ ಮಾರ್ಗವನ್ನು ಅನುಸರಿಸಲು ಸಾಧ್ಯವಿಲ್ಲ. ಸ್ವಹಿತಾಸಕ್ತಿ ಬಿಟ್ಟು ಜನರಿಗೆ ಒಳಿತು ಮಾಡುವುದು ಕಷ್ಟ" ಎಂದು ಭಾಗವತ್ ಈ ಸಂದರ್ಭದಲ್ಲಿ ಹೇಳಿದ್ದಾರೆ. 

ಇದನ್ನೂ ಓದಿ-ಈ ಐದು ಗುಣಗಳನ್ನು ಹೊಂದಿರುವ ಮಹಿಳೆಯರು ವ್ಯಕ್ತಿಯೊಬ್ಬನ ಭಾಗ್ಯವನ್ನೇ ಬದಲಾಯಿಸುತ್ತಾರೆ

ವಿಶ್ವಕ್ಕೆ ಜಗತ್ತಿಗಿಂತ ಹೆಚ್ಚು ಮಹಾಪುರುಷರನ್ನು ನೀಡಿದೆ ಭಾರತ
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿರುವ ಆರ್‌ಎಸ್‌ಎಸ್ ಮುಖ್ಯಸ್ಥರು ತಮ್ಮ ಭಾಷಣದಲ್ಲಿ, ಕಳೆದ 200 ವರ್ಷಗಳಲ್ಲಿ (200 Years Of Indian Freedom Fighters), ವಿಶ್ವದ ಎಲ್ಲಾ ದೇಶಗಳು ಒಟ್ಟಾಗಿ ನೀಡಿರುವಷ್ಟು ಗಣ್ಯ ಮಹಾಪುರುಷರಿಗಿಂತ ಹೆಚ್ಚು ಮಹಾ ಪುರುಷರನ್ನು ಕೇವಲ ಭಾರತ ಒಂದೇ ನೀಡಿದೆ ಎಂದು ಹೇಳಿದ್ದಾರೆ. ಪ್ರತಿಯೊಬ್ಬ ಮಹಾಪುರುಷರ ಜೀವನವು ನಮಗೆ  ಸರ್ವಾಂಗೀಣ ಜೀವನದ ಹಾದಿಯನ್ನು ತೋರಿಸುತ್ತದೆ ಎಂದು ಭಾಗವತ್ ಹೇಳಿದ್ದಾರೆ. ಒಮ್ಮೆ ಸ್ವಾಮಿ ವಿವೇಕಾನಂದರು ನಿಮ್ಮ ಜೀಸಸ್, ಬುದ್ಧರಂತಹ ಅದ್ಭುತ ಮೇಧಾವಿ ಜನರು ಬಂದು ಕೆಲಸ ಮಾಡಿ ಮೌನವಾಗಿ ಹೊರತು ಹೋದರು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-ಯಶಸ್ವಿ ವ್ಯಕ್ತಿಗಳಲ್ಲಿ ಈ 5 ಸಂಗತಿಗಳು ಕಾಮನ್ ಆಗಿರುತ್ತವೆ, ನಿಮ್ಮಲ್ಲಿವೆಯಾ? ಪರಿಶೀಲಿಸಿ

ಸತ್ಯವೊಂದೇ ಗೆಲ್ಲುತ್ತದೆ - ಮೋಹನ್ ಭಾಗವತ್
ಶುಕ್ರವಾರ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ್ದ ಮೋಹನ್ ಭಾಗವತ್ 'ಧರ್ಮ ಪರಿವರ್ತನೆ ನಮ್ಮ ಮುಖ್ಯ ಉದ್ದೇಶವಲ್ಲ, ಭಾರತವನ್ನು ವಿಶ್ವಗುರುವನ್ನಾಗಿಸಬೇಕಿದೆ.  'ಸತ್ಯಮೇವ ಜಯತೇ ನಾನೃತಂ' ಎಂದು ಹೇಳಿದ್ದರು. ಅಂದರೆ,  ಸತ್ಯವೊಂದೇ ಗೆಲ್ಲುತ್ತದೆ, ಅಸತ್ಯವಲ್ಲ. ಎಷ್ಟೇ ಪ್ರಯತ್ನಿಸಿದರೂ ಸುಳ್ಳು ಗೆಲ್ಲುವುದಿಲ್ಲ ಎಂಬುದು ಅದರ ಅರ್ಥವಾಗಿದೆ.

ಇದನ್ನೂ ಓದಿ-ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿವೆ Royal Enfieldನ 4 ಬೈಕ್ ಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News