Jackie Chan: ಜಾಕಿ ಚಾನ್ ವಿಶ್ವ ಸಾಹಸ ಪ್ರಿಯರು ಮರೆಯಲಾಗದ ಹೆಸರು. ಅದರಲ್ಲೂ 90ರ ದಶಕದ ಮಕ್ಕಳು ಜಾಕಿ ಸಿನಿಮಾ ನೋಡುತ್ತಾ ಬೆಳೆದವರು ಎಂದರೆ ಅತಿಶಯೋಕ್ತಿಯಲ್ಲ. ಬ್ರೂಸ್ ಲೀ ಮತ್ತು ಜೇಟ್ಲಿ ನಂತರ, ಚೀನಾದ ನಟರಲ್ಲಿ ಜಾಗತಿಕ ಖ್ಯಾತಿಯನ್ನು ಸಾಧಿಸಿದವರು ಎಂದರೆ ಅದು ಜಾಕಿ ಚಾನ್ ಮಾತ್ರ.


COMMERCIAL BREAK
SCROLL TO CONTINUE READING

ಹಲವು ವಾಹಿನಿಗಳಲ್ಲಿ ಜಾಕಿ ಚಾನ್ ಡಬ್ಬಿಂಗ್ ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಶನಿವಾರ, ಭಾನುವಾರ, ಬೇಸಿಗೆ ರಜೆಯಲ್ಲಿ ಜಾಕಿ ಚಾನ್ ಸಿನಿಮಾಗಳು ಬರುತ್ತಿತ್ತು. ಆ್ಯಕ್ಷನ್ ಇಷ್ಟ ಪಡುವವರೆಲ್ಲ ಟಿವಿಗಳಿಗೆ ನೋಡದೆ ಇರುತ್ತಿರಲಿಲ್ಲ.


ಇದನ್ನೂ ಓದಿ: CCL 2024: ಸಿಸಿಎಲ್ 2024 ಟೂರ್ನಿಯಲ್ಲಿ ಫಿನಾಲೆಗೆ ತಲುಪಿದ ಕರ್ನಾಟಕ ಬುಲ್ಡೋಜರ್ಸ್ ಟೀಂ!!


ಜಾಕಿ ಚಾನ್ ಪ್ರಪಂಚಾದ್ಯಾಂತದ ಜೊತೆಗೆ ಭಾರತದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅವರು ಹಲವಾರು ಬಾಲಿವುಡ್ ನಟರೊಂದಿಗೆ ನಟಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಕುಂಗ್ ಫೂ ಯೋಗ ಚಿತ್ರದಲ್ಲಿ ಸೋನು ಸೂದ್ ಮತ್ತು ಜಾಕಿ ಚಾನ್ ನಡುವಿನ ಹೊಡೆದಾಟದ ದೃಶ್ಯ ಎಲ್ಲರನ್ನೂ ಆಕರ್ಷಿಸಿತ್ತು.


ಜಾಕಿ ಬಾಲನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಬ್ರೂಸ್ ಲೀ ಅವರ ಚಿತ್ರಗಳಲ್ಲಿ ಪೋಷಕ ನಟನಾಗಿ ನಟಿಸಲು ಪ್ರಾರಂಭಿಸಿದರು. ಆದರೆ ಅದರ ನಂತರ ಅವರು ಅನೇಕ ತೊಂದರೆಗಳನ್ನು ಎದುರಿಸಿದರು ಮತ್ತು ಚಿತ್ರದಲ್ಲಿ ಮುಖ್ಯ ನಾಯಕನಾಗಿ ಕಾಣಿಸಿಕೊಂಡರು.


ಇದನ್ನೂ ಓದಿ: Yuva: ʻಯುವʼ ಸಿನಿಮಾ ರಿಲೀಸ್‌ಗೂ ಮುನ್ನ ಚಿತ್ರಕಥೆ ರಿವೀಲ್‌ ಮಾಡಿದ ನಿರ್ದೇಶಕ!


ಹೊಡೆದಾಟದ ದೃಶ್ಯಗಳಲ್ಲಿ ಸಹಾಯಕರಾಗಿ ಆರಂಭಿಸಿದ ಅವರು ನಂತರ ಚೀನಾದ ದೊಡ್ಡ ಸಾಹಸ ನಾಯಕರಾದರು. ಚೀನಾದ ನಟರೊಬ್ಬರು ಹಾಲಿವುಡ್‌ಗೆ ಪಾದಾರ್ಪಣೆ ಮಾಡಿ ಎಲ್ಲರನ್ನು ತನ್ನತ್ತ ಆಕರ್ಷಿಸಿದರು.


ಆಕ್ಷನ್-ಪ್ಯಾಕ್ಡ್ ಕಾಮಿಡಿ ಮೂಲಕ 90 ರ ದಶಕದ ಮಕ್ಕಳನ್ನು ನಗಿಸಿದ ಜಾಕಿ ಚಾನ್ ಅವರಿಗೆ ಈಗ 70 ವರ್ಷ. ಇತ್ತೀಚೆಗೆ ಅವರು ಜನಪ್ರಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ತೆಗೆದ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಫೋಟೋದಲ್ಲಿ ನಾವು ಸಿನಿಮಾಗಳಲ್ಲಿ ಆ್ಯಕ್ಷನ್ ಹೀರೋ ಆಗಿ ಕಂಡಿರುವ ಜಾಕಿ ಚಾನ್ ಈಗ ಮುದುಕನಂತೆ ಕಾಣುತ್ತಿದ್ದಾರೆ.   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ