ಅಂಬೇಡ್ಕರ್ ಜಯಂತಿ ಪ್ರಯುಕ್ತ ‘ದ ರೂಲರ್ಸ್’ ಚಿತ್ರದ ಜೈ ಭೀಮ್ ಲಿರಿಕಲ್ ವಿಡಿಯೋ ರಿಲೀಸ್
Jai Bheem Lyrical Video: Power of Constitution ಅನ್ನೋ ಅಡಿ ಬರಹವಿರೋ ದ ರೂಲರ್ಸ್, ನೈಜ ಘಟನೆಗಳನ್ನಾಧರಿಸಿ ಮಾಡಿರುವ ಚಿತ್ರ. ಕೋಲಾರ ಜಿಲ್ಲೆಯಲ್ಲಿ ನಡೆದಿರೋ, ನಡೆಯುತ್ತಿರೋ ಘಟನಾವಳಿಗಳನ್ನಾಧರಿಸಿ ಮಾಡಿರೋ ಕಥೆ.
ಕರುಣ ಸಂಗೀತ ಸಂಯೋಜನೆ, ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ , ಕೈಲಾಶ್ ಖೇರ್ ದನಿಯಾಗಿರೋ ಜೈ ಭೀಮ್ ಲಿರಿಕಲ್ ವಿಡಿಯೋ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಡಾ ಬಿ.ಆರ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ನೊಂದವರ ಪರ ದನಿಯಾಗುವಂತಹ ಟ್ಯೂನ್ ಇರೋ ಈ ಹಾಡಿಗೆ ಘನವಾದ ಸಾಹಿತ್ಯ, ಅಷ್ಚೇ ಪವರ್ ಫುಲ್ ವಾಯ್ಸ್ ಇರೋ ಈ ಹಾಡು ಸದ್ಯ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್’ ನಲ್ಲಿದೆ.
Power of Constitution ಅನ್ನೋ ಅಡಿ ಬರಹವಿರೋ ದ ರೂಲರ್ಸ್, ನೈಜ ಘಟನೆಗಳನ್ನಾಧರಿಸಿ ಮಾಡಿರುವ ಚಿತ್ರ. ಕೋಲಾರ ಜಿಲ್ಲೆಯಲ್ಲಿ ನಡೆದಿರೋ, ನಡೆಯುತ್ತಿರೋ ಘಟನಾವಳಿಗಳನ್ನಾಧರಿಸಿ ಮಾಡಿರೋ ಕಥೆ. ಸಂವಿಧಾನವೊಂದು ಆಸರೆ ಮತ್ತು ಶಕ್ತಿ ಎಂಥಹದ್ದು, ಅದು ಭಾರತೀಯ ಪ್ರಜ್ಞೆಗೆ ಕೊಟ್ಟಿರೋ ಶಕ್ತಿ ಎಂಥಹದ್ದು ಅನ್ನೋ ವಿಚಾರವನ್ನ ಮೂಲವಾಗಿಸಿಕೊಂಡು ದ ರೂಲರ್ಸ್ ಚಿತ್ರವನ್ನ ಮಾಡಲಾಗಿದೆ.
ಇದನ್ನೂ ಓದಿ: HRA Hike: ಕೇಂದ್ರ ಸರ್ಕಾರಿ ನೌಕರರಿಗೆ ಬಂಬಾಟ್ ಲಾಟರಿ, DA ಹೆಚ್ಚಳದ ಬಳಿಕ HRA ಸರದಿ
ಇಲ್ಲಿ ಮೇಲೂ ಕೀಳು ಅನ್ನೋ ಸಮುದಾಯಗಳ ಸಂಘರ್ಷದಿ ಮರೆಯಾದ ಮಾನವೀಯತೆಯನ್ನ ಒಂದು ಕಡೆ ಬಿಂಬಿಸಿದ್ರೆ, ಮತ್ತೊಂದು ಕಡೆ ಸಂವಿಧಾನ ಕೊಟ್ಟಿರೋ ಸಮಾನತೆಯ ಹಕ್ಕನ್ನ ಪ್ರತಿಪಾದಿಸೋ, ಅದರ ಶಕ್ತಿಯನ್ನ ಪ್ರದರ್ಶಿಸೋ ಮತ್ತೊಂದು ಮಜಲನ್ನ ಅನಾವರಣಗೊಳಿಸಿದ್ದಾರಂತೆ.
ದ ರೂರಲ್ಸ್ ಹೆಸರೇ ಸೂಚಿಸುವಂತೆ ‘ದ’ ಅಂದ್ರೆ ದಲಿತ ಇದಕ್ಕೆ ರೂಲರ್ಸ್ಸ್ ಅಂತ ಹೆಸರಿಟ್ಟಿರೋದ್ರ ಹಿಂದೆ ವಿಚಾರ ಇದೆಯಂತೆ. ಈ 5ಜಿ ಜಮಾನದಲ್ಲೂ ಇನ್ನೂ ಜಾಸಿ ಅನ್ನೋ ಪಿಡುಗು ಎಷ್ಟರ ಮಟ್ಟಿಗೆ ಶೀತಲವಾಗಿ ಸಮಾಜದೊಳಗಿದೆ. ಮತ್ತು ಅದರ ಪರಿಣಾಯ ಏನಾಗ್ತಿದೆ ಅನ್ನೋದನ್ನ ಈ ಚಿತ್ರದಲ್ಲಿ ಹೇಳಲಾಗಿದೆಯಂತೆ.
ದ ರೂಲರ್ಸ್ಸ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನ ಬರೆದಿರೋದು, ಕೋಲಾರದ ಡಾ. ಕೆ.ಎಮ್ ಸಂದೇಶ್. ಡಾ. ಬಿ.ಆರ್ ಅಂಬೇಡ್ಕರ್ ತತ್ವ ಸಿದ್ದಾಂತವನ್ನ ಮೈಗೂಡಿಸಿಕೊಂಡು, ವರ್ಷಗಳಿಂದ ಸಾಮಾಜಿಕ ಸಮಾನತೆಯಾಗಿ ಹೋರಾಟ ಮಾಡ್ತಿರೋ ಇವರ ಬದುಕಿನಲ್ಲೇ ನಡೆದ ಘಟನೆಗಳನ್ನಿಟ್ಟುಕೊಂಡು ಕಮಮರ್ಷಿಯಲ್ಲಾಗಿ ಸಿನಿಮಾ ಮಾಡಿದ್ದಾರೆ.
ಎಂ.ಎನ್.ಎಂ ಮೂವೀಸ್ ಬ್ಯಾನರ್ ನಡಿಯಲ್ಲಿ ಅಶ್ವಥ್ ಬಳಗೆರೆ ನಿರ್ಮಾಣದಲ್ಲಿ, ಉದಯ್ ಭಾಸ್ಕರ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕರುಣ್ ಕೆ.ಜಿ.ಎಫ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ನವ ಪ್ರತಿಭೆ ವಿಶಾಲ್, ರಿತಿಕಾ ಗೌಡ, ಕೆ.ಜಿ.ಎಫ್ ನ ಪಠಾಣ್ ಖ್ಯಾತಿಯ ಪುನೀತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಖುದ್ದು ಸಂದೇಶ್ ತಮ್ಮ ನೈಜ ಪಾತ್ರವನ್ನ ತಾವೇ ಮಾಡಿದ್ದಾರೆ.
ಇದನ್ನೂ ಓದಿ: ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಭಾವೀ ಪತ್ನಿ ಯಾರು ಗೊತ್ತಾ? ಮಿಯಾನ್ ಪಾಲಿನ ದೇವತೆಯಂತೆ ಈ ಅತಿಲೋಕ ಸುಂದರಿ
ಈಗಾಗಲೇ ದ ರೂಲರ್ಸ್ ಟೀಸರ್ ಮತ್ತು ಟ್ರೈಲರ್ ಜನಮನ್ನಣೆ ಗಳಿಸಿದ್ದು ಜೈ ಭೀಮ್ ಹಾಡು ವಿಶೇಷವಾಗಿ ಕಾಣ್ತಿದೆ. ಇಡೀ ರಾಜ್ಯದ ಗಲ್ಲಿ ಗಲ್ಲಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಜೈ ಭೀಮ್ ಹಾಡು ಎಲ್ಲೆಲ್ಲೂ ರಿಂಗಣಿಸ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.