Mahima Saves Malli and Jaidev Life: ಜೀ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಮತ್ತು ಭೂಮಿಕಾ ಮನೆಯಲ್ಲಿ ಇಲ್ಲದಾಗ ಶಕುಂತಲಾ ಮತ್ತು ಜೈದೇವ ಮಲ್ಲಿಯ ಪ್ರಾಣ ತೆಗೆಯಲು ಹೊಂಚು ಹಾಕಿದ್ದಾನೆ. ಭೂಮಿಕಾ ಮನೆಯಲ್ಲಿ ಇಲ್ಲದೆಯಿರುವುದು ಜೈದೇವ ಮತ್ತು ಶಕುಂತಲಾಗೆ ಒಳ್ಳೆಯ ಸಮಯವಾಗಿದ್ದು, ಜೈದೇವ ರೌಡಿಗಳಿಗೆ ದುಡ್ಡು ನೀಡಿ  ತನ್ನ ಪ್ಲಾನ್ ಅನ್ನು  ಯಾವ ಸಮಸ್ಯೆಯಾಗದಂತೆ ಜಾರಿಗೆ  ತಂದಿದ್ದಾನೆ. ವಿಡಿಯೋ ಕಾಲ್‌ನಲ್ಲಿ  ಜೈದೇವನ ಸ್ಥಿತಿಯನ್ನು ನೋಡಲಾರದೆ ಮಲ್ಲಿ ತನ್ನ ಗಂಡನಿಗೆ ನಿಜವಾಗಲೂ ತೊಂದರೆಯಾಗಿದೆಂದು ಅಂದುಕೊಂಡು ಹೊರಟ್ಟಿದಾಳೆ.


COMMERCIAL BREAK
SCROLL TO CONTINUE READING

ಮಲ್ಲಿ ಹೊರಡುವ ಮುನ್ನ ಫೈಲ್ ತೆಗೆದುಕೊಂಡು  ಭೂಮಿಕಾಳಿಗೆ ಫೋನ್ ಮಾಡಿದ್ದಾಳೆ. ಆದರೆ ಭೂಮಿಕಾ ಫೋನ್ ಕನೆಕ್ಟ್ ಆಗದ ಕಾರಣ ಜೈದೇವ ತಿಳಿಸಿದ ಲೊಕೇಶನ್ ಗೆ ಹೊರಟಿದ್ದಾಳೆ. ಮಲ್ಲಿ ಅಲ್ಲಿಗೆ ಹೋದಗ ಬಹಳ ಗಾಬರಿಯಾಗಿ ಎಲ್ಲಿಗೆ ಹೋಗಬೇಕು, ಏನು ಮಾಡಬೇಕೆಂದು ಗೊಂದಲದಲ್ಲಿರುವಾಗ ಭೂಮಿಕಾ ಫೋನ್ ಮಾಡಿದ್ದಾಳೆ. ಅವಾಗ ಭೂಮಿಕಾಗೆ ಮಲ್ಲಿ ಮಾತನಾಡಿದ ಮಾತುಗಳು ಸರಿಯಾಗಿ ಕೇಳಿಸದಿದ್ದರೂ, ಆಕೆ ಗಾಬರಿಯಲ್ಲಿದ್ದಾಳೆಂಬದು ಮಾತ್ರ ಗೊತ್ತಾಗುತ್ತದೆ. ಭೂಮಿಕಾ ಶಕುಂತಲಾಗೆ ಪೋನ್‌ ಮಾಡಿ ವಿಚಾರಿಸಿದಾಗ, ಅವಳು ಮನೆಯಲ್ಲಿ ಇಲ್ಲವೆಂದು ನೆಪ ಹೇಳಿ ಯಾಮಾರಿಸುತ್ತಾಳೆ.


ಇದನ್ನೂ ಓದಿ: ನಟ ಚಂದ್ರು ಪವಿತ್ರಾ ಜಯರಾಮ್ ಜೊತೆ ಮಾಡಿದ ಕೊನೆಯ ವಾಟ್ಸಾಪ್ ಚಾಟ್ ವೈರಲ್!!


ತದನಂತರ ಭೂಮಿಕಾ ಮಹಿಮಾ ಕರೆ ಮಾಡಿ ಮಲ್ಲಿಯ ಪರಿಸ್ಥಿತೆಯನ್ನು ವಿವರಿಸುತ್ತಾಳೆ. ಇನ್ನೊಂದು ಕಡೆ ರೌಡಿಗಳು ಮಲ್ಲಿಯನ್ನು ಕೊಲೆ ಮಾಡಲು ಮುಂದಾದಾಗ ಆಕೆ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬರುತ್ತಾಳೆ. ಅಷ್ಟೊತ್ತಿಗೆ ಮಹಿಮಾ ಸಹ ಪೊಲೀಸರನ್ನು ಕರೆದುಕೊಂಡು ಬಂದಾಗ, ರೌಡಿಗಳು ಪೊಲೀಸರನ್ನು ನೋಡುತ್ತಿದ್ದಂತೆ  ತಪ್ಪಿಸಿಕೊಂಡು ಓಡುತ್ತಾರೆ. ಬಳಿಕ ಮಲ್ಲಿ ಹಾಗೂ ಜೈದೇವನನ್ನು ಪೊಲೀಸರು ಅಲ್ಲಿಂದ ಕರೆದುಕೊಂಡು ಬರುತ್ತಾರೆ. ಮನೆಯಲ್ಲಿ ಶಕುಂತಲಾ ಮತ್ತು ಲಕ್ಷ್ಮಿಕಾಂತ ಮಲ್ಲಿ ಕಥೆ ಮುಗಿತು. ದೊಡ್ಡ ತಲೆನೋವು ಕಡಿಮೆ ಆಯ್ತುಯೆಂದು ಖುಷಿಯಾಗಿರುವಾಗ ಮಲ್ಲಿ ಬಂದು ಶಾಕ್ ನೀಡುತ್ತಾಳೆ.


ಶಕುಂತಲಾ ಮಲ್ಲಿಯನ್ನು ಜೀವಂತವಾಗಿರುವುದನ್ನು  ನೋಡಿ ಶಾಕ್‌ನಲ್ಲಿರುವಾಗಲೇ ಜೈದೇವ ಹ್ಯಾಪ್ ಮೊರೆ ಹಾಕಿಕೊಂಡು ಬರುತ್ತಾನೆ. ಮಲ್ಲಿ ಮತ್ತು ಜೈದೇವ ಹಿಂದೆಯೇ ಬಂದ ಮಹಿಮಾ ತಾನೇ ಇಬ್ಬರನ್ನು ರಕ್ಷಿಸಿದೆಂದು ಹೇಳುತ್ತಾಳೆ. ಮಗಳ ಮಾತುಗಳನ್ನು  ಕೇಳಿ  ಶಕುಂತಲಾಗೆ ಏನು ಮಾಡಬೇಕೆಂದು ಗೊತ್ತಾಗದೇ, ಕಾಟಾಚಾರಕ್ಕೆ ಮಹಿಮಾ ಹತ್ತಿರ ಕ್ಷಮೆ ಕೇಳುತ್ತಾಳೆ. ಇತ್ತ ಜೈದೇವ್‌ಗೆ  ತಾನು ಮಾಡಿದ ಪ್ಲಾನ್ ಫ್ಲಾಪ್ ಆಗಿದ್ದಕ್ಕೆ ಬೇಸರ ಮಾಡಿಕೊಂಡಿರುತ್ತಾನೆ. ಆಗ ಭೂಮಿಕಾ ಶಕುಂತಲಾಗೆ  ಫೋನ್ ಮಾಡಿ ಮಲ್ಲಿಗೆ ತೊಂದರೆ ಮಾಡಿದರೆ, ನಿಮ್ಮ ಬಂಡವಾಳ ಬಯಲಾಗುವಂತೆ ಮಾಡಬೇಕಾಗುತ್ತದೆ ಎಂದು ಹೆದರಿಸುತ್ತಾಳೆ. ಮುಂದೇನಾಗುತ್ತದೆಂದು ಮುಂದಿನ ಸಂಚಿಕೆಯಲ್ಲಿ ವೀಕ್ಷಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.