ನಟ ಚಂದ್ರು ಪವಿತ್ರಾ ಜಯರಾಮ್ ಜೊತೆ ಮಾಡಿದ ಕೊನೆಯ ವಾಟ್ಸಾಪ್ ಚಾಟ್ ವೈರಲ್!!

Pavithra jayaram: ಸಾಲು ಸಾಲು ಅನಿರೀಕ್ಷಿತ ಘಟನೆಗಳಿಂದ ಕಿರುತೆರೆ ಪ್ರೇಕ್ಷಕರು ಕಳೆದ ಮೂರು ದಿನಗಳಿಂದ ಆಘಾತಕ್ಕೊಳಗಾಗಿದ್ದಾರೆ. ಇದಕ್ಕೆ ಕಾರಣ ಧಾರಾವಾಹಿ ನಟ-ನಟಿ ಒಬ್ಬರ ಹಿಂದೆ ಒಬ್ಬರು ಇಹಲೋಕ ತ್ಯಜಿಸಿರುವುದು. 

Written by - Savita M B | Last Updated : May 19, 2024, 11:31 AM IST
  • ನಟಿಯ ಸಾವನ್ನು ನಟ ಚಂದು ಅವರಿಗೆ ಅರಗಿಸಿಕೊಳ್ಳಲಾಗದೇ.. ಪವಿತ್ರಾ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಸಂದರ್ಶನಗಳಲ್ಲಿ ಕಣ್ಣೀರಿಟಿದ್ದರು.
  • ಅವರು ತಮ್ಮ ಸಾವಿನ ಬಗ್ಗೆ ಮುಂಚಿತವಾಗಿ ಭವಿಷ್ಯ ನುಡಿದಿದ್ದರು..
ನಟ ಚಂದ್ರು ಪವಿತ್ರಾ ಜಯರಾಮ್ ಜೊತೆ ಮಾಡಿದ ಕೊನೆಯ ವಾಟ್ಸಾಪ್ ಚಾಟ್ ವೈರಲ್!!  title=

chandrakanth: ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಪವಿತ್ರಾ ಜಯರಾಮ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅನಿರೀಕ್ಷಿತ ದುರಂತದಿಂದ ಪ್ರೇಕ್ಷಕರು ಚೇತರಿಸಿಕೊಳ್ಳುತ್ತಿರುವಾಗಲೇ ಅವರೊಂದಿಗೆ ಅದೇ ಧಾರಾವಾಹಿಯಲ್ಲಿ ನಟಿಸಿದ್ದ ಚಂದ್ರಕಾಂತ್ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಪವಿತ್ರಾ ಜಯರಾಮ್ ಅವರ ಕಾರು ಅಪಘಾತವಾದಾಗ ಅದೇ ಕಾರಿನಲ್ಲಿ ಚಂದ್ರು ಕೂಡ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಅಪಘಾತದಿಂದ ಹೊರಬಂದಿದ್ದಾರೆ. ಆದರೆ.. ಆ ಅಪಘಾತದಲ್ಲಿ ಪವಿತ್ರಾ ಸಾವನ್ನಪ್ಪಿದ್ದನ್ನು ಸಹಿಸಲಾಗದೆ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.. ಚಂದ್ರಕಾಂತ್ ನಿಧನದಿಂದ ಅವರ ಕುಟುಂಬ ಶೋಕತಪ್ತವಾಗಿದೆ. ಇದೇ ವೇಳೆ ಚಂದ್ರು ಗಾಗೂ ಪತಅವರ ವಾಟ್ಸಾಪ್ ಚಾಟ್ ಒಂದು ವೈರಲ್ ಆಗಿದೆ. 

ಇದನ್ನೂ ಓದಿ-Aishwarya Rai Bachchan: ಶಸ್ತ್ರ ಚಿಕಿತ್ಸೆಗೆ ಒಳಗಾಗಲಿರುವ ಐಶ್ವರ್ಯಾ ರೈ ಬಚ್ಚನ್! ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್‌ ಪ್ರಾರ್ಥನೆ

ನಟಿಯ ಸಾವನ್ನು ನಟ ಚಂದು ಅವರಿಗೆ ಅರಗಿಸಿಕೊಳ್ಳಲಾಗದೇ.. ಪವಿತ್ರಾ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಸಂದರ್ಶನಗಳಲ್ಲಿ ಕಣ್ಣೀರಿಟಿದ್ದರು... ಶೀಘ್ರದಲ್ಲೇ ಮತ್ತೊಂದು ಸುದ್ದಿಯನ್ನು ಹೇಳಲಿದ್ದೇನೆ ಎಂದು ಅವರು ತಮ್ಮ ಸಾವಿನ ಬಗ್ಗೆ ಮುಂಚಿತವಾಗಿ ಭವಿಷ್ಯ ನುಡಿದಿದ್ದರು.. ತಮ್ಮ ಇನ್‌ಸ್ಟಾಗ್ರಾಮ್ ವೀಡಿಯೊಗಳಲ್ಲಿ, ಅವರು ಪವಿತ್ರಾ ಅವರೊಂದಿಗಿನ ಚಿತ್ರಗಳನ್ನು ಹಂಚಿಕೊಂಡು.. ಇನ್ನೂ ಎರಡು ದಿನಗಳು ಮಾತ್ರ." ಎಂದು ಬರೆದುಕೊಂಡು  ಶುಕ್ರವಾರ (ಮೇ 17) ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡರು... ಅವರ ನಿಧನಕ್ಕೆ ನಟನ ತಾಯಿ ಮತ್ತು ಪತ್ನಿ ಶೋಕ ವ್ಯಕ್ತಪಡಿಸಿದ್ದಾರೆ.
 
 ಚಂದು ಪತ್ನಿ ಶಿಲ್ಪಾ ಮಾಧ್ಯಮದವರೊಂದಿಗೆ ಮಾತನಾಡಿ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ನಾನು ಶಾಲೆಯಲ್ಲಿ ಓದುತ್ತಿರುವಾಗಲೇ ನನ್ನನ್ನು ಹಿಂಬಾಲಿಸಿದ ಚಂದು ನನ್ನನ್ನು ಪ್ರೀತಿಸಿ ಮದುವೆಯಾದ. ನಮಗೆ ಇಬ್ಬರು ಮಕ್ಕಳಿದ್ದಾರೆ. ನಾನೇ ಚಂದುಗೆ ಧಾರಾವಾಹಿಯಲ್ಲಿ ಮೊದಲ ಅವಕಾಶ ಕೊಟ್ಟೆ.. ‘ತ್ರಿನಯನಿ’ ಧಾರಾವಾಹಿ ಮಾಡುತ್ತಿದ್ದಾಗಿನಿಂದ ಪವಿತ್ರಿ ಜೊತೆ ಚಂದು ಸಂಬಂಧ ಶುರುವಾಗಿತ್ತು. ಅವಳ ಪ್ರೀತಿಗೆ ಬಿದ್ದು ನನ್ನನ್ನು ಮತ್ತು ಮಕ್ಕಳನ್ನು ಬಿಟ್ಟು ಹೋದ.. ಚಂದು ಅವಳ ಭ್ರಮೆಯಲ್ಲಿ ಬಿದ್ದು ಹೀಗೆ ನಮ್ಮನ್ನೆಲ್ಲ ಅಗಲಿದರು.. ನಮ್ಮ ಮಕ್ಕಳಿಗೆ ನ್ಯಾಯ ಸಿಗಬೇಕು’ ಎಂದು ಅಳಲು ತೋಡಿಕೊಂಡರು.

ಇದನ್ನೂ ಓದಿ-‘ಬ್ಯಾಂಕ್ of ಭಾಗ್ಯಲಕ್ಷ್ಮಿ’ ಸಿನಿಮಾ ಪೋಸ್ಟರ್ ಬಿಡುಗಡೆಗೊಳಿಸಿದ ನಿರ್ದೇಶಕ ಸಿಂಪಲ್ ಸುನಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News