Jailer Box Office Collection: ಜೈಲರ್ 4ನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಬಾಕ್ಸ್ಆಫೀಸ್ನಲ್ಲಿ ತಲೈವಾ ಮಿಂಚಿಂಗ್!
Jailer box office day 4 Collection: ರಜನಿಕಾಂತ್ ಚಿತ್ರವು ಭಾರತ ಮತ್ತು ವಿಶ್ವಾದ್ಯಂತ ಪ್ರಭಾವಶಾಲಿ ವ್ಯಾಪಾರವನ್ನು ಮುಂದುವರೆಸಿದೆ. ಜೈಲರ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.
Jailer box office Collection: ರಜನಿಕಾಂತ್ ಅವರು ಈ ಪೀಳಿಗೆಯ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು ಎಂದು ಮತ್ತೊಮ್ಮೆ ಎಲ್ಲರಿಗೂ ನೆನಪಿಸಿದ್ದರು. ನೆಲ್ಸನ್ ದಿಲೀಪ್‌ಕುಮಾರ್ ಅವರ ಜೈಲರ್ ಪ್ರಭಾವಶಾಲಿ ಪ್ರದರ್ಶನವನ್ನು ನೀಡುವುದರ ಜೊತೆಗೆ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ವರದಿಗಳ ಪ್ರಕಾರ, ಜೈಲರ್ ತನ್ನ ವಿಶ್ವಾದ್ಯಂತ ಕಲೆಕ್ಷನ್‌ನೊಂದಿಗೆ ಕೇವಲ ನಾಲ್ಕು ದಿನಗಳಲ್ಲಿ 250 ಕೋಟಿ ರೂ ಕ್ಲಬ್‌ನಲ್ಲಿ ಸ್ಥಾನವನ್ನು ದಾಖಲಿಸಿದೆ.
ಆರಂಭಿಕ ಅಂದಾಜಿನ ಪ್ರಕಾರ ಜೈಲರ್ ಭಾರತದಲ್ಲಿ 4 ನೇ ದಿನದಂದು 33.25 ಕೋಟಿ ರೂಪಾಯಿ ಗಳಿಸಿದೆ. ಭಾರತದಲ್ಲಿ ಜೈಲರ್ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಅಂದಾಜು 141.1 ಕೋಟಿ ರೂ.ಗೆ ಏರಿದೆ. ವಿಶ್ವಾದ್ಯಂತ ಚಿತ್ರ 250 ಕೋಟಿ ರೂಪಾಯಿ ಗಳಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಧಿಕೃತವಾಗಿ ಇನ್ನೂ ಚಿತ್ರತಂಡ ಈ ಬಗ್ಗೆ ತಿಳಿಸಿಲ್ಲ.
ಇದನ್ನೂ ಓದಿ: ʼಹೊಲ್ಗೇರಿʼ ಕುರಿತು ನಟ ಉಪೇಂದ್ರ ಹೇಳಿಕೆಗೆ ನೆಟ್ಟಿಗರ ಆಕ್ರೋಶ..! ಕ್ಷಮೇ ಕೇಳಿದ ಬುದ್ದಿವಂತ
ಜೈಲರ್ ಬಿಡುಗಡೆಯೊಂದಿಗೆ ಹಲವಾರು ದಾಖಲೆಗಳನ್ನು ಮುರಿದಿದೆ. 1 ನೇ ದಿನದಂದು, ರಜನಿಕಾಂತ್ ಚಿತ್ರವು ‘2023 ರಲ್ಲಿ ತಮಿಳುನಾಡಿನಲ್ಲಿ ಅತಿದೊಡ್ಡ ಓಪನಿಂಗ್ ಪಡೆದ ಸಿನಿಮಾ’, ‘ಯುಎಸ್‌ಎಯಲ್ಲಿ 2023 ರ ಅತಿದೊಡ್ಡ ಭಾರತೀಯ ಪ್ರೀಮಿಯರ್’ ಮತ್ತು ‘2023 ರಲ್ಲಿ ಸಾಗರೋತ್ತರದಲ್ಲಿ ಅತಿದೊಡ್ಡ ತಮಿಳು ಓಪನರ್’ ಎಂಬ ರೆಕಾರ್ಡ್ ಕ್ರಿಯೇಟ್ ಮಾಡಿದೆ.
ಎರಡು ವರ್ಷಗಳ ವಿರಾಮದ ನಂತರ ಸೂಪರ್‌ಸ್ಟಾರ್ ರಜನಿಕಾಂತ್ ಬೆಳ್ಳಿ ಪರದೆಯ ಮೇಲೆ ಜೈಲರ್ ಸಿನಿಮಾ ಮೂಲಕ ಮರಳಿದ್ದಾರೆ. ಅವರು ಕೊನೆಯದಾಗಿ ಅಣ್ಣಾತ್ತೆಯಲ್ಲಿ ಕಾಣಿಸಿಕೊಂಡರು. ಜೈಲರ್‌ನ ಸಮಗ್ರ ಪಾತ್ರವರ್ಗದಲ್ಲಿ ರಮ್ಯಾ ಕೃಷ್ಣನ್, ಜಾಕಿ ಶ್ರಾಫ್, ವಸಂತ್ ರವಿ, ಯೋಗಿ ಬಾಬು ಸೇರಿದಂತೆ ಅನೇಕ ತಾರೆಯರು ಇದ್ದಾರೆ. ಕಾವಾಲಾ ಹಾಡಿನಲ್ಲಿ ತಮನ್ನಾ ಭಾಟಿಯಾ ಅವರ ಆಕರ್ಷಕ ನೃತ್ಯ ಎಲ್ಲರ ಗಮನಸೆಳೆದಿದೆ.
ಇದನ್ನೂ ಓದಿ: ಆಲಿಯಾ ಭಟ್ ಮೊದಲ ಸಿನಿಮಾ ಯಾವುದು ಗೊತ್ತೇ? ಸ್ಟೂಡೆಂಟ್ ಆಫ್ ದಿ ಇಯರ್ ಅಲ್ಲವೇ ಅಲ್ಲ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ