Actor Upendra : ಸ್ಯಾಂಡಲ್‌ವುಡ್ ನಟ ಸೂಪರ್ ಸ್ಟಾರ್ ಉಪೇಂದ್ರ ಅವರು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿಚಾರ, ಐಡಿಯಾಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಅವರು, ಪ್ರಜಾಕೀಯಕ್ಕೆ 6 ವರ್ಷ ಎನ್ನುವ ವಿಚಾರವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಪ್ಯಾನ್ಸ್‌ಗಳ ಜೊತೆ ಸಂವಾದ ನಡೆಸಿದ್ದರು. ಈ ವೇಳೆ ಅವರು ನೀಡಿದ ಹೇಳಿಕೆಯೊಂದು ವಿರೋಧಕ್ಕೆ ಕಾರಣವಾಗಿದ್ದು, ಬುದ್ದಿವಂತನ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು.. ನಿನ್ನೆ ಉಪೇಂದ್ರ ಅವರು ತಮ್ಮ ಅಭಿಮಾನಿಗಳ ಜೊತೆ ಪ್ರಜಾಕೀಯ ಮುನ್ನೆಲೆಗೆ ಬಂದು 6 ವರ್ಷವಾದ ಪ್ರಯುಕ್ತ ಸಂವಾದ ನಡೆಸಿದ್ದರು. ಈ ವೇಳೆ ಮಾತಿನ ಭರದಲ್ಲಿ ʼಊರು ಅಂದ್ಮೇಲೆ ಹೊಲ್ಗೇರಿ ಇರುತ್ತಲ್ಲಾ ಹಾಗೆ..ʼ ಅಂತ ಹೇಳಿದ್ದರು. ಇದೀಗ ಇದೇ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಜಾತಿ ಜಗಳ ಬಿಟ್ಟು ಒಂದಾಗಬೇಕು ಎನ್ನುವ ಉಪೇಂದ್ರ ಈ ರೀತಿ ಹೇಳಿದ್ದು ಸರಿಯಲ್ಲ ಅಂತ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಊರು ಅಂದ್ಮೇಲೆ ಹೊಲ್ಗೇರಿ ಇರುತ್ತಲ್ಲಾ ಹಾಗೆ:: ಉಪೇಂದ್ರ (ಪ್ರಜಾಕೀಯ)
ಅಲ್ಲ ಈತನ ಯಾವುದೋ ಒಂದು ಪಕ್ಷದ ಸಿದ್ದಾಂತದ ವಿರುದ್ಧ ಒಂದಷ್ಟು ಜನ ವಿರೋಧ ವ್ಯಕ್ತಪಡಿಸಿದರೆ, ಆ ಜನರನ್ನು "ಹೊಲ್ಗೇರಿ"ಗೆ ಹೊಲಿಸೋದು ಎಷ್ಟರ ಮಟ್ಟಕ್ಕೆ ಸರಿ..?? ಹಾಗಾದರೆ ಈ ಮನುಷ್ಯನ ಪ್ರಕಾರ ಹೊಲ್ಗೇರಿಯಲ್ಲಿ ಬದುಕುವ ಜನರೆಲ್ಲರು ಕೆಟ್ಟವರಾ..??#prajakeeya pic.twitter.com/jarIHwCHDN
— DEEPU GOWDRU (@DEEPUVAJRAMUNI) August 12, 2023
ಇದನ್ನೂ ಓದಿ: ʼಹಾಸ್ಟೆಲ್ ಹುಡುಗರಿಗೆʼ ಡಿಮ್ಯಾಂಡ್..! ತೆಲುಗು ರಾಜ್ಯಗಳಲ್ಲಿ ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಸಿನಿಮಾ ರಿಲೀಸ್
ಈ ಪೈಕಿ ಟ್ವಿಟರ್ ಬಳಕೆದಾರರೊಬ್ಬರು, ಅಲ್ಲ ಈತನ ಯಾವುದೋ ಒಂದು ಪಕ್ಷದ ಸಿದ್ದಾಂತದ ವಿರುದ್ಧ ಒಂದಷ್ಟು ಜನ ವಿರೋಧ ವ್ಯಕ್ತಪಡಿಸಿದರೆ, ಆ ಜನರನ್ನು "ಹೊಲ್ಗೇರಿ"ಗೆ ಹೊಲಿಸೋದು ಎಷ್ಟರ ಮಟ್ಟಕ್ಕೆ ಸರಿ..?? ಹಾಗಾದರೆ ಈ ಮನುಷ್ಯನ ಪ್ರಕಾರ ಹೊಲ್ಗೇರಿಯಲ್ಲಿ ಬದುಕುವ ಜನರೆಲ್ಲರು ಕೆಟ್ಟವರಾ..?? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಮತ್ತೊಬ್ಬರು, ಉಪೇಂದ್ರ ಅವರ "ಹೊಲಗೇರಿ" ಮಾತು ಹಿಂದುಳಿದ ಕನ್ನಡಿಗರನ್ನು ನೋಯಿಸಿದೆ. ಅದೇ ರೀತಿ, ದಲಿತ ಚಿಂತಕರು ಎಂದೆನಿಸಿಕೊಂಡವರು ತಮ್ಮ ರಾಜಕೀಯ ಲಾಭಕ್ಕಾಗಿ ಒಕ್ಕಲಿಗರನ್ನು ಶೂದ್ರರು ಎಂದು ಗುಂಪಿಸುವುದು ತಪ್ಪಲ್ಲವೇ ? ಜಾತಿ ವ್ಯವಸ್ತೆಯ ಪಿಡುಗು ಕನ್ನಡ ಬುಡಕಟ್ಟಿನಲ್ಲಿ ಹಾಗೆಯೇ ಮುಂದುವರೆಯಲು ಈ ದಲಿತ ಚಿಂತಕರು ನೆರವಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.. ಇದೇ ರೀತಿಯ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಉಪೇಂದ್ರ ಅವರ "ಹೊಲಗೇರಿ" ಮಾತು ಹಿಂದುಳಿದ ಕನ್ನಡಿಗರನ್ನು ನೋಯಿಸಿದೆ.
ಅದೇ ರೀತಿ, ದಲಿತ ಚಿಂತಕರು ಎಂದೆನಿಸಿಕೊಂಡವರು ತಮ್ಮ ರಾಜಕೀಯ ಲಾಬಕ್ಕಾಗಿ ಒಕ್ಕಲಿಗರನ್ನು ಶೂದ್ರರು ಎಂದು ಗುಂಪಿಸುವುದು ತಪ್ಪಲ್ಲವೇ ?
ಜಾತಿ ವ್ಯವಸ್ತೆಯ ಪಿಡುಗು ಕನ್ನಡ ಬುಡಕಟ್ಟಿನಲ್ಲಿ ಹಾಗೆಯೇ ಮುಂದುವರೆಯಲು ಈ ದಲಿತ ಚಿಂತಕರು ನೆರವಾಗುತ್ತಿದ್ದಾರೆ. pic.twitter.com/pJYWlrCohD
— ಚಯ್ತನ್ಯ ಗವ್ಡ (@hosabaraha) August 13, 2023
ಇದನ್ನೂ ಓದಿ: ಅಪರೂಪದ ದಾಖಲೆ ಬರೆದ ಪುಷ್ಪ 2..! ಇನ್‌ಸ್ಟಾಗ್ರಾಮ್ ಇತಿಹಾಸದಲ್ಲಿ ಇದೇ ಮೊದಲು
ಇನ್ನು ತಮ್ಮ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಉಪೇಂದ್ರ ಅವರು ಸಾಮಾಜಿಕ ಜಾಲತಾಣದ ಮೂಲಕ ಕ್ಷಮೇ ಕೇಳಿದ್ದಾರೆ. ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಅವರು, ಇಂದು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನೇರ ಪ್ರಸಾರದಲ್ಲಿ ಬಾಯಿ ತಪ್ಪಿ ಒಂದು ಗಾದೆ ಮಾತನ್ನು ಬಳಸಿದ್ದು.. ಅದರಿಂದ ಹಲವರ ಭಾವನೆಗಳಿಗೆ ಧಕ್ಕೆ ಉಂಟಾಗಿರುವುದು ಕಂಡು ಬಂದ ತಕ್ಷಣವೇ ಆ ಲೈವ್ ವಿಡಿಯೋವನ್ನು ನನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿರುತ್ತೇನೆ.. ಮತ್ತು ಈ ಮಾತಿಗೆ ಕ್ಷಮೆಯಿರಲಿ ಎಂದು ಕೇಳಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ