Jailer Box Office Day 8 Collection : ರಜನಿಕಾಂತ್ ಅಭಿನಯದ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್ ಹವಾ ಬಲು ಜೋರಾಗಿದೆ. ಜೈಲರ್‌ ಚಿತ್ರವು ಈಗಾಗಲೇ 400 ಕೋಟಿ ಗಳಿಕೆಯ ಗಡಿಯನ್ನು ದಾಟಿದೆ ಮತ್ತು ಈಗ ತಮಿಳು ಚಲನಚಿತ್ರೋದ್ಯಮದಿಂದ ಹಿಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವತ್ತ ಸಾಗಿದೆ. ಆಕ್ಷನ್ ಡ್ರಾಮಾ ತನ್ನ ಎರಡನೇ ವಾರವನ್ನು ಯಶಸ್ವಿಯಾಗಿ ಪ್ರವೇಶಿಸಿದೆ.


COMMERCIAL BREAK
SCROLL TO CONTINUE READING

ಗುರುವಾರ ಜೈಲರ್ ಭಾರತದಲ್ಲಿ 10 ಕೋಟಿ ರೂಪಾಯಿಗಳ ನಿವ್ವಳ ಸಂಗ್ರಹವನ್ನು ದಾಖಲಿಸಿದೆ. ಇದರಿಂದ ಜೈಲರ್‌ ಸಿನಿಮಾದ ದೇಶೀಯ ಮಾರುಕಟ್ಟೆಯಲ್ಲಿ ಮೊದಲ ವಾರದ ಒಟ್ಟು ಗಳಿಕೆ 235.65 ಕೋಟಿಗೆ ಆಗಿದೆ. ಚಿತ್ರವು 289.10 ಕೋಟಿ ರೂ.ಗಳನ್ನು ಗಳಿಸಿದ್ದು, 8 ದಿನಗಳಲ್ಲಿ ಒಟ್ಟು 449.10 ಕೋಟಿ ರೂ.ಗಳ ಕಲೆಕ್ಷನ್ ಮಾಡಿದೆ. ವಿದೇಶದಲ್ಲಿ 160 ಕೋಟಿ ರೂ. ಗಳಿಸಿದೆ.


ಇದನ್ನೂ ಓದಿ: ಚಿತ್ರರಂಗಕ್ಕೆ ಮತ್ತೊಂದು ಶಾಕ್: ಸ್ಪಂದನಾ ಬಳಿಕ ಮತ್ತೊಬ್ಬ ಯುವನಟ ಹೃದಯಾಘಾತಕ್ಕೆ ಬಲಿ..!


ಥಿಯೇಟರ್‌ಗಳು ತಮಿಳುನಾಡಿನಲ್ಲಿ ಒಟ್ಟಾರೆ 32.70 ಪ್ರತಿಶತದಷ್ಟು ಆಕ್ಯುಪೆನ್ಸಿಗೆ ಸಾಕ್ಷಿಯಾಗಿದೆ, ಆದರೆ ತೆಲುಗು ರಾಜ್ಯಗಳಲ್ಲಿ, ಒಟ್ಟಾರೆ ಆಕ್ಯುಪೆನ್ಸೀ ಶೇಕಡಾ 30.14 ರಷ್ಟಿದೆ. ಜೈಲರ್‌ ಸಿನಿಮಾ ಕಮಲ್ ಹಾಸನ್, ಫಹದ್ ಫಾಸಿಲ್ ಮತ್ತು ವಿಜಯ್ ಸೇತುಪತಿ ಅವರ ವಿಕ್ರಮ್ ಸಿನಿಮಾದ ಒಟ್ಟು ಸಂಗ್ರಹವನ್ನು ದಾಟಿದೆ. ಇದು ವಿಶ್ವದಾದ್ಯಂತ 426 ಕೋಟಿ ರೂ. ಗಳಿಸಿತು.


ಬಿಗ್‌ ಸ್ಕ್ರೀನ್‌ ಮೇಲೆ ಎರಡನೇ ವಾರದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಜೈಲರ್‌ ಸಿನಿಮಾ ಪೊನ್ನಿಯಿನ್ ಸೆಲ್ವನ್ 1 ಅನ್ನು ಮೀರಿಸುವ ನಿರೀಕ್ಷೆಯಿದೆ. ಇದು ವಿಶ್ವಾದ್ಯಂತ ರೂ 482.40 ಕೋಟಿ ಗಳಿಸಿತ್ತು. ಜೈಲರ್ ಸಿನಿಮಾ ಪೊನ್ನಿಯಿನ್ ಸೆಲ್ವನ್ 1 ಅನ್ನು ಮೀರಿಸಿದರೆ, ಅದು ಕೋವಿಡ್ ನಂತರ ಅತಿ ಹೆಚ್ಚು ಗಳಿಸಿದ ತಮಿಳು ಚಲನಚಿತ್ರವಾಗಿದೆ. 


ಇದನ್ನೂ ಓದಿ: ವಿಜಯ್ ದೇವರಕೊಂಡ ಭಾವಿ ಹೆಂಡತಿ ಬಗ್ಗೆ ಸಮಂತಾ ರುತ್‌ ಪ್ರಭು ಮಾತು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.