ವಿಜಯ್ ದೇವರಕೊಂಡ ಭಾವಿ ಹೆಂಡತಿ ಬಗ್ಗೆ ಸಮಂತಾ ರುತ್‌ ಪ್ರಭು ಮಾತು

Samantha Ruth Prabhu and Vijay Deverakonda : ಸಮಂತಾ ರುತ್ ಪ್ರಭು ಮತ್ತು ವಿಜಯ್ ದೇವರಕೊಂಡ ತಮ್ಮ ಮುಂಬರುವ ಚಿತ್ರ ಖುಶಿ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.  

Written by - Chetana Devarmani | Last Updated : Aug 18, 2023, 04:16 PM IST
  • ಸಮಂತಾ ರುತ್ ಪ್ರಭು ಮತ್ತು ವಿಜಯ್ ದೇವರಕೊಂಡ
  • ಸಮಂತಾ - ವಿಜಯ್‌ ಸಿನಿಮಾ ಖುಶಿ ರಿಲೀಸ್‌ಗೆ ದಿನಗಣನೆ
  • ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ
ವಿಜಯ್ ದೇವರಕೊಂಡ ಭಾವಿ ಹೆಂಡತಿ ಬಗ್ಗೆ ಸಮಂತಾ ರುತ್‌ ಪ್ರಭು ಮಾತು  title=
Samantha Ruth Prabhu and Vijay Deverakonda

Samantha and Vijay Deverakonda : ಸಮಂತಾ ರುತ್ ಪ್ರಭು ಮತ್ತು ವಿಜಯ್ ದೇವರಕೊಂಡ ತಮ್ಮ ಮುಂಬರುವ ಚಿತ್ರ ಖುಶಿ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಖುಶಿ ಸೆಪ್ಟೆಂಬರ್ 1 ರಂದು ಥಿಯೇಟರ್‌ಗೆ ಬರಲು ಸಿದ್ಧವಾಗಿದೆ. ಸಮಂತಾ ಮತ್ತು ವಿಜಯ್ ಇಬ್ಬರೂ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಬ್ಬರೂ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಮತ್ತು ವಿಜಯ್ ಅವರ ಜೀವನ ಸಂಗಾತಿ ಕುರಿತು ಸಮಂತಾ ಮಾತನಾಡಿದರು.

ಇದನ್ನೂ ಓದಿ: OMG 2 ಗಾಗಿ ಅಕ್ಷಯ್ ಕುಮಾರ್‌ ಒಂದು ಪೈಸೆ ಸಂಭಾವನೆಯನ್ನೂ ಪಡೆದಿಲ್ಲ!

ವಿಜಯ್ ಅವರ ಭವಿಷ್ಯದ ಸಂಗಾತಿಯು ಮನರಂಜನಾ ಹಿನ್ನೆಲೆಯಿಂದ ಬಂದವರಾಗಿರಬೇಕು ಮತ್ತು ಅವರ ಕುಟುಂಬದೊಂದಿಗೆ ಸುಲಭವಾಗಿ ಬೆರೆಯಬೇಕು ಎಂದು ಸಮಂತಾ ಹೇಳಿದರು. ವಿಜಯ್ ಕೂಡ ಸಮಂತಾ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ. ವಿಜಯ್ ಅವರು ಸಮಂತಾ ಬಗ್ಗೆ ಹಲವು ಕುತೂಹಲಕಾರಿ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ನಟ ರಾಹುಲ್ ರವೀಂದ್ರನ್, ಚಿನ್ಮಯಿ ಶ್ರೀಪಾದ ಮತ್ತು ವಸ್ತ್ರ ವಿನ್ಯಾಸಕಿ ನೀರಜಾ ಕೋನ ಸಮಂತಾ ಅವರ ಆತ್ಮೀಯ ಸ್ನೇಹಿತರು ಎಂದು ವಿಜಯ್‌ ಹೇಳಿದರು. 

 

 

ಸ್ವಾತಂತ್ರ್ಯ ದಿನದಂದು ನಡೆದ ಖುಶಿ ಸಂಗೀತ ಕಛೇರಿಯಲ್ಲಿ ಸಮಂತಾ ಮತ್ತು ವಿಜಯ್ ತಮ್ಮ ನೃತ್ಯ ಪ್ರದರ್ಶನದ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಹವಾ ಸೃಷ್ಟಿಸಿದರು. ಹೈದರಾಬಾದ್‌ನ ಎಚ್‌ಐಸಿಸಿ ಕನ್ವೆನ್ಷನ್ ಸೆಂಟರ್‌ನಲ್ಲಿ ಸಂಗೀತ ಕಛೇರಿ ನಡೆಯಿತು. ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್, ಗಾಯಕ ಸಿದ್ ಶ್ರೀರಾಮ್, ಜಾವೇದ್ ಅಲಿ, ಅನುರಾಗ್ ಕುಲಕರ್ಣಿ, ಹರಿ ಚರಣ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಇದನ್ನೂ ಓದಿ: ಒಟಿಟಿ ರಿಲೀಸ್‌ಗೆ ʼಬೇಬಿʼ ರೇಡಿ..! ಬಾಯ್ಸ್‌ ಫೇವರಿಟ್‌ ಸಿನಿಮಾ ಸ್ಟ್ರೀಮಿಂಗ್ ಎಲ್ಲಿ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News