Jailer : ನೆಲ್ಸನ್‌ ನಿರ್ದೇಶನದಡಿಯಲ್ಲಿ ಮೂಡಿಬಂದಿರುವ ಜೈಲರ್‌ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಆರ್ಭಟ ಶುರುಮಾಡಿದೆ. ಚಿತ್ರದಲ್ಲಿ ರಜನಿಕಾಂತ್‌ ಅವರ ಡೈಲಾಗ್‌ ಹಾಗೂ ಸ್ಟೈಲ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಕನ್ನಡದ ಹ್ಯಾಟ್ರಿಕ್‌ ಹಿರೋ ಶಿವಣ್ಣ ಸಹ ನಟಿಸಿದ್ದು, ಅವರ ಪಾತ್ರ ಚಿಕ್ಕದಾದರೂ ಅವರನ್ನು ನೋಡಿದವರೆಲ್ಲಾ ಥ್ರಿಲ್ಲಾಗಿದ್ದಾರೆ.


COMMERCIAL BREAK
SCROLL TO CONTINUE READING

ರಜನಿಕಾಂತ್ ಅಭಿಮಾನಿಗಳು ಮೆಚ್ಚುವಂತಹ ಸಿನಿಮಾಗಳನ್ನು ಮಾಡುವಲ್ಲಿ ನೆಲ್ಸನ್ ಯಶಸ್ಸು ಗಳಿಸಿದ್ದಾರೆ. ಚಿತ್ರದಲ್ಲಿ ರಜನಿಕಾಂತ್‌ ಹಿರೋ ಆದರೂ ಶಿವಣ್ಣನ ಚಿಕ್ಕ ಪಾತ್ರಕ್ಕೆ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ. ಬರೀ ಏಳೆಂಟು ನಿಮಿಷ ತೆರೆಮೇಲೆ ಕಾಣಿಸಿಕೊಳ್ಳುವ ಶಿವಣ್ಣ ಅಭಿಮಾನಿಗಳಿಂದ ಫುಲ್ ಮಾರ್ಕ್ಸ್ ಪಡೆದುಕೊಂಡಿದ್ದಾರೆ. ತಮಿಳಿಗರು ಸಹ ಶಿವಣ್ಣನ ಅಭಿನಯಕ್ಕೆ ಮೆಚ್ಚಿ ಬಹುಪರಾಕ್‌ ಹೇಳಿದ್ದಾರೆ. 


ಇದನ್ನೂ ಓದಿ- Kshetrapati Trailer : ಟ್ರೈಲರ್ ನಿಂದಲೇ ಗಮನ ಸೆಳೆದ 'ಕ್ಷೇತ್ರಪತಿ'; ಉತ್ತರ ಕರ್ನಾಟಕದ ಸಿನಿಮಾ ಅಂದ್ರ ಸುಮ್ನ ಏನ್ರಿ..!


ಸದ್ಯ ಶಿವಣ್ಣ ಅವರ ನಟನಗೆ ನಿಬ್ಬೆರಗಾದ ಅಭಿಮಾನಿಗಳು ಜೈಲರ್‌ ಸಿನಿಮಾದಲ್ಲಿನ ಶಿವಣ್ಣನ ನರಸಿಂಹ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಸೀಕ್ವೆಲ್ ಮಾಡಿ ಎಂದು ಕೇಳುತ್ತಿದ್ದಾರೆ.  


ಈ ಚಿತ್ರದಲ್ಲಿ ಮಂಡ್ಯದ ಹಳೇ ಪಂಟರ್ ಆಗಿ ಮಾತ್ರ ಶಿವಣ್ಣ ಕಾಣಿಸಿಕೊಂಡಿದ್ದು, ಒಂದು ಸಣ್ಣ ಸನ್ನಿವೇಶ ಬಿಟ್ಟರೆ ಶಿವಣ್ಣ ಮತ್ತು ರಜನಿಕಾಂತ್‌ ಕ್ಲೈಮ್ಯಾಕ್ಸ್‌ನಲ್ಲೂ ಒಂದೇ ಫ್ರೇಮ್‌ನಲ್ಲಿ ಕಾಣಿಸಿಲ್ಲ. ಹಾಗಾಗಿ ಇಬ್ಬರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡಿ 'ಜೈಲರ್‌' ಪ್ರೀಕ್ವೆಲ್‌ ಮಾಡಿದರೂ ಸರಿಯೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ.


ಇದನ್ನೂ ಓದಿ- South Actress: ಈ ಫೋಟೋದಲ್ಲಿರುವ ಹುಡುಗಿ ಈಗ ಸ್ಟಾರ್ ನಾಯಕಿ, ಯಾರೆಂದು ಗುರುತಿಸಬಲ್ಲಿರಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.