Kshetrapati Trailer : ಟ್ರೈಲರ್ ನಿಂದಲೇ ಗಮನ ಸೆಳೆದ 'ಕ್ಷೇತ್ರಪತಿ'; ಉತ್ತರ ಕರ್ನಾಟಕದ ಸಿನಿಮಾ ಅಂದ್ರ ಸುಮ್ನ ಏನ್ರಿ..!

Kshetrapati Trailer Released : 'ಗುಳ್ಟು' ಖ್ಯಾತಿಯ ನವೀನ್ ಶಂಕರ್ ನಟಿಸಿರುವ 'ಕ್ಷೇತ್ರಪತಿ' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸಖತ್‌ ಸೌಂಡ್‌ ಮಾಡುತ್ತಿದೆ. ಮುಂದಿನ ವಾರ ಸಿನಿಮಾ ಬಿಡುಗಡೆಯಾಗಲಿದ್ದು, ಉತ್ತರ ಕರ್ನಾಟಕ ಶೈಲಿಯ ಈ ಈ ಚಿತ್ರ ದೇಶದ ಬೆನ್ನೆಲುಬು ಎನ್ನುವ ರೈತನ ಇಂದಿನ ಸ್ಥಿತಿಗತಿ ಹೇಗಿದೆ? ಎನ್ನುವುದರ ಕಥಾಹಂದರವನ್ನು ಒಳಗೊಂಡಿದೆ. 

Written by - Savita M B | Last Updated : Aug 12, 2023, 12:11 PM IST
  • ಶ್ರೀಕಾಂತ್ ಕಟಗಿ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಮೊದಲ ನೋಟದಲ್ಲೇ ಎಲ್ಲರ ಗಮನ ಸೆಳೆದಿದೆ.
  • ಸಾಮಾನ್ಯ ಜನರ ಬದುಕಿಗೆ ಹತ್ತಿರವಾಗುವಂತಹ ಕಥೆ ಇದಾಗಿದೆ
  • ಈ 'ಕ್ಷೇತ್ರಪತಿ' ಸಿನಿಮಾದಲ್ಲಿ ಉತ್ತರ ಕರ್ನಾಟಕದ ಸೊಗಡು ಅಡಗಿದ್ದು, ಸಾಮಾನ್ಯ ವ್ಯಕ್ತಿಯೊಬ್ಬನ ಹೋರಾಟದ ಕಥೆ ಈ ಚಿತ್ರ.
Kshetrapati Trailer : ಟ್ರೈಲರ್ ನಿಂದಲೇ ಗಮನ ಸೆಳೆದ 'ಕ್ಷೇತ್ರಪತಿ'; ಉತ್ತರ ಕರ್ನಾಟಕದ ಸಿನಿಮಾ ಅಂದ್ರ ಸುಮ್ನ ಏನ್ರಿ..!  title=

Kshetrapati Trailer : ಶ್ರೀಕಾಂತ್ ಕಟಗಿ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಮೊದಲ ನೋಟದಲ್ಲೇ ಎಲ್ಲರ ಗಮನ ಸೆಳೆದಿದೆ. ಸಾಮಾನ್ಯ ಜನರ ಬದುಕಿಗೆ ಹತ್ತಿರವಾಗುವಂತಹ ಕಥೆ ಇದಾಗಿದ್ದು, ಈ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್ ವಿತರಣೆ ಮಾಡುತ್ತಿದೆ.

ಇನ್ನು ಈ ಸಿನಿಮಾ ರವಿ ಬಸ್ರೂರ್ ಮ್ಯೂಸಿಕ್ & ಮೂವೀಸ್ ಅರ್ಪಿಸುತ್ತಿರುವ, ಆಶ್ರಗ ಕ್ರಿಯೇಷನ್ಸ್ ಲಾಂಛನದಡಿದಲ್ಲಿ ನಿರ್ಮಾಣವಾಗಿದ್ದು, ಪೊಲಿಟಿಕಲ್ ಡ್ರಾಮ ಕಥಾಹಂದರ ಒಳಗೊಂಡಿದೆ. ಈ 'ಕ್ಷೇತ್ರಪತಿ' ಸಿನಿಮಾದಲ್ಲಿ ಉತ್ತರ ಕರ್ನಾಟಕದ ಸೊಗಡು ಅಡಗಿದ್ದು, ಸಾಮಾನ್ಯ ವ್ಯಕ್ತಿಯೊಬ್ಬನ ಹೋರಾಟದ ಕಥೆ ಈ ಚಿತ್ರ. 

ತಮ್ಮ ಹಕ್ಕುಗಳಿಗಾಗಿ ಒಬ್ಬ ರೈತ ಯಾವ ರೀತಿ ಹೋರಾಡುತ್ತಾನೆ, ಎಷ್ಟು ನೋವು, ವ್ಯಥೆ ಪಡುತ್ತಾನೆ ಎನ್ನುವುದನ್ನು ಈ ಸಿನಿಮಾ ತೋರಿಸಿಕೊಡಲಿದೆ. ಇನ್ನು ಶ್ರೀಕಾಂತ್ ಹಾಗೂ ನವೀನ್ ಇಬ್ಬರು ಉತ್ತರ ಕರ್ನಾಟಕ ಮೂಲದವರು. ಹಾಗಾಗಿ ಈ ಚಿತ್ರದ ಚಿತ್ರೀಕರಣ ಬಹುತೇಕ ಉತ್ತರ ಕರ್ನಾಟಕದಲ್ಲೇ ನಡೆದಿದೆ. ಜೊತೆಗೆ ಅಲ್ಲಿನ ನೈಜ ಜೀವನವನ್ನೇ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. 

ಇದನ್ನೂ ಓದಿ-ಆಗಸ್ಟ್ 20ರಂದು ಬಿಡುಗಡೆಗೊಳ್ಳಲಿದೆ `ಚೋಳ’ ಟೀಸರ್!

ಈ 'ಕ್ಷೇತ್ರಪತಿ' ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನವೀನ್ ಶಂಕರ್, ನಾನು ಉತ್ತರ ಕರ್ನಾಟಕದವನೇ ಆಗಿರುವುದರಿಂದ ಅಲ್ಲಿನ ನೈಜ ಜೀವನವನ್ನು ತೆರೆಗೆ ತರುವ ಆಸೆ ಇತ್ತು. ಹಾಗಾಗಿ ನಿರ್ದೇಶಕ ಶ್ರೀಕಾಂತ್ ಕಟಗಿ ಅವರು ಸಿನಿಮಾ ಕಥೆ ಹೇಳಿದ ತಕ್ಷಣವೇ ನಾನು ಒಪ್ಪಿಕೊಂಡೆ. ಈ ಸಿನಿಮಾಗೆ ಹಣಹಾಕಲು ನಿರ್ಮಾಪಕರು ಇರಲಿಲ್ಲ. ನಾವೇಧ ಒಂದೊಂದು ಲಕ್ಷ ಹಾಕಿ ಸಿನಿಮಾ ಆರಂಭ ಮಾಡಿದ್ದೆವು. ನಂತರ ಹಲವಾರು ನಿರ್ಮಾಪಕರು ನಮ್ಮ ಕೈಗೂಡಿದರು. ಹೀಗೆ ಪ್ರಾರಂಭವಾದ ಸಿನಿಮಾ ಸದ್ಯ ಬಿಡುಗಡೆ ಹಂತಕ್ಕೆ ಬಂದು ತಲುಪಿದೆ ಎಂದು ಹೇಳಿದರು. 

ಈ ಚಿತ್ರಕ್ಕೆ KGF ಖ್ಯಾತಿಯ ರವಿ ಬಸ್ರೂರ್ ಅವರ ಸಂಗೀತ ದೊರಕಿದ್ದು, ವೈ. ವಿ. ಬಿ ಶಿವಸಾಗರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಇನ್ನು ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್ ಸೇರಿದಂತೆ ದೊಡ್ಡ ತಾರಾಗಣವನ್ನೇ ಚಿತ್ರತಂಡ ಒಳಗೊಂಡಿದೆ. 

ಇದನ್ನೂ ಓದಿ-ರಶ್ಮಿಕಾಗೆ ಡಿಸೆಂಬರ್ ತಿಂಗಳು ತುಂಬಾ ಸ್ಪೆಷಲ್ ಅಂತೆ, ಕಾರಣ ಕೂಡ ಅವರೇ ಹೇಳಿದ್ದಾರೆ ಕೇಳಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News