Piracy Problem - ಒಂದು ಕಡೆ 'ಜೇಮ್ಸ್‌' (James) ಗೆಲುವಿನ ನಾಗಾಲೋಟ ಮುಂದುವರಿಸಿದ್ದರೆ, ಮತ್ತೊಂದು ಕಡೆ ಪೈರಸಿ ಖದೀಮರ ಕಾಟ ಅಪ್ಪು (Appu) ಸಿನಿಮಾಗೆ ಎದುರಾಗಿದೆ. ಈ ಮೊದಲೇ ಅಭಿಮಾನಿಗಳು ಪೈರಸಿ ವಿರುದ್ಧ ಅಭಿಯಾನ ಆರಂಭಿಸಿದ್ದರು. 'ಜೇಮ್ಸ್‌' ಸಿನಿಮಾ ಪೈರಸಿ ಆಗದಂತೆ ಅಭಿಮಾನಿಗಳೇ ಕಣ್ಣಿಟ್ಟಿದ್ದರು. ಆದರೆ ಇಷ್ಟೆಲ್ಲಾ ಮುಂಜಾಗ್ರತೆ ವಹಿಸಿದ್ದರು ಕೂಡ 'ಜೇಮ್ಸ್‌' ಸಿನಿಮಾಗೆ (James Movie) ಪೈರಿಸಿ ಕಾಟ ಶುರುವಾಗಿದೆ. ಪೈರಸಿ ಮಾಡಿದವರ ವಿರುದ್ಧ ಕಂಪ್ಲೆಂಟ್‌ ಕೂಡ ಕೊಡಲಾಗಿದೆ.

COMMERCIAL BREAK
SCROLL TO CONTINUE READING

ಕನ್ನಡ ಚಿತ್ರಗಳಿಗೆ ಪೈರಸಿ ಅನ್ನೋ ಭೂತ ಪದೇ ಪದೆ ಕಾಟ ಕೊಡುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅತ್ಯಂತ ಸುಲಭವಾಗಿ ಪೈರಸಿ ಮಾಡಿ, ಚಿತ್ರ ಬಿಡುಗಡೆಯಾದ ಕೆಲವೇ ದಿನದಲ್ಲಿ ಎಲ್ಲೆಡೆ ಹಬ್ಬಿಸುತ್ತಿದ್ದಾರೆ ಪೈರಸಿ ಖದೀಮರು. ಆದರೆ ಅಪ್ಪು ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್‌'ಗೆ ಈ ರೀತಿ ಪೈರಸಿ ಭೂತದ ಕಾಟ ಎದುರಾಗಲ್ಲ ಎನ್ನಲಾಗಿತ್ತು. ಇದಕ್ಕಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು. ಇಷ್ಟೆಲ್ಲಾ ಮುಂಜಾಗ್ರತೆ ವಹಿಸಿದ್ದರೂ 'ಜೇಮ್ಸ್‌'ಗೆ ಪೈರಸಿ ಕಾಟ ಶುರುವಾಗಿಬಿಟ್ಟಿದೆ.

ಫ್ಯಾನ್ಸ್‌ಗೆ ಶಾಕ್
'ಜೇಮ್ಸ್‌' ಸಿನಿಮಾದ ಪೈರಸಿ ಲಿಂಕ್‌ಗಳು ಎಲ್ಲೆಂದರಲ್ಲಿ ಓಡಾಡುತ್ತಿವೆ. ಈ ಕುರಿತು ಅಪ್ಪು ಅಭಿಮಾನಿಗಳು ಸಾಕಷ್ಟು ಕೋಪಗೊಂಡಿದ್ದಾರೆ. ಹೀಗಾಗಿ ಪೈರಸಿ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಸಾಮಾಜಿ ಜಾಲತಾಣ ಬಳಸಿಕೊಂಡು ಕೆಲವು ಖದೀಮರು 'ಜೇಮ್ಸ್‌' ಸಿನಿಮಾದ ಪೈರಸಿ ಲಿಂಕ್‌ ಹರಡುತ್ತಿದ್ದಾರೆ. ಈ ಮೂಲಕ ಅಪ್ಪು ಫ್ಯಾನ್ಸ್‌ಗೆ ಆಘಾತ ಎದುರಾಗಿದೆ.


‌ಅಭಿಮಾನಿ ದೂರು
ಪೈರಸಿ ಮಾಡಿದವರ ವಿರುದ್ಧ ಅಪ್ಪು (Puneeth Rajkumar) ಅಭಿಮಾನಿ ಅರುಣ್‌ ಪರಮೇಶ್ವರ್‌ ಎನ್ನುವವರು ದೂರು ನೀಡಿದ್ದಾರೆ. ಗೃಹ ಸಚಿವರು ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಅಪ್ಪು ಅಭಿಮಾನಿ ಅರುಣ್‌ ಪರಮೇಶ್ವರ್‌ (Puneeth Rajkumar Fan) ಕಂಪ್ಲೇಂಟ್‌ ಕೊಟ್ಟಿದ್ದು, ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೆ 'ಜೇಮ್ಸ್‌' ಟೀಂ ಕೂಡ ಮತ್ತಷ್ಟು ಅಲರ್ಟ್‌ ಆಗಿದ್ದು, ಪೈರಸಿ ವಿರುದ್ಧ ಸಮರ ಸಾರಲು ಸಜ್ಜಾಗಿದ್ದಾರೆ.


ಇದನ್ನೂ ಓದಿ-The Kashmir Files Collection: ಎಂಟನೇ ದಿನ ಕೂಡ ಬಂಪರ್ ಗಳಿಕೆ ಮಾಡಿ 100 ಕೋಟಿ ರೂ. ಕ್ಲಬ್ ಗೆ ಲಗ್ಗೆ ಇಟ್ಟ 'ದಿ ಕಾಶ್ಮೀರ ಫೈಲ್ಸ್'

ತೀವ್ರ ಆಕ್ರೋಶ
ಯಾರು ಏನೇ ಮಾಡಲಿ, ನಾವು ಥಿಯೇಟರ್‌ನಲ್ಲೇ ಅಪ್ಪು ಸಿನಿಮಾ ನೋಡೋದು ಅನ್ನೋದು ಕೋಟಿ ಕೋಟಿ ಅಭಿಮಾನಿಗಳ ಮಾತು. ಯಾರೋ ಕೆಲವು ಕಿಡಿಗೇಡಿಗಳು ಮಾಡುತ್ತಿರುವ ಕೆಲಸದಿಂದ 'ಜೇಮ್ಸ್‌' ಸಿನಿಮಾಗೆ ಯಾವುದೇ ಸಮಸ್ಯೆ ಎದುರಾಗದು. ಆದರೆ ಪೈರಸಿ ಮಾಡಿದವರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.


ಇದನ್ನೂ ಓದಿ-RRR Ticket Price Hike! RRR ಬಿಡುಗಡೆಗೂ ಮುನ್ನ ಟಿಕೆಟ್ ದರದಲ್ಲಿ ಭಾರಿ ಏರಿಕೆ, ಏನಿದು ಹೊಸ ಸುದ್ದಿ!

ಒಟ್ಟಾರೆ ಹೇಳೋದಾದ್ರೆ ಎಲ್ಲಾ ಅಡೆತಡೆಗಳನ್ನೂ ಮೀರಿ 'ಜೇಮ್ಸ್‌' ಚಿತ್ರ ಮುನ್ನುಗ್ಗುತ್ತಿದ್ದು, ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಒಂದು ಕಡೆ ಬಾಕ್ಸ್‌ ಆಫಿಸ್‌ನಲ್ಲಿ ಬೃಹತ್‌ ಮೊತ್ತದ ಕಲೆಕ್ಷನ್‌ ಮಾಡಿದ್ದರೆ, ಮತ್ತೊಂದು ಕಡೆ ಈ ಹಿಂದಿನ ಹಲವು ದಾಖಲೆಗಳನ್ನ 'ಜೇಮ್ಸ್‌'  ಸಿನಿಮಾ ಪುಡಿ ಪುಡಿ ಮಾಡಿದೆ. ಆದರೂ ಪೈರಸಿ ಎಂಬ ಭೂತ  'ಜೇಮ್ಸ್‌'  ಸಿನಿಮಾಗೆ ಕಾಡಲು ಶುರುಮಾಡಿದ್ದು, ಅಭಿಮಾನಿಗಳೇ ಅಲರ್ಟ್‌ ಆಗಿ ಪೈರಸಿ ಮಾಡುವವರ ವಿರುದ್ಧ ದೊಡ್ಡ ಸಮರ ಸಾರಿದ್ದಾರೆ.


ಪಾಕ್ ಮಾಜಿ ಅಧ್ಯಕ್ಷ ಮುಷರಫ್ ಜೊತೆಗೆ ಬಾಲಿವುಡ್ ನಟ ಸಂಜಯ್ ದತ್..! ಫೋಟೋ ವೈರಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.