The Kashmir Files Collection: ಕಾಶ್ಮೀರ ಫೈಲ್ಸ್‌ನ ಮ್ಯಾಜಿಕ್ ಬಿಡುಗಡೆಯಾದ ಎಂಟು ದಿನಗಳ ನಂತರವೂ ಪ್ರೇಕ್ಷಕರ ಮೇಲೆ ಕಾಣುತ್ತಲೇ ಇದೆ. ಶುಕ್ರವಾರ ನಟ ಅಕ್ಷಯ್ ಕುಮಾರ್ ಅಭಿನಯದ ‘ಬಚ್ಚನ್ ಪಾಂಡೆ’ (Bachchan Pandey) ಚಿತ್ರ ಬಿಡುಗಡೆಯಾಗಿದ್ದರೂ, ವಿವೇಕ್ ಅಗ್ನಿಹೋತ್ರಿ ಅವರ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ 19.15 ಕೋಟಿ ರೂ.ಗಳಿಕೆ ಮಾಡಿದೆ. ಎರಡನೇ ವಾರದಲ್ಲೂ ಚಿತ್ರ ಬಾಕ್ಸ್ ಆಫೀಸ್ (The Kashmir Files Box Office Collection) ನಲ್ಲಿ ತನ್ನ ಹಿಡಿತವನ್ನು ಕಾಯ್ದುಕೊಂಡಿದೆ.
#TheKashmirFiles creates HISTORY… *Day 8* of #TKF [₹ 19.15 cr] is AT PAR with #Baahubali2 [₹ 19.75 cr] and HIGHER THAN #Dangal [₹ 18.59 cr], the two ICONIC HITS… #TKF is now in august company of ALL TIME BLOCKBUSTERS… [Week 2] Fri 19.15 cr. Total: ₹ 116.45 cr. #India biz. pic.twitter.com/sjLWXV78J9
— taran adarsh (@taran_adarsh) March 19, 2022
100 ಕೋಟಿ ರೂ.ಗಳ ಕ್ಲಬ್ ಗೆ ಶಾಮೀಲು
ಕಾಶ್ಮೀರ ಫೈಲ್ಸ್ ತನ್ನ ಬಂಪರ್ ಬಾಕ್ಸ್ ಆಫೀಸ್ ಕಲೆಕ್ಷನ್‌ನೊಂದಿಗೆ ಬಿಡುಗಡೆಯಾದ ಎಂಟನೇ ದಿನಕ್ಕೆ 100 ಕೋಟಿ ಕ್ಲಬ್‌ಗೆ ಸೇರಿಕೊಂಡಿದೆ. ಈ ಚಿತ್ರ ಇದುವರೆಗೆ ಒಟ್ಟು 116.45 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಬಿಡುಗಡೆಯಾದ ಎಂಟನೇ ದಿನದ ಗಳಿಕೆ ಬಗ್ಗೆ ಹೇಳುವುದಾದರೆ, ಚಿತ್ರ 19.15 ಕೋಟಿ ರೂ.ಗಳಿಕೆ ಮಾಡಿದೆ. ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ಪ್ರಭಾಸ್ ಅವರ ಸೂಪರ್ ಹಿಟ್ ಚಿತ್ರ ‘ಬಾಹುಬಲಿ 2’ ಬಿಡುಗಡೆಯಾದ ಎಂಟನೇ ದಿನಕ್ಕೆ 19.75 ಕೋಟಿ ಗಳಿಕೆ ಮಾಡಿತ್ತು. ಇನ್ನೊಂದೆಡೆ ಅಮೀರ್ ಖಾನ್ ಅಭಿನಯದ ‘ದಂಗಲ್’ (Dangal) ಬಾಕ್ಸ್ ಆಫೀಸ್ ಕಲೆಕ್ಷನ್ ಎಂಟನೆ ದಿನಕ್ಕೆ 18.59 ಕೋಟಿ ರೂ.ಗಳಷ್ಟಿತ್ತು.
ಇದನ್ನೂ ಓದಿ-RRR Ticket Price Hike! RRR ಬಿಡುಗಡೆಗೂ ಮುನ್ನ ಟಿಕೆಟ್ ದರದಲ್ಲಿ ಭಾರಿ ಏರಿಕೆ, ಏನಿದು ಹೊಸ ಸುದ್ದಿ!
ಚಿತ್ರವು ಎರಡನೇ ವಾರದಲ್ಲಿ 150 ಕೋಟಿ ಕ್ಲಬ್‌ಗೆ ಸುಲಭವಾಗಿ ಸೇರಿಕೊಳ್ಳಲಿದೆ ಎಂದು ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ (Taran Adarsh) ಭರವಸೆ ವ್ಯಕ್ತಪಡಿಸಿದ್ದಾರೆ. 'ದಿ ಕಾಶ್ಮೀರ್ ಫೈಲ್ಸ್' ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಿಗೂ ಡಬ್ ಆಗುತ್ತಿದೆ.
#TheKashmirFiles highlights...
⭐ Records its HIGHEST *single day total* on [second] Fri [₹ 19.15 cr]
⭐ Will comfortably cross ₹ 150 cr in Weekend 2
⭐ Advance bookings for [second] Sat and Sun are PHENOMENAL
⭐ Being dubbed in #Tamil, #Telugu, #Kannada and #Malayalam pic.twitter.com/QIfBj7kmcB— taran adarsh (@taran_adarsh) March 19, 2022
ಇದನ್ನೂ ಓದಿ-ಪಾಕ್ ಮಾಜಿ ಅಧ್ಯಕ್ಷ ಮುಷರಫ್ ಜೊತೆಗೆ ಬಾಲಿವುಡ್ ನಟ ಸಂಜಯ್ ದತ್..! ಫೋಟೋ ವೈರಲ್
ಈ ರಾಜ್ಯಗಳಲ್ಲಿ ಚಿತ್ರವನ್ನು ತೆರಿಗೆ ಮುಕ್ತ ಘೋಷಿಸಲಾಗಿದೆ
ಕಾಶ್ಮೀರಿ ಪಂಡಿತರ ಸ್ಥಳಾಂತರವನ್ನು ಕೇಂದ್ರದಲ್ಲಿ ಇಟ್ಟುಕೊಂಡು ನಿರ್ಮಿಸಲಾದ ಚಿತ್ರಕ್ಕೆ ದೇಶಾದ್ಯಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿಹಾರ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಕರ್ನಾಟಕ, ಹರಿಯಾಣ, ಉತ್ತರಾಖಂಡ, ತ್ರಿಪುರಾ, ಗೋವಾ ಮುಂತಾದ ರಾಜ್ಯಗಳಲ್ಲಿನ ಸರ್ಕಾರಗಳು ಈ ಚಿತ್ರವನ್ನು ತೆರಿಗೆ ಮುಕ್ತ ಘೋಷಿಸಿವೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಕೂಡ ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಇಂತಹ ಚಿತ್ರಗಳ ನಿರ್ಮಾಣ ಮುಂದುವರೆಯಬೇಕು ಎಂದಿದ್ದರು.
ಇದನ್ನೂ ಓದಿ-ಒಂದೇ ದಿನ ‘ಜೇಮ್ಸ್’ ಗಳಿಸಿದ್ದು ಬರೋಬ್ಬರಿ 30 ಕೋಟಿ ರೂಪಾಯಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.