ಜನವರಿ 22 ಕೋಟ್ಯಾಂತರ ಭಾರತೀಯರ ಕನಸು ನನಸಾಗುವ ದಿನ‌. ಅಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪ್ರತಿಷ್ಠಾಪನೆ ಆಗಲಿದೆ. ಈ ಸುಸಂದರ್ಭದಲ್ಲಿ ಸಿರಿ ಮ್ಯೂಸಿಕ್ ಅರ್ಪಿಸುವ ಹಾಗೂ ನಟಿ ರೂಪಿಕಾ ಅವರ ಗೆಜ್ಜೆ ಡ್ಯಾನ್ಸ್ ಸ್ಟುಡಿಯೋ ಸಾರಥ್ಯದಲ್ಲಿ ಮೂಡಿಬಂದಿರುವ "ಜಾನಕಿ ರಾಮ"  ಆಲ್ಬಂ ಸಾಂಗ್ ಇತ್ತೀಚೆಗೆ ಬಿಡುಗಡೆಯಾಯಿತು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Shivam Dube: ಟಿ20 ವಿಶ್ವಕಪ್‌ನಲ್ಲಿ ಶಿವಂ ದುಬೆ? ದ್ರಾವಿಡ್ ಮುಖ್ಯ ಸಂದೇಶ!


ಸುರಪುರದ ಶಾಸಕರಾದ ರಾಜುಗೌಡ, ಡಿ ಎಸ್ ಮ್ಯಾಕ್ಸ್ ನ ಎಂ ಡಿ ದಯಾನಂದ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ನಟಿ ಪ್ರಿಯಾಂಕ ಉಪೇಂದ್ರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಭಾ.ಮ.ಹರೀಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಪೊಲೀಸ್ ಅಧಿಕಾರಿ ಶಂಕರ್ ಸೇರಿದಂತೆ ಅನೇಕ ಗಣ್ಯರು ಸೇರಿ ಅದ್ದೂರಿಯಾಗಿ ಮೂಡಿಬಂದಿರುವ "ಜಾನಕಿ ರಾಮ"  ಆಲ್ಭಂ ಸಾಂಗ್ ಬಿಡುಗಡೆ ಮಾಡಿದರು. ಹಾಡನ್ನು ವೀಕ್ಷಿಸಿದ ಎಲ್ಲಾ ಗಣ್ಯರು ಮಾತನಾಡಿ, "ಈ ಹಾಡನ್ನು ನೋಡಿದಾಗ ಮೈ ರೋಮಾಂಚನವಾಯಿತು. ಇಂದು ಇಲ್ಲೇ ರಾಮನ ಪ್ರತಿಷ್ಠಾ ವೈಭವ ನೋಡಿದ ಹಾಗಾಯಿತು" ಇಂತಹ ಅದ್ಭುತ ಗೀತೆಯನ್ನು ಹೊರತಂದಿರುವ ಸಿರಿ ಮ್ಯೂಸಿಕ್ ಸುರೇಶ್ ಚಿಕ್ಕಣ್ಣ ಹಾಗೂ ರೂಪಿಕಾ ಅವರಿಗೆ ಧನ್ಯವಾದ ಎಂದರು.


ಇದನ್ನೂ ಓದಿ-Mahalakshmi Yog 2024: ಹತ್ತು ವರ್ಷಗಳ ಬಳಿಕ ಮಹಾಲಕ್ಷ್ಮೀ ರಾಜಯೋಗ ನಿರ್ಮಾಣ, ಈ ಜನರಿಗೆ ಪ್ರಾಪ್ತಿಯಾಗಲಿದೆ ಕುಬೇರ ನಿಧಿ!


ನಮ್ಮ ಗೆಜ್ಜೆ ಡ್ಯಾನ್ಸ್ ಸ್ಟುಡಿಯೋಸ್ ನ ಎಲ್ಲರ ಸಹಕಾರದಿಂದ ಈ ಹಾಡು ಮೂಡಿಬಂದಿದೆ. ನಮ್ಮ ಕನಸಿಗೆ ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಅವರು ಆಸರೆಯಾದರು. ಬೆಂಗಳೂರು ಸ್ಟುಡಿಯೋಸ್ ನಲ್ಲಿ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್ ನಲ್ಲಿ ಈ ಹಾಡನ್ನು ಚಿತ್ರಿಸಲಾಗಿದೆ.  ಅನಿರುದ್ದ್ ಜತಕರ್, ನಿರಂಜನ ದೇಶಪಾಂಡೆ ಈ ಹಾಡನಲ್ಲಿ ಅಭಿನಯಿಸಿ ನಮ್ಮ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ.ಅದ್ವೈತ್ ಶೆಟ್ಟಿ ನಿರ್ದೇಶಿಸಿರುವ ಈ ಹಾಡನ್ನು ಮನೋಜ್ ಸೌಗಂಧ್ ಬರೆದಿದ್ದಾರೆ.ನೀತು ನಿನಾದ್ ತಾವೇ ಹಾಡಿ,  ಸಂಗೀತವನ್ನೂ ನೀಡಿದ್ದಾರೆ. ನಾನು ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುವುದರ ಜೊತೆಗೆ,  ಲಿಖಿತ್ ಆಚಾರ್ ಅವರ ಜೊತೆಗೂಡಿ ನೃತ್ಯ ನಿರ್ದೇಶನ ಕೂಡ ಮಾಡಿದ್ದೇನೆ ಎಂದು ನಟಿ ರೂಪಿಕಾ ತಿಳಿಸಿದರು.


ಸಂಗೀತ ನಿರ್ದೇಶಕ ನೀತು ನಿನಾದ್, ನಿರ್ದೇಶಕ ಅದ್ವೈತ ಶೆಟ್ಟಿ, ನಟ ನಿರಂಜನ್ ದೇಶಪಾಂಡೆ "ಜಾನಕಿರಾಮ"ನ ಹಾಡಿನ ಬಗ್ಗೆ ಮಾಹಿತಿ ನೀಡಿದರು. 


ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಮಾತನಾಡಿ,"ಜಾನಕಿರಾಮ" ಆಲ್ಬಂ ಸಾಂಗ್ ಬಿಡುಗಡೆ ಮಾಡುತ್ತಿರುವುದಕ್ಕೆ ಸಂತೋಷವಾಗಿದೆ. ಎಲ್ಲರ ಸಹಕಾರದಿಂದ ಹತ್ತು ದಿನಗಳಲ್ಲಿ ಮುಗಿಯುವ ಚಿತ್ರೀಕರಣ ಒಂದೇ ದಿನದಲ್ಲಿ ಮುಗಿದಿದೆ. ಮುಂದೆ ಕೂಡ ನಮ್ಮ ಸಂಸ್ಥೆಯಿಂದ ಇಂತಹ ಅದ್ಭುತ ಗೀತೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು. ಸಮಾರಂಭಕ್ಕೆ ಆಗಮಿಸಿದ ಗಣ್ಯರಿಗೆ ಸುರೇಶ್ ಚಿಕ್ಕಣ್ಣ ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ