Janhavi kapoor on Kantara : ಥಿಯೇಟರ್‌ಗಳಲ್ಲಿ ಕ್ರಿಯೇಟ್‌ ಮಾಡಿದ್ದ ಹವಾ ಕಡಿಮೆಯಾದ್ರೂ ಸಹ ಓಟಿಟಿಯಲ್ಲಿ ದಿ ಡಿವೈನ್‌ ಬ್ಲಾಕ್ಬಸ್ಟರ್‌ ಸಿನಿಮಾ ಕಾಂತಾರ ಅಬ್ಬರಿಸುತ್ತಿದೆ. ಬಾಲಿವುಡ್‌ ನಟ ನಟಿಯರು ರಿಷಬ್‌ ಶೆಟ್ಟಿ ಸಿನಿಮಾಗೆ ಫಿದಾ ಆಗುತ್ತಿದ್ದಾರೆ. ಇದೀಗ ಬಿಟೌನ್‌ ಬೆಡಗಿ ನಟಿ ಜಾನ್ವಿ ಕಪೂರ್ ʼಕಾಂತಾರ'ವನ್ನು ವೀಕ್ಷಿಸಿದ್ದು, ರಿಷಬ್ ಶೆಟ್ಟಿ ನಟನೆ, ನಿರ್ದೇಶನ ನೋಡಿ ಅಚ್ಚರಿಗೊಂಡಿದ್ದು, ಸೂಪರ್‌ ಸರ್‌ ಅಂತ ಹಾಡಿ ಹೊಗಳಿದ್ದಾರೆ.


COMMERCIAL BREAK
SCROLL TO CONTINUE READING

ಹೌದು... ಚಿತ್ರಮಂದಿಗಳನ್ನ ದೇಗುಲವಾಗಿಸಿದ್ದ ಕಾಂತಾರ ಇದೀಗ ಓಟಿಟಿಯಲ್ಲಿ ಸೌಂಡ್‌ ಮಾಡುತ್ತಿದೆ. ಇಷ್ಟು ದಿನ ಬ್ಯುಸಿಯಾಗಿದ್ದ ಬಿಟೌನ್‌ ಮಂದಿ ಕಾಂತಾರ ವೀಕ್ಷಿಸುತ್ತಿದ್ದಾರೆ. ಇತ್ತೀಚಿಗೆ ಹೃತಿಕ್‌ ರೋಷನ್‌ ಸಿನಿಮಾ ನೋಡಿ ಸೂಪರ್‌ ಅಂದಿದ್ರು, ಅಲ್ಲದೆ, ಕಾರ್ತಿಕ್‌ ಅಯ್ಯನ್‌ ಕೂಡಾ ರಿಷಬ್‌ ಸಿನಿಮಾಗೆ ಫಿದಾ ಆಗಿದ್ರು. ಇದೀಗ ಅತಿಲೋಕ ಸುಂದರಿ ಶ್ರೀದೇವಿ ಮಗಳು ಜಾನ್ವಿ ಕನ್ನಡಿಗನ ಕಾಂತಾರ ನೋಡಿ ಮೂಕ ವಿಸ್ಮಿತಳಾಗಿದ್ದಾಳೆ.


ಇದನ್ನೂ ಓದಿ: ಪಠಾಣ್ ದೇಶ ಭಕ್ತಿ ಸಿನಿಮಾ : ಬಾಯ್ಕಾಟ್‌ ಅಂದವರಿಗೆ ಕಿಂಗ್‌ ಖಾನ್‌ ಉತ್ತರ..!


[[{"fid":"272540","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]ಅಷ್ಟೇ ಅಲ್ಲ, ಚಿತ್ರವನ್ನು ವೀಕ್ಷಿಸಿದ ನಂತರ, ಜಾನ್ವಿ ಕಪೂರ್ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಚಿತ್ರವನ್ನು ಹೊಗಳಿದ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದರು. ಸ್ಟೇಟಸ್‌ನಲ್ಲಿ, ʼಈ ವ್ಯಕ್ತಿಯನ್ನು ಹೊಗಳಲು ನನ್ನ ಬಳಿ ಪದಗಳಿಲ್ಲ. ಚಿತ್ರದಲ್ಲಿನ ನಿಮ್ಮ ಅದ್ಭುತ ಅಭಿನಯ ಅದ್ಭುತ, ಕಥೆ ನಿಜಕ್ಕೂ ಶ್ಲಾಘನೀಯ. ನನ್ನ ಕಡೆಯಿಂದ ನಿಮಗೆ ವಂದನೆಗಳುʼ ಅಂತ ರಿಷಬ್‌ ಶೆಟ್ಟಿ ಅವರನ್ನು ದಡಕ್‌ ಬೆಡಗಿ ಹೊಗಳಿದ್ದಾಳೆ. 


ʼಕಾಂತಾರʼ ಹಿಂದಿ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಡಿಸೆಂಬರ್ 9 ರಂದು ಬಿಡುಗಡೆಯಾಯಿತು. ಈ ಚಿತ್ರವನ್ನು ನೋಡಿದ ನಂತರ, ಎಲ್ಲಾ ಬಾಲಿವುಡ್ ಸೆಲೆಬ್ರಿಟಿಗಳು ಉತ್ತಮ ವಿಮರ್ಶೆಗಳನ್ನು ನೀಡಿದ್ದಾರೆ. ಶುಕ್ರವಾರ, ಜಾನ್ವಿ ಕಪೂರ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 'ಕಾಂತಾರ' ಮತ್ತು ರಿಷಬ್ ಶೆಟ್ಟಿ ಬಗ್ಗೆ ವಿಶೇಷ ಪೋಸ್ಟ್‌ ಅನ್ನು ಹಂಚಿಕೊಂಡಿದ್ದರು. ಕಾಂತಾರ ಕೇವಲ 16 ಕೋಟಿ ಬಜೆಟ್‌ನಲ್ಲಿ ತಯಾರಾದ ಸಿನಿಮಾ, ಇದೀಗ 400 ಕೋಟಿಗಳ ಬಂಪರ್ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, OTT ಪ್ಲಾಟ್‌ಫಾರ್ಮ್‌ನಲ್ಲೂ ಕಮಾಲ್‌ ಮಾಡುತ್ತಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.