ಪಠಾಣ್ ದೇಶ ಭಕ್ತಿ ಸಿನಿಮಾ : ಬಾಯ್ಕಾಟ್‌ ಅಂದವರಿಗೆ ಕಿಂಗ್‌ ಖಾನ್‌ ಉತ್ತರ..!

ದಿನದಿಂದ ದಿನಕ್ಕೆ ಪಠಾಣ್‌‌ ಕಾಂಟ್ರುವರ್ಸಿ ಲಿಸ್ಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೊನ್ನೆಯವರೆಗೂ ದೀಪಿಕಾ ಪಡುಕೋಣೆ ಬಿಕಿನಿ ಸದ್ದು ಮಾಡಿತ್ತು. ಅಲ್ಲದೆ, ಹಿಂದೂ ಸಂಘಟನೆಗಳು ಕೇಸರಿ ಕಲರ್‌ ಬಿಕಿನಿ ತೊಟ್ಟಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಪಠಾಣ್‌ ಬಾಯ್ಕಾಟ್‌ ಮಾಡೋಕೆ ಮುಂದಾಗಿದ್ರು. ಇದೀಗ, ಮುಸ್ಲಿಂ ಸಂಘಟನೆಗಳೂ ಸಹ ಪಠಾಣ್‌ ಸಿನಿಮಾ ವಿರುದ್ಧ ಧ್ವನಿ ಎತ್ತಿದ್ದು, ಬ್ಯಾನ್‌ ಮಾಡುವಂತೆ ಒತ್ತಾಯ ಮಾಡುತ್ತಿವೆ.

Written by - Krishna N K | Last Updated : Dec 18, 2022, 11:33 AM IST
  • ದಿನದಿಂದ ದಿನಕ್ಕೆ ಪಠಾಣ್‌‌ ಕಾಂಟ್ರುವರ್ಸಿ ಲಿಸ್ಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ.
  • ಮೊನ್ನೆಯವರೆಗೂ ದೀಪಿಕಾ ಪಡುಕೋಣೆ ಬಿಕಿನಿ ಸದ್ದು ಮಾಡಿತ್ತು.
  • ಎಲ್ಲಾ ವಿವಾದಗಳ ಕುರಿತು ಮೌನ ಮುರಿದಿರುವ ಶಾರುಖ್‌ ಖಾನ್‌ ಮಾತಿ ಚಾಟಿ ಬೀಸಿದ್ದಾರೆ.
ಪಠಾಣ್ ದೇಶ ಭಕ್ತಿ ಸಿನಿಮಾ : ಬಾಯ್ಕಾಟ್‌ ಅಂದವರಿಗೆ ಕಿಂಗ್‌ ಖಾನ್‌ ಉತ್ತರ..! title=

Shah Rukh Khan : ದಿನದಿಂದ ದಿನಕ್ಕೆ ಪಠಾಣ್‌‌ ಕಾಂಟ್ರುವರ್ಸಿ ಲಿಸ್ಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೊನ್ನೆಯವರೆಗೂ ದೀಪಿಕಾ ಪಡುಕೋಣೆ ಬಿಕಿನಿ ಸದ್ದು ಮಾಡಿತ್ತು. ಅಲ್ಲದೆ, ಹಿಂದೂ ಸಂಘಟನೆಗಳು ಕೇಸರಿ ಕಲರ್‌ ಬಿಕಿನಿ ತೊಟ್ಟಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಪಠಾಣ್‌ ಬಾಯ್ಕಾಟ್‌ ಮಾಡೋಕೆ ಮುಂದಾಗಿದ್ರು. ಇದೀಗ, ಮುಸ್ಲಿಂ ಸಂಘಟನೆಗಳೂ ಸಹ ಪಠಾಣ್‌ ಸಿನಿಮಾ ವಿರುದ್ಧ ಧ್ವನಿ ಎತ್ತಿದ್ದು, ಬ್ಯಾನ್‌ ಮಾಡುವಂತೆ ಒತ್ತಾಯ ಮಾಡುತ್ತಿವೆ.

ಸದ್ಯ ಎಲ್ಲಾ ವಿವಾದಗಳ ಕುರಿತು ಮೌನ ಮುರಿದಿರುವ ಶಾರುಖ್‌ ಖಾನ್‌, ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವ ನೆಪದಲ್ಲಿ ವಿರೋಧಿಗಳ ಮಾತಿಗೆ ಪ್ರತ್ಯುತ್ತರ ನೀಡಿದ್ದಾರೆ. ಯಸ್‌.... ಪಠಾಣ್‌ ವಿರುದ್ದ ಪಟಾಕಿ ಸಿಡಿದಂತೆ ಅದು ತಪ್ಪು.. ಇದು ತಪ್ಪು.. ಎನ್ನುತ್ತಿದ್ದ ಮಂದಿಗೆ ಬಾಲಿವುಡ್‌ ಬಾದ್‌ ಶಾ ಮಾತಿನ ಚಾಟಿ ಏಟು ನೀಡಿದ್ದಾರೆ. ಸೋಷಿಯಲ್‌ ಮಿಡಿಯಾದಲ್ಲಿ ಆಕ್ಟಿವ್‌ ಇರುವ ಖಾನ್‌ ತಮ್ಮ ಫ್ಯಾನ್ಸ್‌ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದ್ರು.

ಇದನ್ನೂ ಓದಿ: Avatar 2 Box Office Collection: ಬಾಕ್ಸ್ ಆಫೀಸ್‌ನಲ್ಲಿ ಅವತಾರ್ 2 ಅಬ್ಬರ

ಈ ವೇಳೆ ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ಶಾರುಖ್‌, ʼಪಠಾಣ್‌ ಕೂಡ ತುಂಬಾ ದೇಶಭಕ್ತಿ ಸಾರುವ ಸಿನಿಮಾ. ಆದ್ರೆ ಅದು ಆಕ್ಷನ್ ರೀತಿಯಲ್ಲಿʼ ಅಂತ ಉತ್ತರಿಸಿದ್ದಾರೆ. ಈ ಮಾತು ಕೇಸರಿ ಬಣ್ಣಕ್ಕೆ ಅವಮಾನ, ಆಶ್ಲೀಲ ಅಂತ ಹೇಳಿದ ವಿರೋಧಿಗಳಿಗೆ ನುಂಗಲಾರದ ತುತ್ತಾಗಿದೆ. ಮತ್ತೊಬ್ಬ ಅಭಿಮಾನಿ ಪಠಾಣ್‌ ಫಸ್ಟ್‌ ಡೇ ಕಲೆಕ್ಷನ್‌ ಎಷ್ಟಾಗಬಹುದು ಅಂತ ಕೇಳಿದ್ರು, ಇದಕ್ಕೆ ಖಾನ್‌, ನಾನು ಜ್ಯೋತಿಷಿ ಅಲ್ಲ, ನಿಮಗೆ ಮನರಂಜನೆ ನೀಡುವುದೇ ನನ್ನ ಕೆಲಸವಷ್ಟೇ ಅಂತ ಹೇಳಿದ್ರು.

ಶಾರುಖ್ ಮತ್ತು ದೀಪಿಕಾ ನಟನೆಯ ಪಠಾಣ್‌ 2023 ಜನವರಿ 25 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಪಠಾಣ್‌ಗೆ ಸಿದ್ಧಾರ್ಥ್ ಆನಂದ್ ಆಕ್ಷನ್‌ ಕಟ್‌ ಹೇಳಿದ್ದಾರೆ. ಆಕ್ಷನ್‌ ಕಮ್‌ ಥ್ರೀಲ್ಲರ್‌ ಸಿನಿಮಾದಲ್ಲಿ ಖಾನ್‌, ದೀಪ್ಸ್‌ ಜೊತೆ ಜಾನ್ ಅಬ್ರಹಾಂ ಕೂಡ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೊದಲ ಹಾಡು ಬೇಷರಂ ರಂಗ್ ಬಿಡುಗಡೆಯಾದ ನಂತರ ವಿವಾದಕ್ಕೆ ಒಳಗಾಗಿದ್ದು, ಬ್ಯಾನ್‌, ಬಾಯ್ಕಾಟ್‌ ಎಂಬ ಕೂಗಿಗೆ ಕಾರಣವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News