Janhvi Kapoor : ಬಿಟೌನ್‌ ಸುಂದರಿ ಜಾನ್ವಿ ಕಪೂರ್ ಆಗಾಗ ತಮ್ಮ ಅವ್ಯಾಸಗಳಿಂದ ಸಾಕಷ್ಟು ಟ್ರೋಲ್‌ಗೆ ಒಳಗಾಗುತ್ತಿರುತ್ತಾರೆ. ಇಂದು ಸಹ ಸುಂದರವಾದ ಬಟ್ಟೆ ತೊಟ್ಟು ವಿಮಾನ ನಿಲ್ದಾಣಕ್ಕೆ ಬಂದ ಚೆಲುವೆ ಕೈಯಲ್ಲಿ ದಿಂಬು ಹಿಡಿದು ಬಂದಿದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿತು. ಜಾನ್ವಿ ವಿಮಾನದಲ್ಲಿ ಪ್ರಯಾಣಿಸುವಾಗ ಆಗಾಗ್ಗೆ ದಿಂಬುಗಳನ್ನು ಒಯ್ಯುತ್ತಾರೆ ಅನ್ನೋದು ಕೆಲವು ಮಂದಿಗೆ ಗೊತ್ತಿಲ್ಲ. ಆದ್ರೆ, ವಿಮಾನದಲ್ಲಿ ಐಶಾರಾಮಿ ವರ್ಗದಲ್ಲಿ ಪ್ರಯಾಣಿಸಿವ ಜಾನ್ವಿಗೆ ದಿಂಬು ಯಾಕೆ ಬೇಕು..? ಎನ್ನುವುದೇ ಕುತೂಹಲಕಾರಿ.


COMMERCIAL BREAK
SCROLL TO CONTINUE READING

ಹೌದು.. ಶ್ರೀದೇವಿ ಮಗಳು ಜಾನ್ವಿ ಕಪೂರ್ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವ ಬಿಟೌನ್‌ ನಟಿಯರಲ್ಲಿ ಒಬ್ಬರು. ಬಟ್ಟೆಗಳಿಂದ ಹಿಡಿದು ತಮ್ಮ ಮಾತುಗಳಿಂದ ಟ್ರೋಲ್‌ಗೆ ಒಳಗಾಗುತ್ತಿರುತ್ತಾರೆ. ಇದೀಗ ದಿಂಬು ಒಯ್ಯುವುದು ಜಾನ್ವಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಆದ ಬೆನ್ನಲ್ಲೆ ನೆಟ್ಟಿಗುರ ಚಿತ್ರ ವಿಚಿತ್ರವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ.



ಇದನ್ನೂ ಓದಿ:  Raktaksha' Movie: 'ರಕ್ತಾಕ್ಷ' ಸಿನಿಮಾ ಟೈಟಲ್ ಟ್ರ್ಯಾಕ್ ನಲ್ಲಿ ವಸಿಷ್ಠ ಸಿಂಹ ಧ್ವನಿ : ಯುವ ನಾಯಕ ರೋಹಿತ್ ಗೆ ಚಿಟ್ಟೆ ಸಾಥ್ !


ಸಾಕಷ್ಟು ಟ್ರೋಲಿಂಗ್ ಎದುರಿಸುತ್ತಿರುವ ಜಾನ್ವಿ, ಜನರ ಮಾತಿನ ಬಗ್ಗೆ ಯಾವುತ್ತು ತಲೆ ಕೆಡಿಸಿಕೊಂಡಿಲ್ಲ. ಈ ಕುರಿತು ಸಂದರ್ಶನವೊಂದರಲ್ಲಿ ಟ್ರೋಲಿಂಗ್ ಬಗ್ಗೆ ಮಾತನಾಡುತ್ತಾ, ಏನ್‌ ಮಾಡಿದರೂ ಟ್ರೋಲ್ ಮಾಡ್ತಾರೆ, ಮಾಡಿದರೂ ಪರವಾಗಿಲ್ಲ ಅಂತ ಹೇಳಿಕೊಂಡಿದ್ದರು. ಇನ್ನು ವಿಮಾನನಿಲ್ದಾಣಕ್ಕೆ ದಿಂಬು ಜೊತೆ ಬಂದ ಜಾನ್ವಿ ಲುಕ್‌ ಸೂಪರ್‌ ಆಗಿತ್ತು. ನೀಲಿ ಹೂವಿನ ಉಡುಪಿನಲ್ಲಿ ಕ್ಯೂಟ್‌ ಆಗಿ ಕಾಣುತ್ತಿದ್ದರು. 


ಇನ್ನು ಸಿನಿಮಾ ವಿಚಾರವಾಗಿ ಹೇಳುವುದಾದರೆ ಸದ್ಯ ಜಾನ್ವಿ ಕಪೂರ್‌ ತೆಲುಗು ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ. ಜೂ. ಎನ್‌ಟಿಆರ್‌ ಮತ್ತು ಕೊರಟಾಲ ಶಿವ ಕಾಂಬಿನೇಷನ್‌ನ ʼದೀವರಾʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಜಾನ್ವಿ ಟಾಲಿವುಡ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜಾನ್ವಿ ತಾಯಿ ಶ್ರೀದೇವಿ ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಹಿರಿಯ ನಟ ನಂದಮೂರಿ ತಾರಕ ರಾಮರಾವ್‌ ಅವರ ಜೊತೆ ಹೆಚ್ಚಿನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಜಾನ್ವಿ ಅವರ ಮೊಮ್ಮಗ ಜೂ. ಎನ್‌ಟಿಆರ್‌ ಜೊತೆ ನಟಿಸಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ