Janhvi Kapoor shocking comment: ಜಾನ್ವಿ ಕಪೂರ್ ಅವರನ್ನು ಸ್ಟಾರ್ ಹೀರೋಯಿನ್ ಆಗಿ ನೋಡಬೇಕು ಎಂದು ಶ್ರೀದೇವಿ ಕನಸು ಕಂಡಿದ್ದರು. ಆದರೆ ಆ ಆಸೆ ಈಡೇರುವ ಮುನ್ನವೇ ಆಕೆ ಆಕಸ್ಮಿಕವಾಗಿ ಸಾವನ್ನಪ್ಪಿದರು.. ಜಾನ್ವಿ ಕಪೂರ್ 2018 ರ ಧಡಕ್ ಚಿತ್ರದ ಮೂಲಕ ನಾಯಕಿಯಾಗಿ ಹಿಂದಿಗೆ ಪಾದಾರ್ಪಣೆ ಮಾಡಿದರು.


COMMERCIAL BREAK
SCROLL TO CONTINUE READING

 ಅದರ ನಂತರ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದರು ಆದರೆ ಅವು ಭಾಕ್ಸಾಫಿಸ್‌ನಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಲಿಲ್ಲ. ಆದರೆ, ಜಾಹ್ನವಿ ಕಪೂರ್ ಕ್ರೇಜ್ ಮಾತ್ರ ಹೋಗಿಲ್ಲ. ಇದಲ್ಲದೆ, ಆಕೆಯ ಫಾಲೋವರ್ಸ್ ಎಂದಿಗಿಂತಲೂ ಹೆಚ್ಚಾಗಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಜಾನ್ವಿ ಕಪೂರ್ ತಮ್ಮ ಫೋಟೋಗಳನ್ನು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಾರೆ.


ಇದನ್ನೂ ಓದಿ-ಮಹೇಶ್ ಬಾಬು ಮಗಳು ಸಿತಾರಾ... ಈಗ ಯಾವ ತರಗತಿ ಓದುತ್ತಿದ್ದಾಳೆ ಗೊತ್ತಾ?


 ಈ ಮಧ್ಯೆ ಜಾನ್ವಿ ಕಪೂರ್ ಇತ್ತೀಚೆಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ನಟಿ ತನ್ನ ವೈಯಕ್ತಿಕ ವಿಷಯಗಳನ್ನು ಬಹಿರಂಗವಾಗಿ ಮಾತಾನಾಡಿದ್ದಾರೆ.. ಈ ಹಿಂದೆ ಜಾನ್ವಿ ಕಪೂರ್ ಶಿಖರ್ ಶಿಂಧೆ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವರದಿಗಳು ಬಂದಿದ್ದವು. ಶಿಖರ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಜಾನ್ವಿ ಕಪೂರ್ ಅವರೊಂದಿಗೆ ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಆದರೆ ಜಾನ್ವಿ ಕಪೂರ್ ಕೆಲವು ವರ್ಷಗಳ ನಂತರ ಶಿಖರ್ ಶಿಂಧೆ ಜೊತೆ ಬ್ರೇಕಪ್‌ ಮಾಡಿಕೊಂಡಿದ್ದರು.. ಇತ್ತೀಚೆಗಷ್ಟೇ ಈ ಕುರಿತು ಪ್ರತಿಕ್ರಿಯಿಸಿರುವ ಆಕೆ... ತನ್ನ ಜೀವನದಲ್ಲಿ ಒಮ್ಮೆ ಮಾತ್ರ ಪ್ರೀತಿಯಲ್ಲಿ ಫೇಲ್ ಆಗಿದ್ದು ನನಗೆ ಪ್ರತಿ ತಿಂಗಳು ನಿಯಮಿತವಾಗಿ ಪಿರಿಯಡ್ಸ್ ಆಗುತ್ತಿತ್ತು. ಆದರೆ ಬ್ರೇಕಪ್ ಆದ ನಂತರ ನನ್ನ ದೇಹದಲ್ಲಿ ಹಾರ್ಮೋನ್ ಚೇಂಜ್ ಆಗಿದ್ದು ಎರಡು ಮೂರು ತಿಂಗಳ ಕಾಲ ಆಗಿರಲಿಲ್ಲ ಎಂದು ಹೇಳಿದ್ದಾಳೆ.


ನನ್ನ ಮನಸ್ಸು ಯಾಕೆ ಆ ರೀತಿ ಯೋಚಿಸುತ್ತಿದೆ ಎಂದು ಗೊತ್ತಾಗದೆ ತುಂಬಾ ನೊಂದಿದ್ದೆ.. ಈಗ ಎಲ್ಲವೂ ಚೆನ್ನಾಗಿದೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.. ಜಾನ್ವಿಯ ವೃತ್ತಿಜೀವನದ ವಿಷಯಕ್ಕೆ ಬಂದರೆ, ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಎನ್‌ಟಿಆರ್ ಜೊತೆಗಿನ ದೇವರ ಚಿತ್ರದ ಜೊತೆಗೆ ರಾಮ್ ಚರಣ್ ಅವರ ಹೊಸ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ವರದಿಗಳಿವೆ. ಇವುಗಳ ಹೊರತಾಗಿ ಬಾಲಿವುಡ್ ನಲ್ಲಿ ಇನ್ನೂ ಎರಡು ಚಿತ್ರಗಳಿಗೆ ಈ ಚೆಲುವೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.


ಇದನ್ನೂ ಓದಿ-48 ವರ್ಷದ ಸ್ಟಾರ್ ಹೀರೋಯಿನ್.. 11 ಜನರ ಜೊತೆ ಅಫೇರ್.... ಇನ್ನೂ ಮದುವೆಯಾಗದೇ ಇರಲು ಆ ವ್ಯಕ್ತಿಯೇ ಕಾರಣ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.