ದಕ್ಷಿಣದ ಹಿಟ್ ನಿರ್ದೇಶಕ ಅಟ್ಲಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಯೋಗಿ ಬಾಬು ಸೇರಿಂದಂತೆ ದೊಡ್ಡ ತಾರಾಬಳಗವೇ ಇದೆ. ಈ ಸಿನಿಮಾದ ಗ್ಲಿಂಪ್ಸ್‌ ಹಾಗೂ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಸಖತ್‌ ರೆಸ್ಪಾನ್ಸ್‌ ಸಿಕ್ಕಿದೆ. ಶಾರುಖ್‌ ಖಾನ್‌ ವಿಭಿನ್ನ ಲುಕ್‌ ನೋಡಿ ಫ್ಯಾನ್ಸ್‌ ಮನಸೋತಿದ್ದಾರೆ.


COMMERCIAL BREAK
SCROLL TO CONTINUE READING

ಇನ್ನು ಈ ಸಿನಿಮಾದಲ್ಲಿ ಸುಮಾರು 6 ಹಾಡುಗಳಿದ್ದು, ಚಿತ್ರದ ಟೈಟಲ್‌ ಸಾಂಗ್‌ನಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಚಿತ್ರದ ಸ್ಟಾರ್‌ಕಾಸ್ಟ್  ಅತಿ ಹೆಚ್ಚು ಪ್ರಭಾವಶಾಲಿಯಾಗಿದ್ದು, ‘ಜವಾನ್’ ಸಿನಿಮಾ ಹಿರಿತೆರೆಯಲ್ಲಿ ಅವರ ‘ಪಠಾಣ್’ ಚಿತ್ರಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಲಿದೆ ಎನ್ನವ ನಿರೀಕ್ಷೆಯನ್ನು ಹುಟ್ಟುಹಾಕಿದೆ. 


Kiara Advani: ಮದುವೆಗೂ ಮುನ್ನವೇ ಗರ್ಭಿಣಿ ಆಗಲು ಬಯಸಿದ್ದರೇ ಈ ಖ್ಯಾತ ನಟಿ!?


ಇದೀಗ ಶಾರುಖ್‌ ಅವರು ನಟಿಸಿರುವ ಜವಾನ್‌ ಸಿನಿಮಾದ ಪೋಸ್ಟರ್‌ ಒಂದು ಅನಾವರಣಗೊಂಡಿದೆ. ಅದನ್ನು ಎಸ್‌ಆರ್‌ಕೆ ಹಂಚಿಕೊಂಡಿದ್ದು, "ದಿ ಸೌಂಡ್‌ ಆಫ್‌ ಜವಾನ್‌! ಹಾಡು ಇಂದು ಮಧ್ಯಾಹ್ನ 12 50ಕ್ಕೆ ಬಿಡುಗಡೆಯಾಗಲಿದೆ. ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಸೆಪ್ಟಂಬರ್‌ 7 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ" ಎಂದು ಕ್ಯಾಪ್ಶನ್ ನೀಡಿದ್ದಾರೆ.


ಶಾರುಖ್‌ ಹೊರತು ಪಡಿಸಿ ಈ ಸಿನಿಮಾದಲ್ಲಿ ಹತ್ತು ವಿಶೇಷ ಮುಖಗಳಿದ್ದು, ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದಲ್ಲದೇ ಮೂರು ಸೂಪರ್​ ಸ್ಟಾರ್​ಗಳು ಅಥಿತಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡು ರಂಜಿಸಲಿದ್ದಾರೆ. ಈಗಾಗಲೇ ಚಿತ್ರದ ಪ್ರಿವ್ಯೂ ಬಿಡುಗಡೆಯಾಗಿ ಸಾಕಷ್ಟು ಸದ್ದುಮಾಡುತ್ತಿದೆ. ಈ ನಡುವೆ ಸಿನಿಪ್ರಿಯರು ಬಹುನಿರೀಕ್ಷಿತ ಜವಾನ್‌ ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.. 


ಇದನ್ನೂ ಓದಿ-ವಾ...ವಾ...ವಾ...ವಾಮನ ಹಾಡು ಬಂತು....ಶೋಕ್ದಾರ್ ಧನ್ವೀರ್ ಮಾಸ್ ಎಂಟ್ರಿ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.