ವಿಜಯ್ ಅಭಿನಯದ 'ಲಿಯೋ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಬದಲಿಸುತ್ತಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ಹಿಂದೆಂದೂ ಕಾಣದ ಗಳಿಕೆಯನ್ನು ಫ್ರಿ-ಬುಕ್ಕಿಂಗ್ ಮೂಲಕ ಮಾಡಿದೆ. ಈ ಸಂದರ್ಭದಲ್ಲಿ ಮೊದಲ ದಿನ ಜಾಗತಿಕವಾಗಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರಗಳ ಪಟ್ಟಿ ಹೊರಬಿದ್ದಿದೆ. ಈ ಅಂಕಿ ಅಂಶವು ಪೂರ್ವವೀಕ್ಷಣೆ ಪ್ರದರ್ಶನಗಳನ್ನು ಒಳಗೊಂಡಿದೆ. 


COMMERCIAL BREAK
SCROLL TO CONTINUE READING

ಪ್ರಮುಖ ವಿಶ್ಲೇಷಕರ ವರದಿಯ ಪ್ರಕಾರ, ಪ್ರಭಾಸ್-ರಾಜಮೌಳಿ ಅವರ ಬಾಹುಬಲಿ 2 ಜಾಗತಿಕವಾಗಿ ಟಾಪ್ ಗಳಿಕೆ ಮಾಡಿದೆ. ಮೊದಲ ದಿನವೇ ವಿಶ್ವದಾದ್ಯಂತ 201 ಕೋಟಿ ರೂ. ಕಲೆಕ್ಷನ್‌ ಮಾಡಿ ಮೊದಲನೇ ಸ್ಥಾನದಲ್ಲಿದೆ. ನಂತರ ಎರಡನೇ ಸ್ಥಾನ RRR ಮತ್ತು ಮೂರನೇ ಸ್ಥಾನ KGF2 ಚಿತ್ರಕ್ಕಿದೆ. 


ಇದನ್ನೂ ಓದಿ-ಆಸ್ಪತ್ರೆ ಬೆಡ್‌ ಮೇಲೆ ಗಂಭೀರ ಸ್ಥಿತಿಯಲ್ಲಿ ʼಗಂಗೆ ಬಾರೆ ತುಂಗೆ ಬಾರೆʼ ನಟಿ..! ಏನಾಯ್ತು ಸುನೈನಾಗೆ


ಚಲನಚಿತ್ರಗಳ ಪಟ್ಟಿ 


1) ಬಾಹುಬಲಿ 2 - 201 ಕೋಟಿ
2) RRR - 190 ಕೋಟಿ
3) ಕೆಜಿಎಫ್ 2 - 162 ಕೋಟಿ
4) ಲಿಯೋ ~ 148 ಕೋಟಿ *
5) ಜವಾನ್ - 128 ಕೋಟಿ


ಸದ್ಯ ಹಿಂದಿಭಾಷೆಯಲ್ಲಿ ಬಿಡುಗಡೆಯಾಗುವ ಮೂಲಕ ಈ ಪಟ್ಟಿಯಲ್ಲಿ ಲಿಯೋ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ವಿಜಯ್‌ ನಟಿಸಿದ ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಓಪನಿಂಗ್ ಪಡೆದ ಮೊದಲ ಚಿತ್ರವಾಯಿತು. ಲಿಯೋ ಮೊದಲ ದಿನವೇ ಸುಮಾರು 148 ಕೋಟಿ ಗಳಿಸಿದೆ. ಅಂದಾಜಿನ ಪ್ರಕಾರ, ಚಿತ್ರವು ಕೇರಳದಲ್ಲಿ 12 ಕೋಟಿ ಮತ್ತು ತಮಿಳುನಾಡಿನಲ್ಲಿ ಸುಮಾರು 35 ಕೋಟಿ ಗಳಿಸಿದೆ. 


ಇದನ್ನೂ ಓದಿ-Allu Arjun: ಅಲ್ಲು ಅರ್ಜುನ್ ರಿಜೆಕ್ಟ್ ಮಾಡಿದ ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳಿವು..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.