Allu Arjun: ಅಲ್ಲು ಅರ್ಜುನ್ ರಿಜೆಕ್ಟ್ ಮಾಡಿದ ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳಿವು..!

Allu Arjun Rejected Movies List: ಕೆಲವೊಮ್ಮೆ ಸ್ಟಾರ್ ಹೀರೋಗಳಿಗೆ ಒಳ್ಳೆ ಸ್ಕ್ರಿಪ್ಟ್ ಬಂದರೂ ಆ ಪಾತ್ರಗಳಿಗೆ ಸೆಟ್ ಆಗಲ್ಲ ಅಥವಾ ತಮ್ಮ ಬ್ಯುಸಿ ಶೆಡ್ಯೂಲ್ ನಿಂದಾಗಿ ರಿಜೆಕ್ಟ್ ಮಾಡುತ್ತಾರೆ. ಅದೇ ರೀತಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಅನಿವಾರ್ಯ ಕಾರಣಗಳಿಂದ ತಮಗೆ ಬಂದ ಕಥೆಗಳನ್ನು ಕೈ ಬಿಟ್ಟಿದ್ದಾರೆ. ಅವುಗಳಲ್ಲಿ ಕೆಲವು ಬ್ಲಾಕ್ ಬಸ್ಟರ್ ಹಿಟ್ ಆದವು. 

Written by - Chetana Devarmani | Last Updated : Oct 21, 2023, 07:17 AM IST
  • ರಾಷ್ಟ್ರಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಅಲ್ಲು ಅರ್ಜುನ್
  • ಅಲ್ಲು ಅರ್ಜುನ್ ರಿಜೆಕ್ಟ್ ಮಾಡಿದ ಹಿಟ್ ಸಿನಿಮಾಗಳಿವು
  • ಪುಷ್ಪ 2 ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿರುವ ಅಲ್ಲು ಅರ್ಜುನ್
Allu Arjun: ಅಲ್ಲು ಅರ್ಜುನ್ ರಿಜೆಕ್ಟ್ ಮಾಡಿದ ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳಿವು..! title=
Allu Arjun

Allu Arjun : ಪುಷ್ಪ ಚಿತ್ರದಲ್ಲಿನ ನಟನೆಗಾಗಿ ರಾಷ್ಟ್ರಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸದ್ಯಕ್ಕೆ ಫುಲ್ ಸ್ವಿಂಗ್ ಆಗಿದ್ದಾರೆ. ಪುಷ್ಪ 2 ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ನಿರೀಕ್ಷೆಗಳಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಸುಕುಮಾರ್ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವವರ ಪಟ್ಟಿಗೆ ಸೇರಿರುವ ಅಲ್ಲು ಅರ್ಜುನ್ ತಮ್ಮ ವೃತ್ತಿ ಜೀವನದಲ್ಲಿ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಮಿಸ್ ಮಾಡಿಕೊಂಡಿದ್ದಾರೆ. ಕಾರಣ ಏನೇ ಇರಲಿ.. ಅಲ್ಲು ಅರ್ಜುನ್ ತಿರಸ್ಕರಿಸಿದ ಆ ಸಿನಿಮಾಗಳು ಸೂಪರ್ ಹಿಟ್ ಆದವು.‌ 

ಅರ್ಜುನ್ ರೆಡ್ಡಿ : ಅರ್ಜುನ್ ರೆಡ್ಡಿ ವಿಜಯ್ ದೇವರಕೊಂಡ ಅವರನ್ನು ಟಾಪ್ ಹೀರೋ ಮಾಡಿದ ಚಿತ್ರ. ಆದರೆ ಈ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಮೊದಲು ಅಲ್ಲು ಅರ್ಜುನ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ. ಕಾರಣ ತಿಳಿದಿಲ್ಲ, ಆದರೆ ಅಲ್ಲು ಅರ್ಜುನ್ ಈ ಕಥೆಯನ್ನು ತಿರಸ್ಕರಿಸಿದ್ದಾರೆ. ಅದರ ನಂತರ ವಿಜಯ್ ದೇವರಕೊಂಡ ಅವರ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈ ಚಿತ್ರದ ಮೂಲಕ ವಿಜಯ್ ದೇವರಕೊಂಡ‌ ಸ್ಟಾರ್ ಆದರು.

ಇದನ್ನೂ ಓದಿ : Anirudh Ravichander: ʼಲಿಯೋʼಗಾಗಿ ಅನಿರುದ್ಧ್ ಪಡೆದ ಸಂಭಾವನೆ ಎಷ್ಟು ಗೊತ್ತಾ? 

ಭದ್ರ : ಮಾಸ್ ಮಹಾರಾಜ ರವಿತೇಜ-ಬೋಯಪತಿ ಶ್ರೀನು ಕಾಂಬಿನೇಷನ್ ಸಿನಿಮಾ ಭದ್ರ. ಮೀರಾ ಜಾಸ್ಮಿನ್, ಮುರಳಿ ಕೃಷ್ಣ, ಪ್ರಕಾಶ್ ರಾಜ್, ಸುನೀಲ್ ಮುಂತಾದವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಫ್ಯಾಕ್ಷನ್ ಕಮ್ ಲವ್ ಎಂಟರ್‌ಟೈನರ್ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಟ್ ಆಯಿತು. ಆದರೆ ಈ ಸಿನಿಮಾ ಮೊದಲು ಅಲ್ಲು ಅರ್ಜುನ್ ಅವರನ್ನು ನಾಯಕ ಎಂದು ಭಾವಿಸಲಾಗಿತ್ತು. ಆದರೆ ನಂತರ ಅದು ಸಾಧ್ಯವಾಗಿರಲಿಲ್ಲ.

100% ಲವ್ : ನಾಗ ಚೈತನ್ಯ ಮತ್ತು ತಮನ್ನಾ ನಾಯಕರಾಗಿ ಸುಕುಮಾರ್ ನಿರ್ದೇಶನದ ಚಿತ್ರ 100% ಲವ್. 2011ರಲ್ಲಿ ತೆರೆಕಂಡ ಈ ಸಿನಿಮಾ ಸೂಪರ್ ಹಿಟ್ ಆಯಿತು. ರೊಮ್ಯಾಂಟಿಕ್ ಪಾತ್ರಗಳಲ್ಲಿ ನಟಿಸಲು ಅಲ್ಲು ಅರ್ಜುನ್‌ಗೆ ಆಸಕ್ತಿ ಇರಲಿಲ್ಲ ಎಂಬುದು ಗೊತ್ತೇ ಇದೆ. ಆ ನಂತರ ಅಕ್ಕಿನೇನಿ ಸಿನಿಮಾ ನಾಗ ಚೈತನ್ಯ ಪಾಲಾಯಿತು. 

ಗೀತ ಗೋವಿಂದಂ : ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ ಗೀತ ಗೋವಿಂದಂ. ಪರಶುರಾಮ್ ನಿರ್ದೇಶನ ಮಾಡಿದ್ದಾರೆ. ಈ ಕಥೆಯನ್ನು ಮೊದಲು ಕೇಳಿದ ಅಲ್ಲು ಅರ್ಜುನ್ ಅವರು ಪಾತ್ರಕ್ಕೆ ಸೂಕ್ತವಲ್ಲ ಎಂದು ತಿರಸ್ಕರಿಸಿದರು ಎಂದು ತಿಳಿದಿದೆ. ಆ ನಂತರ ವಿಜಯ್ ದೇವರಕೊಂಡ ಜೊತೆ ಸೇರಿ ಬ್ಲಾಕ್ ಬಸ್ಟರ್ ಹಿಟ್ ಆಯಿತು. ವಿಜಯ್ ದೇವರಕೊಂಡ-ರಶ್ಮಿಕಾ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಹಿಟ್ ಆಗಿದೆ.

ಇದನ್ನೂ ಓದಿ : BBK10: ಬಿಗ್‌ಬಾಸ್‌ ಮನೆಯಲ್ಲಿ ಮ್ಯೂಸಿಕ್ ಕ್ಲಾಸ್..! ʼಸಂಗೀತʼಕ್ಕೆ ಅಭಿಮಾನಿಗಳು ಫುಲ್‌ ಫಿದಾ 

ಲೈಗರ್‌ : ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶನದ ಚಿತ್ರ ಲೈಗರ್‌. ರೌಡಿ ಸ್ಟಾರ್ ವಿಜಯ್ ದೇವರಕೊಂಡ ಅಭಿನಯದ ಈ ಚಿತ್ರ ಡಿಸಾಸ್ಟರ್ ಆಯಿತು. ಬಾಕ್ಸಿಂಗ್ ಹಿನ್ನೆಲೆಯಲ್ಲಿ ತಯಾರಾದ ಈ ಸಿನಿಮಾವನ್ನು ಪ್ರೇಕ್ಷಕರು ತಿರಸ್ಕರಿಸಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಭಾರೀ ನಿರೀಕ್ಷೆಗಳಿದ್ದವು, ಆದರೆ ಆ ನಿರೀಕ್ಷೆಯನ್ನು ಮುಟ್ಟುವಲ್ಲಿ ವಿಫಲವಾಗಿದೆ. ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಿದ್ದು, ರಮ್ಯಾ ಕೃಷ್ಣ ಮತ್ತು ಮೈಕ್ ಟೈಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಪೂರಿ ಜಗನ್ನಾಥ್ ಅವರು ಮೊದಲು ಕಥೆಯನ್ನು ಅಲ್ಲು ಅರ್ಜುನ್ ಅವರಿಗೆ ಹೇಳಿದ್ದರು ಎಂದು ತಿಳಿದಿದೆ. ಅನಿವಾರ್ಯ ಕಾರಣಗಳಿಂದ ಚಿತ್ರವನ್ನು ತಿರಸ್ಕರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News