ತೆಲುಗಿನಲ್ಲಿ ಭಾರೀ ಸದ್ದು ಮಾಡಿದ್ದ ನ್ಯಾಚುರಲ್‌ ಸ್ಟಾರ್‌ ನಾನಿ ಅಭಿನಯದ ʼಜರ್ಸಿʼ ಸಿನಿಮಾ ಬಾಲಿವುಡ್‌ಗೆ ರಿಮೇಕ್‌ ಆಗಿದೆ. ಈ ಸಿನಿಮಾದಲ್ಲಿ ನಟ ಶಾಹಿದ್‌ ಕಪೂರ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಒಂದೆಡೆ ಈ ಚಿತ್ರ ಬಿಡುಗಡೆಗೆ ವೀಕ್ಷಕರು ಕಾತುರದಿಂದ ಕಾಯುತ್ತಿದ್ದರೆ, ಇನ್ನೊಂದೆಡೆ ಸಿನಿಮಾ ರಿಲೀಸ್‌ ಡೇಟ್‌ನ್ನು ಮತ್ತೆ ಮುಂದೂಡಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: 'ಬಂಬೂ ಸವಾರಿ'ಗೆ ಸುನಿ, ಕಿಟ್ಟಿ, ಯಂಗ್ ಟೈಗರ್ ಸಾಥ್


ಈ ಹಿಂದೆ ಸಿನಿಮಾದ ಬಿಡುಗಡೆ ದಿನಾಂಕ ಡಿಸೆಂಬರ್ 2021ಕ್ಕೆ ನಿಗದಿಯಾಗಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ 2022ರ ಏಪ್ರಿಲ್ 14 ರಂದು ಬಿಡುಗಡೆ ಮಾಡುವುದಾಗಿ ನಿರ್ಧರಿಸಲಾಗಿತ್ತು. ಇದೀಗ ಮತ್ತೆ ಮುಂದೂಡಲಾಗಿದ್ದು, ಏಪ್ರಿಲ್ 22 ರಂದು ಥಿಯೇಟರ್‌ಗಳಿಗೆ ಬರಲಿದೆ ಎಂದು ಸಿನಿಮಾ ತಯಾರಕರು ತಿಳಿಸಿದ್ದಾರೆ. 


ಕನ್ನಡದ ರಾಕಿಂಗ್‌ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್‌-2 ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಸಿನಿಮಾಗಳಿಗೆ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. 


ಇದನ್ನು ಓದಿ: KGF Chapter 2 First review: ಭಾರತೀಯ ಚಿತ್ರರಂಗದ ಕಿರೀಟ ಎಂದ ಚಿತ್ರ ವಿಮರ್ಶಕ..!


ಚಲನಚಿತ್ರ ನಿರ್ಮಾಪಕ ಅಮನ್ ಗಿಲ್ ಮಾತನಾಡಿ, “ಜರ್ಸಿ ಸಿನಿಮಾ ನಿರ್ಮಾಣದ ಸಂದರ್ಭದಲ್ಲಿ ನಾವು ನಮ್ಮ ಕಣ್ಣೀರಿನ ಜೊತೆ ರಕ್ತವನ್ನು ಹರಿಸಿದ್ದೇವೆ. ಈ ಸಿನಿಮಾ ವ್ಯಾಪಕವಾಗಿ ಜನರನ್ನು ತಲುಪಬೇಕೆಂದು ಬಯಸುತ್ತೇವೆ. ಹೀಗಾಗಿ ಜರ್ಸಿ ಸಿನಿಮಾ  ಏಪ್ರಿಲ್ 22 ರಂದು ಬಿಡುಗಡೆಯಾಗಲಿದೆ" ಎಂದು ಹೇಳಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.