Jerusha In Smileguru Rakshith Film: ಸ್ಯಾಂಡಲ್‌ವುಡ್‌ನಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡ ಬೆಡಗಿ ಜೆರುಶಾ ಕ್ರಿಸ್ಟೋಫರ್ ಮೊದಲನೆಯ ಬಾರಿಗೆ ನಾಯಕಿಯಾಗಿ ನಟಿಸಲಿದ್ದಾರೆ. ನಟಿ ಜೆರುಶಾ ಈ ಹಿಂದೆ ಕಿಚ್ಚ ಸುದೀಪ್‌ ಅಭಿನಯದ ‘ವೀರ ಮದಕರಿ’ ಸಿನಿಮಾದಲ್ಲಿ ಬಾಲ ಕಲಾವಿದೆಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಚಿತ್ರರಂಗದಲ್ಲಿ ಮಾತ್ರವಲ್ಲದೇ ಜಾಹೀರಾತುಗಳು ಮತ್ತು ರಂಗಭೂಮಿಯಲ್ಲಿಯೂ ಕೂಡ ಛಾಪು ಮೂಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ನಟಿ ಜೆರುಶಾ ಕ್ರಿಸ್ಟೋಫರ್ ಇದೀಗ ಡೈರೆಕ್ಟರ್‌ ಮಹೇಶ್ ಬಾಬು ನಿರ್ದೇಶನದ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಹೆಜ್ಜೆಹಾಕಲು ರೆಡಿಯಾಗಿದ್ದಾರೆ. ನಟ ಸ್ಮೈಲ್ ಗುರು ರಕ್ಷಿತ್ ನಾಯಕನಾಗಿ ನಟಿಸಲಿರುವ ಚಿತ್ರವೊಂದರಲ್ಲಿ ಜೆರುಶಾ ಈ ಯುವನಟನಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಮಹೇಶ್‌ ಬಾಬು ರಕ್ಷಿತ್ ಹೊಸ ಸಿನಿಮಾವನ್ನು ಈಗಾಗಲೇ ಅನೌನ್ಸ್ ಮಾಡಿದ್ದು, ಇದೀಗ ಈ ಯುವನಟಿ ಜೆರುಶಾ ಅವರನ್ನು  ಲಾಂಚ್ ಮಾಡುತ್ತಿದ್ದಾರೆ.


ಇದನ್ನೂ ಓದಿ: 50 ಲಕ್ಷ ಗೆದ್ದರೂ‌‌ ಕೈಗೆ ಸಿಕ್ಕಿದ್ದು ಮಾತ್ರ ಇಷ್ಟೇ ದುಡ್ಡು: ಕಾರ್ತಿಕ್‌ ಮಹೇಶ್‌ ಬಿಚ್ಚಿಟ್ರು ಬಿಗ್‌ ಬಾಸ್‌ ಹಣದ ಅಸಲಿ ಕತೆ!


ನಟ ರಕ್ಷಿತ್ ಈ ಹಿಂದೆ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳಲ್ಲಿ ಮತ್ತು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಸ್ಮೈಲ್ ಗುರು ಎಂದು ಹೆಸರುವಾಸಿಯಾಗಿದ್ದಾರೆ. ಇನ್ನೂ ನಟಿ ಜೆರುಶಾ ಕ್ರಿಸ್ಟೋಫರ್‌ಗೂ ಕೂಡ ಬಾಲ್ಯದಿಂದ ನಟನೆ ಮಾಡುತ್ತಿರುವ ಕಾರಣ ಅಭಿನಯ ಹೊಸತೇನು ಅಲ್ಲ. ಇದೀಗ ಈ ನಟ ಯುವ ನಟ ಹಾಗೂ ಯುವ ನಟಿ ಇಬ್ಬರು ಮಹೇಶ್‌ ಬಾಬು ನಿರ್ದೇಶನದ ಸಿನಿಮಾದಲ್ಲಿ ಬೆಳ್ಳಿತೆರೆ ಮೇಲೆ ಮಿಂಚಲಿದ್ದಾರೆ.


ಡೈರೆಕ್ಟರ್‌ ಮಹೇಶ್‌ ಬಾಬು ಇದಕ್ಕೂ ಮುಂಚೆ ಮೆರವಣಿಗೆ ಸಿನಿಮಾ ಮೂಲಕ ಐಂದ್ರಿತಾ ರೇ, ಚಿರು ಸಿನಿಮಾ ಮೂಲಕ ಕೃತಿ ಕರಬಂಧ, ಅಜಿತ್ ಚಿತ್ರದ ಮೂಲಕ ನಿಕ್ಕಿ ಗಲ್ರಾನಿ, ಕ್ರೇಜಿ ಬಾಯ್ ಮೂಲಕ ಆಶಿಕಾ ರಂಗನಾಥ್ ಹೀಗೆ ಹಲವಾರು ನಟಿಯರನ್ನು ಸ್ಯಾಂಡಲ್‌ವುಡ್‌ನಲ್ಲಿ ಪರಿಚಯಿಸಿದವರು, ಇದೀಗ ನಟಿ ಜೆರುಶಾನಾ ಲಾಂಚ್‌ ಮಾಡಿದ್ದಾರೆ. ಈ ಚಿತ್ರವನ್ನು ಚೇತನ್ ಮತ್ತು ಅನುರಾಗ್ ನಿರ್ಮಾಣ ಮಾಡುತ್ತಿದ್ದು, ಅನೂಪ್ ಸೀಳಿನ್ ಮ್ಯೂಸಿಕ್‌ ಹಾಗೂ ಸತ್ಯ ಛಾಯಾಗ್ರಾಹಣ ಇರಲಿದೆ. ಅಂದಹಾಗೆ, ನಿರ್ದೇಶಕ ಮಹೇಶ್ ಬಾಬು ಹೊಸ ಕಥೆಗೆ ಶೀರ್ಷಿಕೆ ಫೈನಲ್ ಮಾಡಬೇಕಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ